ಸಾರಾಂಶ
ಪ್ರಸ್ತುತ ತಂತ್ರಾಜ್ಞಾನದ ಬಳಕೆ ಭೂಮಾಪಕರಿಗೆ ಅನಿರ್ವವಾಗಿದೆ
ಕನ್ನಡಪ್ರಭ ವಾರ್ತೆ ಮೈಸೂರು
ಆಧುನಿಕ ತಂತ್ರಾಜ್ಞಾನ ವೃದ್ಧಿಸಿಕೊಳ್ಳಲು ಅನುಕೂಲವಾಗುವಂತೆ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಭೂಮಾಪಕರಿಗೆ ಇಲಾಖೆಯಲ್ಲಿ ಬಳಸಲಾಗುತ್ತಿರುವ ಡಿಜಿಪಿಎಸ್ ಆಧಾರಿತ ರೋವರ್ ಉಪಕರಣದ ತರಬೇತಿ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭೂ ದಾಖಲಗಳ ಜಂಟಿ ನಿರ್ದೇಶಕ ಪಿ. ಶ್ರೀನಿವಾಸ್ ತಿಳಿಸಿದರು.ಮೈಸೂರು ತಾಲೂಕಿನ ಹಡಜನ ಗ್ರಾಮದಲ್ಲಿರುವ ಭೂಮಾಪನ ತರಬೇತಿ ಕೇಂದ್ರದಲ್ಲಿ ಪ್ರಾಚಾರ್ಯರಾಗಿ ಅಧಿಕಾರ ವಹಿಸಿಕೊಂಡು ಮಾತನಾಡಿದ ಅವರು, ಪ್ರಸ್ತುತ ತಂತ್ರಾಜ್ಞಾನದ ಬಳಕೆ ಭೂಮಾಪಕರಿಗೆ ಅನಿರ್ವವಾಗಿದೆ ಎಂದು ಹೇಳಿದರು.ಭೂದಾಖಲೆಗಳ ಉಪ ನಿರ್ದೇಶಕಿ ಕೆ. ರಮ್ಯಾ, ಸಹಾಯಕ ನಿರ್ದೇಶಕರಾದ ಎಂ. ಮಂಜುನಾಥ್, ಶಿವಕುಮಾರ್, ಅಧೀಕ್ಷಕರಾದ ಎಂ.ವಿ. ನಾಗೇಶ್, ಮಲ್ಲಿಕ್ ಕುಮಾರ್, ಪರ್ಯಾವೇಕ್ಷಕರಾದ ರಮೇಶ್, ಜಿ. ಲೋಕೇಶ್, ಅನಿಲ್ ಕೆ. ಅಂಥೋನಿ, ಸ್ವಾಮಿ, ಬೀರೇಗೌಡ, ಕೀರ್ತಿಕುಮಾರ್, ತಲಕಾಡು ಮಹದೇವು, ನಾಗರಾಜು, ಭೂಮಾಪಕರಾದ ಎಂ.ಕೆ. ಪ್ರಕಾಶ್, ಕಂಚಿನಕೆರೆ ದೇವರಾಜು, ಮಹದೇವಸ್ವಾಮಿ, ಡಿ.ಆರ್. ಜಗ್ಗು, ಶಶಿಧರ್ ಮೂರ್ತಿ, ವಾಸು ಮೊದಲಾದವರು ಇದ್ದರು.