ಕೈಕೊಟ್ಟ ವಿದ್ಯುತ್‌: ರೇಷ್ಮೆ ಹರಾಜು ಸ್ಥಗಿತ

| Published : Jul 28 2024, 02:05 AM IST

ಕೈಕೊಟ್ಟ ವಿದ್ಯುತ್‌: ರೇಷ್ಮೆ ಹರಾಜು ಸ್ಥಗಿತ
Share this Article
  • FB
  • TW
  • Linkdin
  • Email

ಸಾರಾಂಶ

ಚನ್ನಪಟ್ಟಣ: ರೇಷ್ಮೆ ಮಾರುಕಟ್ಟೆಯಲ್ಲಿ ವಿದ್ಯುತ್ ಸರಬರಾಜು ಆಗದ ಕಾರಣ ಹರಾಜು ಸ್ಥಗಿತಗೊಳಿಸಿದ್ದನ್ನು ಖಂಡಿಸಿ ರೇಷ್ಮೆ ಬೆಳೆಗಾರರು ಹಾಗೂ ರೀಲರ್‌ಗಳು ಬೆಂಗಳೂರು-ಮೈಸೂರು ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸಿದರು.

ಚನ್ನಪಟ್ಟಣ: ರೇಷ್ಮೆ ಮಾರುಕಟ್ಟೆಯಲ್ಲಿ ವಿದ್ಯುತ್ ಸರಬರಾಜು ಆಗದ ಕಾರಣ ಹರಾಜು ಸ್ಥಗಿತಗೊಳಿಸಿದ್ದನ್ನು ಖಂಡಿಸಿ ರೇಷ್ಮೆ ಬೆಳೆಗಾರರು ಹಾಗೂ ರೀಲರ್‌ಗಳು ಬೆಂಗಳೂರು-ಮೈಸೂರು ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸಿದರು.

ನಗರದ ರೇಷ್ಮೆ ಮಾರುಕಟ್ಟೆಯಲ್ಲಿ ವಿದ್ಯುತ್ ಕೈಕೊಟ್ಟ ಕಾರಣ ರೇಷ್ಮೆಗೂಡು ಹರಾಜು ಅರ್ಧಕ್ಕೆ ಸ್ಥಗಿತಗೊಂಡಿತ್ತು. ಸುಮಾರು ಅರ್ಧ ತಾಸು ಕಾದ ಬೆಳೆಗಾರರು ಹಾಗೂ ರೀಲರ್‌ಗಳು ಮಾರುಕಟ್ಟೆ ಅಧಿಕಾರಿಗಳ ಬೇಜವಾಬ್ದಾರಿ ವಿರುದ್ಧ ಆಕೋಶಗೊಂಡು ರಸ್ತೆ ತಡೆಗೆ ಮುಂದಾದರು.

ಮಾರುಕಟ್ಟೆಯಲ್ಲಿ ವಿದ್ಯುತ್ ಕೈಕೊಟ್ಟರೆ ಯುಪಿಎಸ್ ಬಳಸಿಕೊಂಡು ಹರಾಜು ಮುಂದುವರಿಸಬಹುದು. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಯುಪಿಎಸ್ ಕೂಡ ಇಲ್ಲ ಎಂದು ಆಕ್ರೊಶ ವ್ಯಕ್ತಪಡಿಸಿ, ರಸ್ತೆ ತಡೆಗೆ ಮುಂದಾದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಪುರ ಪೊಲೀಸ್ ಠಾಣೆ ಪೊಲೀಸರು ರಸ್ತೆ ತಡೆ ನಡೆಸದಂತೆ ರೈತರ ಮನವೊಲಿಸಿದರು.

ರೀಲರ್‌ಗಳ ಪಟ್ಟು:

ರೇಷ್ಮೆ ಬೆಳೆಗಾರರು ರಸ್ತೆ ತಡೆ ನಿಲ್ಲಿಸಿದ ನಂತರ ಹರಾಜು ಪ್ರಕ್ರಿಯೆ ಆರಂಭಿಸಲು ಮುಂದಾಗುತ್ತಿದ್ದಂತೆ ಹರಾಜು ಪ್ರಕ್ರಿಯೆಯಿಂದ ದೂರ ಉಳಿಯಲು ರೀಲರ್‌ಗಳು ಮುಂದಾದರು. ಇಲ್ಲಿರುವ ಬೆರಳೆಣಿಕೆ ಅಧಿಕಾರಿಗಳು ಇಷ್ಟಬಂದ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ರೈತರಿಗಾಗಲಿ, ರೀಲರ್‌ಗಳಿಗಾಗಲಿ ಯಾವೊಂದು ಸೌಲಭ್ಯಗಳು ದೊರೆಯುತ್ತಿಲ್ಲ. ಈ ಬಗ್ಗೆ ಸಾಕಷ್ಟು ಬಾರಿ ದೂರು ನೀಡಲಾಗಿದೆ. ಆದರೆ, ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಆದ ಕಾರಣ ನಾವು ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗುವುದಿಲ್ಲ ಎಂದು ಪಟ್ಟು ಹಿಡಿದರು.

ಸಮಸ್ಯೆ ಬಗೆಹರಿಸುವ ಭರವಸೆ:

ಸ್ಥಳದಲ್ಲಿ ಹಾಜರಿದ್ದ ಪೊಲೀಸ್ ಅಧಿಕಾರಿಗಳು ಮಾರುಕಟ್ಟೆಯ ಅಧಿಕಾರಿಗಳ ಜತೆ ಮಾತನಾಡಿ ಮುಂದೆ ಇಂತಹ ಸಮಸ್ಯೆಗಳು ಉದ್ಬವಿಸದಂತೆ ಎಚ್ಚರಿಕೆ ವಹಿಸುವಂತೆ ಹಾಗೂ ಅಗತ್ಯ ಸೌಲಭ್ಯಗಳನ್ನು ಒದಗಿಸಿಕೊಡುವಂತೆ ಸೂಚಿಸಿದ್ದ ಹಿನ್ನೆಲೆಯಲ್ಲಿ ರೀಲರ್‌ಗಳು ಹರಾಜಿನಲ್ಲಿ ಪಾಲ್ಗೊಂಡರು.

ಪೋಟೊ೨೭ಸಿಪಿಟಿ೪:

ಚನ್ನಪಟ್ಟಣ ನಗರದ ರೇಷ್ಮೆ ಮಾರುಕಟ್ಟೆ ಮುಂದೆ ಪ್ರತಿಭಟನೆ ನಡೆಸಲು ಮುಂದಾಗಿದ್ದ ರೀಲರ್‌ಗಳು ಹಾಗೂ ರೇಷ್ಮೆ ಬೆಳೆಗಾರರು.