ಓಡಿಸ್ಸಾ ಕ್ರೈಂ ಬ್ರಾಂಚ್‌ಗೆ ರಾಜ್ಯದ ಮುಧೋಳ ಶ್ವಾನಗಳ ಹಸ್ತಾಂತರ

| Published : Oct 12 2025, 01:00 AM IST

ಸಾರಾಂಶ

ಈಶಾನ್ಯ ರಾಜ್ಯವಾದ ಓಡಿಸ್ಸಾಕ್ಕೆ ಅಪರಾಧ ಪತ್ತೆ ಹಚ್ಚಲು ರಾಜ್ಯದ ಮುಧೋಳ ಶ್ವಾನಗಳು ಸೇರ್ಪಡೆಯಾಗಿವೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆಈಶಾನ್ಯ ರಾಜ್ಯವಾದ ಓಡಿಸ್ಸಾಕ್ಕೆ ಅಪರಾಧ ಪತ್ತೆ ಹಚ್ಚಲು ರಾಜ್ಯದ ಮುಧೋಳ ಶ್ವಾನಗಳು ಸೇರ್ಪಡೆಯಾಗಿವೆ.

ತಿಮ್ಮಾಪೂರದ ಮುಧೋಳ ಶ್ವಾನ ಸಂಶೋಧನಾ ಹಾಗೂ ಮಾಹಿತಿ ಕೇಂದ್ರದಲ್ಲಿ ಮುಧೋಳ ಶ್ವಾನ ಕೇಂದ್ರದ ಮುಖ್ಯಸ್ಥ ಡಾ। ಎಸ್.ವಿ.ಮುಕುರ್ತಿಹಾಳ ನೇತೃತ್ವದಲ್ಲಿ ಓಡಿಸ್ಸಾದ ಕ್ರೈಂ ಬ್ಯಾಂಚ್ ಅಧಿಕಾರಿಗಳಿಗೆ 5 ಮುಧೋಳ ಶ್ವಾನಗಳನ್ನು (4 ಗಂಡು, ೧ ಹೆಣ್ಣು) ಹಸ್ತಾಂತರಿಸಲಾಗಿದೆ. ಈ ಶ್ವಾನಗಳು ಓಡಿಸ್ಸಾದಲ್ಲಿ ಮಾದಕ ದ್ರವ್ಯ, ಅಪರಾಧಿಗಳ ಪತ್ತೆಯಲ್ಲಿ ಸಹಾಯ ಮಾಡಲಿವೆ. ಓಡಿಸ್ಸಾದ ಶ್ವಾನ ತರಬೇತಿ ಕೇಂದ್ರದಲ್ಲಿ ತರಬೇತಿ ಬಳಿಕ ಶ್ವಾನಗಳು ಕರ್ತವ್ಯಕ್ಕೆ ಹಾಜರಾಗಲಿವೆ.

ಈ ಹಿಂದೆ ಮನ್ ಕಿ ಬಾತ್‌ನಲ್ಲಿ ಮುಧೋಳ ನಾಯಿಗಳ ಬಗ್ಗೆ ಪ್ರಧಾನಿ ಮೋದಿ ಪ್ರಸ್ತಾಪ ಮಾಡಿದ್ದರು. ಬಳಿಕ ಮುಧೋಳ ನಾಯುಗಳು ಮತ್ತಷ್ಟು ಜನಪ್ರಿಯಗೊಂಡಿದ್ದವು. ಮೊದಲು ಭಾರತೀಯ ಸೇನೆಗೆ ಸೇರ್ಪಡೆಯಾಗಿದ್ದ ಮುಧೋಳ ಶ್ವಾನಗಳು ಬಿಎಸ್.ಎಫ್, ಸಿಎಸ್.ಎಫ್, ಸಿಐಎಸ್.ಎಫ್, ಮೀರತನ ಆರ್.ವಿ.ಎಸ್ ಸೇರಿದಂತೆ ರಾಜ್ಯದ ಪೊಲೀಸ್‌ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿವೆ.