ಅಂಗರಗುಡ್ಡೆಯಲ್ಲಿ ಹನುಮಾನ್ ಚಾಲೀಸಾ ಧ್ಯಾನ ಕಾರ್ಯಕ್ರಮ

| Published : Jun 19 2024, 01:02 AM IST

ಸಾರಾಂಶ

ಹನುಮಾನ್ ಚಾಲೀಸಾದ ಒಳ ನೋಟ. ಮಹತ್ವ, ಪ್ರಾಣ ಶಕ್ತಿಯ ಪರಿಚಯ, ಚಾಲೀಸ ಪಠಣದಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯ ವೃದ್ಧಿ ಹೇಗೆ ಸಾಧ್ಯ ಎಂಬುದರ ಪ್ರಾಯೋಗಿಕ ಪರಿಚಯ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಮೂಲ್ಕಿ

ಭಕ್ತಿಯಿಂದ ದೇವರ ಧ್ಯಾನ ಹಾಗೂ ಹನುಮಾನ್ ಚಾಲೀಸಾ ಪಠಣದಿಂದ ಮನಸ್ಸಿನ ಏಕಾಗ್ರತೆ ಹೆಚ್ಚುವುದರ ಜೊತೆಗೆ ಸಂಸಾರಿಕ ಜಂಜಾಟಗಳನ್ನು ನಿವಾರಿಸಲು ಸಾಧ್ಯವೆಂದು ಅಂಗರಗುಡ್ಡೆ ಶ್ರೀರಾಮ ಭಜನಾ ಮಂದಿರ ಸಮಿತಿ ಅಧ್ಯಕ್ಷ ಸಂಪತ್ ಹೇಳಿದರು.

ಮೂಲ್ಕಿ ಸಮೀಪದ ಅಂಗರಗುಡ್ಡೆ ಶ್ರೀರಾಮ ಭಜನಾ ಮಂದಿರದ ವತಿಯಿಂದ ಅಂಗರಗುಡ್ಡೆ ಶ್ರೀರಾಮ ಭಜನಾ ಮಂದಿರದಲ್ಲಿ ಆಧ್ಯಾತ್ಮಿಕ ಸಂಜೀವಿನಿ ಸಂಸ್ಥೆಯ ಸಹಭಾಗಿತ್ವದಲ್ಲಿ ನಡೆದ ಹನುಮಾನ್ ಚಾಲೀಸಾ ಧ್ಯಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆಧ್ಯಾತ್ಮಿಕ ಸಂಜೀವಿನಿ ವತಿಯಿಂದ ಹನುಮಾನ್ ಚಾಲೀಸಾದ ಒಳ ನೋಟ. ಮಹತ್ವ, ಪ್ರಾಣ ಶಕ್ತಿಯ ಪರಿಚಯ, ಚಾಲೀಸ ಪಠಣದಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯ ವೃದ್ಧಿ ಹೇಗೆ ಸಾಧ್ಯ ಎಂಬುದರ ಪ್ರಾಯೋಗಿಕ ಪರಿಚಯ ನೀಡಲಾಯಿತು.

ಈ ಸಂದರ್ಭ ಮಂದಿರದ ಸಮತಿಯ ಕೋಶಾಧಿಕಾರಿ ಸುಧೀರ್ ಶೆಟ್ಟಿ, ಉಪಾಧ್ಯಕ್ಷ ರೋಶನ್ ಸಾಲ್ಯಾನ್, ಕಾರ್ಯದರ್ಶಿ ಸಂತೋಷ್ ಮತ್ತಿತರರು ಉಪಸ್ಥಿತರಿದ್ದರು. ಸುಮಾರು ನೂರಕ್ಕೂ ಹೆಚ್ಚು ಶಿಬಿರಾರ್ಥಿಗಳು ಭಾಗವಹಿಸಿದ್ದರು.