ಸಾರಾಂಶ
ಕನ್ನಡಪ್ರಭ ವಾರ್ತೆ ಸರಗೂರುಗ್ರಾಮಗಳ ಅಭಿವೃದ್ಧಿಗೆ ಗ್ರಾಮ ಪಂಚಾಯಿತಿಗಳು ಶಕ್ತಿಕೇಂದ್ರ ಇದ್ದ ಹಾಗೆ, ಗ್ರಾಮಗಳ ಅಭಿವೃದ್ಧಿಗೆ ಗ್ರಾಪಂ ಮಟ್ಟದಲ್ಲಿ ಸದಸ್ಯರ ಯೋಜನೆಗಳೆ ಅಂತಿಮ. ತಮ್ಮ ವಾರ್ಡ್ ಗಳ ಅಭಿವೃದ್ಧಿಗೆ ಪ್ರತಿ ಸದಸ್ಯರು ಶ್ರಮಿಸುತ್ತಾರೆ. ವಾರ್ಡ್ ನಿರ್ವಹಣೆ ಜವಾಬ್ದಾರಿ ಅವರ ಮೇಲಿದೆ ಎಂದು ಶಾಸಕರು, ಅರಣ್ಯ ವಸತಿ ಮತ್ತು ವಿಹಾರಧಾಮ ಸಂಸ್ಥೆಗಳ ಅಧ್ಯಕ್ಷ ಅನಿಲ್ ಚಿಕ್ಕಮಾದು ತಿಳಿಸಿದರು. ತಾಲೂಕಿನ ಹಂಚೀಪುರ ಗ್ರಾಪಂ ನೂತನ ಕಟ್ಟಡ, ಗ್ರಾಪಂ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ನೂತನ ಕಟ್ಟಡ ಉದ್ಘಾಟಿಸಿದ ಬಳಿಕ ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಕ್ಷೇತ್ರದ ಅಭಿವೃದ್ಧಿಗೆ ಶಾಸಕರು ಶಕ್ತಿಕೇಂದ್ರವಾದ ವಿಧಾನಸೌಧದಲ್ಲಿ ಚರ್ಚಿಸಿ, ಅನುದಾನ ತರುತ್ತಾರೆ. ಅದೇ ಮಾದರಿಯಲ್ಲಿ ಸದಸ್ಯರು ತಮ್ಮ ಶಕ್ತಿಕೇಂದ್ರವಾದ ಗ್ರಾಪಂನಿಂದ ವಾರ್ಡ್ ಗಳ ಅಭಿವೃದ್ಧಿಗೆ ಅನುದಾನ ತಂದು ನಿರ್ವಹಣೆ ಮಾಡುತ್ತಾರೆ. ತಮ್ಮ ವಾರ್ಡ್ನಲ್ಲಿನ ರಸ್ತೆ, ಚರಂಡಿ, ವಿದ್ಯುತ್ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡುತ್ತಾರೆ. ಗ್ರಾಪಂನಲ್ಲಿಯೂ ನಾನಾ ಯೋಜನೆಗಳಿದ್ದು, ಅದನ್ನು ಸದಸ್ಯರು ಕಾರ್ಯರೂಪಕ್ಕೆ ತರಬೇಕು ಎಂದು ಅವರು ಸಲಹೆ ನೀಡಿದರು. ಹಂಚೀಪುರ ಮಠಾಧ್ಯಕ್ಷರಾದ ಚನ್ನಬಸವ ಸ್ವಾಮೀಜಿ, ದಡದಹಳ್ಳಿ ಮಠಾಧ್ಯಕ್ಷರಾದ ಷಡಕ್ಷರಿ ಸ್ವಾಮೀಜಿ ಆಶೀರ್ವಚನ ನೀಡಿದರು. ಪಂಚಾಯಿತಿ ಅಧ್ಯಕ್ಷೆ ರುಕ್ಮಿಣಿ ಪುಟ್ಟಯ್ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಕಾಟವಾಳು ವೀರಭದ್ರಪ್ಪ, ಬಸವ ಬಳಗದ ಅಧ್ಯಕ್ಷ ಹಂಚೀಪುರ ಗಣಪತಿ, ಗೌಡಿಕೆ ತಮ್ಮಯ್ಯಪ್ಪ, ಶಿವಣ್ಣ, ಮಾದೇವಪ್ಪ, ಅಕ್ರಮ ಸಕ್ರಮ ಸಮಿತಿ ಸದಸ್ಯ ಎಸ್.ಎಸ್. ಪ್ರಭುಸ್ವಾಮಿ, ಮೈಮುಲ್ ನಿರ್ದೇಶಕ ಕೆ. ಈರೇಗೌಡ, ಗ್ರಾಮೀಣ ಮಹೇಶ್, ಪುಟ್ಟಣ್ಣ, ಮಹದೇವಸ್ವಾಮಿ, ಪ್ರಕಾಶ್, ಉಪಾಧ್ಯಕ್ಷ ಎಂ. ನಟರಾಜು, ತಾಪಂ ಇಒ ಡಿ.ಎಸ್. ಪ್ರೇಮ್ ಕುಮಾರ್, ಸದಸ್ಯರಾದ ಎ. ಚಂದ್ರಶೇಖರ್, ಎಂ. ಗೀತಾದೇವರಾಜಸ್ವಾಮಿ, ಡಿ.ಎಸ್. ಜಯರಾಜು, ಕರಿಗೌಡ, ಮಣಿ ನಾಗರಾಜು, ಮಂಜುಳಾ ಬಸವಣ್ಣ, ಮಂಜುಳಾ ಶಿವರಾಜು, ನಾಗರಾಜು, ಸತೀಶ್, ಶಿವಮ್ಮನಾಗಣ್ಣ, ಶೋಭಾಶಿವಲಿಂಗ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ. ಚನ್ನಪ್ಪ, ಕಾರ್ಯದರ್ಶಿ ನಾಗರಾಜು, ಡಿ.ಸಿ. ಸಿದ್ದಪ್ಪ, ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ದೇವರಾಜು, ಉಮೇಶ್, ದಡದಹಳ್ಳಿ ದೇವರಾಜಸ್ವಾಮಿ, ಡಿ. ಸಂಜಯ್, ಎಂಜಿನಿಯರ್ ಸುಗಂಧರಾಜು, ಬಿಲ್ ಕಲೆಕ್ಟರ್ ಸ್ವಾಮಿ, ಎಸ್ಡಿಎ ಎಸ್.ವಿ. ಗಜೇಂದ್ರ, ಮಾಜಿ ಅಧ್ಯಕ್ಷರು, ಸದಸ್ಯರು, ಗ್ರಾಮಸ್ಥರು ಇದ್ದರು.-----------------
;Resize=(128,128))
;Resize=(128,128))
;Resize=(128,128))
;Resize=(128,128))