ತಾಲೂಕಿನ ಹಡವನಹಳ್ಳಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷೆಯಾಗಿ ಚಿಕ್ಕಮ್ಮ ಬಸವರಾಜು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕನ್ನಡಪ್ರಭ ವಾರ್ತೆ ತುರುವೇಕೆರೆ
ತಾಲೂಕಿನ ಹಡವನಹಳ್ಳಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷೆಯಾಗಿ ಚಿಕ್ಕಮ್ಮ ಬಸವರಾಜು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಶುಕ್ರವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನ ಆಕಾಂಕ್ಷಿಯಾಗಿ ಚಿಕ್ಕಮ್ಮ ಬಸವರಾಜು ಮಾತ್ರ ನಾಮಪತ್ರ ಸಲ್ಲಿಸಿದ್ದರು. ಹಾಗಾಗಿ ಚುನಾವಣಾಧಿಕಾರಿಗಳಾಗಿ ಆಗಮಿಸಿದ್ದ ತೋಟಗಾರಿಕಾ ಇಲಾಖಾ ತಾಲೂಕು ಸಹಾಯಕ ನಿರ್ದೇಶಕ ಸುರೇಶ್ ರವರು ಚಿಕ್ಕಮ್ಮ ಬಸವರಾಜು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆಂದು ಘೋಷಿಸಿದರು. ಉಪಾಧ್ಯಕ್ಷರಾಗಿ ಸರೋಜಮ್ಮನವರು ಮುಂದುವರೆದಿದ್ದಾರೆ. ಒಟ್ಟು 13 ಸದಸ್ಯರ ಬಲವಿರುವ ಈ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷರ ಚುನಾವಣೆಗೆ 7 ಮಂದಿ ಮಾತ್ರ ಹಾಜರಿದ್ದರು. ನೂತನ ಅಧ್ಯಕ್ಷೆ ಚಿಕ್ಕಮ್ಮ ಬಸವರಾಜುರವರನ್ನು ಪಂಚಾಯಿತಿ ಸದಸ್ಯರಾದ ಸುಧಾ ರಂಗಸ್ವಾಮಿ, ನೇತ್ರಾವತಿ ಸಂತೋಷ್, ಶಂಕರಪ್ಪ, ಕಾಂತರಾಜು, ಯೋಗೀಶ್, ಸರೋಜಮ್ಮ, ಗ್ರಾಮ ಮುಖಂಡರಾದ ಅಪ್ಪಸಂದ್ರದ ರಂಗಸ್ವಾಮಿ, ಚಾಕುವಳ್ಳಿ ಸಂಪತ್ ಕುಮಾರ್, ಜನತಾ ಕಾಲೋನಿ ಬಸವರಾಜು, ಲವೇಂದ್ರ, ಚೇತನ್, ನವೀನ್, ಎಚ್.ಡಿ.ಬಸವರಾಜು. ಲಕ್ಕಮ್ಮ, ನರಸಿಂಹಮೂರ್ತಿ, ಲಕ್ಷ್ಮಮ್ಮ ದಾನಪ್ಪ ಸೇರಿದಂತೆ ಹಲವಾರು ಮಂದಿ ಅಭಿನಂದಿಸಿದರು.