ಸಾರಾಂಶ
1980ರಿಂದ ಸ್ನೇಹಿತರಾದ ಮಾಜಿ ಹಾಲಪ್ಪ ಆಚಾರ ಸಹಕಾರ ಕ್ಷೇತ್ರದಲ್ಲಿ ಒಳ್ಳೆ ಕೆಲಸ ಮಾಡುತ್ತಾ ಇದ್ದರು. ಆಗ ಮಸಬಹಂಚಿನಾಳ ಸೊಸೈಟಿ ಬೆಳೆಸಿದರು. 1996-97ರಲ್ಲಿ ನಾನು ವಸತಿ, ನಗರಾಭಿವೃದ್ಧಿ ಸಚಿವ ಆಗಿದ್ದೆ. ಆಗ ಲೋಕಸಭೆ ಚುನಾವಣೆಗೆ ನಿಂತು ಸಂಸದ ಆದೆ. ಆ ವೇಳೆ ಆಗ ಆರ್‌ಡಿಸಿಸಿ ಬ್ಯಾಂಕಿನ ವ್ಯವಸ್ಥೆ ಸರಿಯಾಗಿಲ್ಲ ಎಂದು ಹಾಲಪ್ಪ ಆಚಾರ ನನ್ನ ಗಮನಕ್ಕೆ ತಂದರು.
ಕುಕನೂರು: ಮುಚ್ಚುವ ಹಂತದಲ್ಲಿದ್ದ ಆರ್‌ಡಿಸಿಸಿ ಬ್ಯಾಂಕ್ ಬಗ್ಗೆ ಹಾಲಪ್ಪ ಆಚಾರ್ ಕಳಕಳಿ ವ್ಯಕ್ತಪಡಿಸಿ ನನಗೆ ಬ್ಯಾಂಕ್ ಪುನರ್ ಸ್ಥಾಪನೆ ಕುರಿತು ತಿಳಿಸಿದ ಪರಿಣಾಮ ಬ್ಯಾಂಕಿಗೆ ಮರುಜೀವ ಬಂತು ಎಂದು ಸಿಎಂ ಆರ್ಥೀಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.
ಪಟ್ಟಣದಲ್ಲಿ ಆರ್‌ಡಿಸಿಸಿ ಬ್ಯಾಂಕ್ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ನಾನು ಸಹಕಾರಿ ಕ್ಷೇತ್ರದಲ್ಲಿ ಬೆಳೆದವನು ಅಲ್ಲ. ನಾನು ರಾಜಕೀಯ ಕ್ಷೇತ್ರದಿಂದ ಸಮಾಜ ಸೇವೆಗೆ ಮುಂದಾದವನು. 1980ರಿಂದ ಸ್ನೇಹಿತರಾದ ಮಾಜಿ ಹಾಲಪ್ಪ ಆಚಾರ ಸಹಕಾರ ಕ್ಷೇತ್ರದಲ್ಲಿ ಒಳ್ಳೆ ಕೆಲಸ ಮಾಡುತ್ತಾ ಇದ್ದರು. ಆಗ ಮಸಬಹಂಚಿನಾಳ ಸೊಸೈಟಿ ಬೆಳೆಸಿದರು. 1996-97ರಲ್ಲಿ ನಾನು ವಸತಿ, ನಗರಾಭಿವೃದ್ಧಿ ಸಚಿವ ಆಗಿದ್ದೆ. ಆಗ ಲೋಕಸಭೆ ಚುನಾವಣೆಗೆ ನಿಂತು ಸಂಸದ ಆದೆ. ಆ ವೇಳೆ ಆಗ ಆರ್‌ಡಿಸಿಸಿ ಬ್ಯಾಂಕಿನ ವ್ಯವಸ್ಥೆ ಸರಿಯಾಗಿಲ್ಲ ಎಂದು ಹಾಲಪ್ಪ ಆಚಾರ ನನ್ನ ಗಮನಕ್ಕೆ ತಂದರು. ಈ ಬ್ಯಾಂಕ್ ಮುಚ್ಚುವ ಹಂತಕ್ಕೆ ಬಂದಿತ್ತು. ಆಗ ಎಸ್.