ಸಾರಾಂಶ
Fa.gu.Halakatti, vachanas
ಕನ್ನಡಪ್ರಭ ವಾರ್ತೆ ಕೊಡೇಕಲ್
ಮಾತೋಶ್ರೀ ನಿಂಬೆಮ್ಮ ಪದವಿ ಕಾಲೇಜಿನಲ್ಲಿ ಡಾ. ಫ.ಗು. ಹಳಕಟ್ಟಿ ಅವರ ಜಯಂತಿ ಆಚರಿಸಲಾಯಿತು.ಈ ವೇಳೆ ಫ.ಗು. ಹಳಕಟ್ಟಿ ಅವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ, ಪೂಜೆ ಸಲ್ಲಿಸಿದ ಪ್ರಾಚಾರ್ಯ ಡಾ. ಜಗದೀಶ ನೂಲಿನವರ ಮಾತನಾಡಿ, ಹಲವಾರು ಕಡೆಗಳಲ್ಲಿ ಹರಿದು ಹಂಚಿ ಹೋಗಿದ್ದ ವಚನಕಾರರ ವಚನಗಳನ್ನು, ತಾಡೋಲೆಗಳನ್ನು ಸಂಶೋಧಿಸಿ, ಸಂಗ್ರಹಿಸಿ ಅವುಗಳನ್ನು ಕಾಪಾಡಿ ಸಮಗ್ರ ವಚನ ಸಾಹಿತ್ಯವನ್ನು ಉಳಿಸಿ, ಬೆಳಿಸಿದ ಕೀರ್ತಿ ಡಾ. ಫ.ಗು. ಹಳಕಟ್ಟಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು. ಈ ವೇಳೆ ಇಸ್ಮೆಲ್, ಶೇಖರಯ್ಯ, ವಿದ್ಯಾರ್ಥಿಗಳು ಇದ್ದರು. ---------
ಫೋಟೊ: 3ವೈಡಿಆರ್3ಕೊಡೇಕಲ್ ಸಮೀಪದ ಮಾತೋಶ್ರೀ ನಿಂಬೆಮ್ಮಪದವಿ ಕಾಲೇಜಿನಲ್ಲಿ ಫ.ಗು. ಹಳಕಟ್ಟಿಯವರ ಜಯಂತಿಯನ್ನು ಆಚರಿಸಲಾಯಿತು.