ಎಸ್. ಪಾಟೀಲ್ ಸಹಕಾರಿ ಸಚಿವರಾಗಿದ್ದರು. ಪಾಟೀಲ್ ಬಳಿ ಹಾಲಪ್ಪ ಆಚಾರ ಕರೆದುಕೊಂಡು ಹೋಗಿ, ಮುಚ್ಚುವ ಹಂತದಲ್ಲಿ ಇದ್ದ ಆರ್‌ಡಿಸಿಸಿ ಬ್ಯಾಂಕ್ ಬಗ್ಗೆ ಪ್ರಸ್ತಾಪಿಸಿದೆ. ಆಗಿನ ಶಾಸಕ ಹಂಪನಗೌಡ ಬಳಿ ಹಾಲಪ್ಪ ಆಚಾರ ಅವರನ್ನು ಬ್ಯಾಂಕಿಗೆ ಅಧ್ಯಕ್ಷರನ್ನಗಿ ಮಾಡಲು ಕಳಕಳಿ ವ್ಯಕ್ತಪಡಿಸಿದ್ದೆ. ಹಲವರನ್ನು ವಿರುದ್ಧ ಹಾಕಿಕೊಂಡು ಹಾಲಪ್ಪ ಆಚಾರ ಅವರನ್ನು ಅಧ್ಯಕ್ಷರಾಗಿ ಮಾಡಿದೆವು. 14 ವೋಟ್ ಬಂದಿದ್ದವು. ಹಾಲಪ್ಪ ಆಚಾರ ಅಧ್ಯಕ್ಷತೆಯಲ್ಲಿ ಬ್ಯಾಂಕ್ ಅಭಿವೃದ್ಧಿ ಆಯಿತು. ಸದ್ಯ ₹6 ಕೋಟಿ ಬ್ಯಾಂಕಿನಿಂದ ನಿವ್ವಳ ಲಾಭ ಇದೆ ಎಂದರು.ಡಿಸಿಸಿ ಬ್ಯಾಂಕನ್ನು ಕೊಪ್ಪಳ ಹಾಗೂ ರಾಯಚೂರಿನಿಂದ ಬೇರ್ಪಡಿಸಬೇಕು ಎಂಬ ಪ್ರಸ್ತಾವನೆ ಸದ್ಯಕ್ಕಿದೆ. ಜನರ ಸೇವೆಗೆ ಅನುಕೂಲ ಆಗುವ ನಿಟ್ಟಿನಲ್ಲಿ ಕೆಲಸ ಮಾಡೋಣ. ರಾಜಕೀಯ ಮುಕ್ತ ವಾಗಿ ಸಹಕಾರಿ ಕ್ಷೇತ್ರ ಕಾರ್ಯ ಮಾಡಬೇಕು. ಕಣಗಿನಹಾಳದದಿಂದ ರಾಷ್ಟ್ರಾದ್ಯಂತ ಸಹಕಾರ ಕ್ಷೇತ್ರದ ಬೆಳವಣಿಗೆ ಆಗಿದೆ ಎಂದರು.
ಸಹಕಾರಿ ಭಾರತೀಯ ರಾಷ್ಟ್ರೀಯ ಮಾಜಿ ಅಧ್ಯಕ್ಷ ರಮೇಶ ವೈದ್ಯ, ಸಹಕಾರಿ ಸಂಘದ ಜಿಲ್ಲಾ ಯೂನಿಯನ್ ಅಧ್ಯಕ್ಷ ಶೇಖರಗೌಡ ಮಾಲಿಪಾಟೀಲ್ ಮಾತನಾಡಿದರು.ಆರ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷ ವಿಶ್ವನಾಥ ಪಾಟೀಲ್, ನಿರ್ದೇಶಕ ಬಸವರಾಜ ಗೌರಾ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಐ.ಎಸ್. ಗಿರಡ್ಡಿ, ತಹಸೀಲ್ದಾರ ಎಚ್.ಪ್ರಾಣೇಶ, ಉಪಾಧ್ಯಕ್ಷ ಶಿವಶಂಕರಗೌಡ ಪಾಟೀಲ್, ರಾಜೇಂದ್ರಕುಮಾರ ಶೆಟ್ಟರ್, ಶೇಖರಗೌಡ ಉಳ್ಳಾಗಡ್ಡಿ, ವೀರನಗೌಡ ಬಳೂಟಗಿ, ಬಸವನಗೌಡ ತೊಂಡಿಹಾಳ, ಬಿ.ಎಂ. ಶಿರೂರು, ಬಸವರಾಜ ಉಳ್ಳಾಗಡ್ಡಿ, ಕೆರಿಬಸಪ್ಪನಿಡಗುಂದಿ, ಕಳಕಪ್ಪಕಂಬಳಿ, ಚಂದ್ರಶೇಖರಯ್ಯ ಹಿರೇಮಠ, ಶಿವಕುಮಾರ ನಾಗಲಾಪುರಮಠ, ಬ್ಯಾಂಕ್ ಮ್ಯಾನೇಜರ್ ಶಿಲ್ಪಾ ಅರಕೇರಿ ಇದ್ದರು.