ಸಾರಾಂಶ
ಚೆನ್ನಕೇಶವ ದೇವಾಲಯ ಹೊಯ್ಸಳರ ದೊರೆ ನರಸಿಂಹನ ಕಾಲದಲ್ಲಿ ದೇವಾಲಯವನ್ನು ನಿರ್ಮಾಣ ಮಾಡಿದ್ದು, ಎತ್ತರವಾದ ಜಗತಿ ನಕ್ಷತ್ರಕಾರ ವೇದಿಕೆ ಭುವನೇಶ್ವರ ನವರಂಗ ಸುಂದರ ಕಂಬಗಳ ವಿನ್ಯಾಸ ಹೀಗೆ ಹೊಯ್ಸಳ ಶೈಲಿಯ ಐತಿಹಾಸಿಕ ತ್ರಿಕುಟಾಚಾಲ ದೇವಸ್ಥಾನ ವಾಗಿದ್ದೆ ಕಳೆದ ಸಾಲಿನಲ್ಲಿ ಭಾರತೀಯ ಪರಂಪರಾಗತ ಟ್ರಸ್ಟ್ ವತಿಯಿಂದ ವಿಶ್ವ ಪರಂಪರೆ ಪಟ್ಟಿಯಲ್ಲಿ ಈ ದೇವಾಲಯವನ್ನು ಸೇರಿಸಲು ಕೇಂದ್ರ ಸರ್ಕಾರ ಕ್ಕೆ ಶಿಫಾರಸಾಗಿತ್ತು. ಇಂತಹ ಭವ್ಯ ದೇವಾಲಯ ಸಂರಕ್ಷಣೆಗೆ ರಾಜ್ಯ ಪುರಾತತ್ವ ಇಲಾಖೆಯ ಧಾರ್ಮಿಕ ದತ್ತಿ ಇಲಾಖೆ ಸಂರಕ್ಷಣೆ ಕಾರ್ಯ ಮಾಡಲು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಹಾರನಹಳ್ಳಿ
ಮಳೆಯ ಸಂದರ್ಭದಲ್ಲಿ ಹಾರನಹಳ್ಳಿ ಗ್ರಾಮದ ಶ್ರೀ ಚನ್ನಕೇಶವ ಸ್ವಾಮಿ ದೇವಾಲಯದ ಗರ್ಭಗುಡಿ ಗೋಪುರದಿಂದ ನೀರು ಸೋರುತ್ತಿದ್ದು ದೇವಾಲಯ ಸಂಪೂರ್ಣ ನೀರಿನ ಹೊಂಡವಾಗಿ ಮಾರ್ಪಟ್ಟಿದೆ.ಹೊಯ್ಸಳರ ಕಾಲದ ಅಪೂರ್ವ ಶಿಲ್ಪಕಲಾ ಸಿರಿಯ ಹಾರನಹಳ್ಳಿ ಗ್ರಾಮದ ಶ್ರೀ ಚನ್ನಕೇಶವ ಸ್ವಾಮಿ ದೇವಾಲಯ ಬೇಲೂರು ಹಳೇಬೀಡಿನಷ್ಟೇ ಪ್ರಮುಖವಾದ ದೇಗುಲ. ಕರ್ನಾಟಕ ಸರ್ಕಾರದ ಪ್ರಾಚ್ಯ ವಸ್ತು ಇಲಾಖೆ ಮತ್ತು ಮುಜರಾಯಿ ಇಲಾಖೆ ವ್ಯಾಪ್ತಿಗೆ ಸೇರಿದ್ದು, ಮಳೆಯಿಂದಾಗಿ ಪ್ರಧಾನ ಗರ್ಭಗುಡಿಯ ದ್ವಾರದ ಬಂದಿಕೆಯ ಮೇಲೆ ನೀರು ಇಳಿಯುತ್ತಿದೆ. ಇಂದರಿಂದ ಕುಸುರಿ ಕೆತ್ತನೆಯು ನೀರು ಇಳಿದು ದೇವಾಲಯದ ಅಂದ ಕೆಡಿಸುತ್ತಿದೆ.
ಚೆನ್ನಕೇಶವ ದೇವಾಲಯ ಹೊಯ್ಸಳರ ದೊರೆ ನರಸಿಂಹನ ಕಾಲದಲ್ಲಿ ದೇವಾಲಯವನ್ನು ನಿರ್ಮಾಣ ಮಾಡಿದ್ದು, ಎತ್ತರವಾದ ಜಗತಿ ನಕ್ಷತ್ರಕಾರ ವೇದಿಕೆ ಭುವನೇಶ್ವರ ನವರಂಗ ಸುಂದರ ಕಂಬಗಳ ವಿನ್ಯಾಸ ಹೀಗೆ ಹೊಯ್ಸಳ ಶೈಲಿಯ ಐತಿಹಾಸಿಕ ತ್ರಿಕುಟಾಚಾಲ ದೇವಸ್ಥಾನ ವಾಗಿದ್ದೆ ಕಳೆದ ಸಾಲಿನಲ್ಲಿ ಭಾರತೀಯ ಪರಂಪರಾಗತ ಟ್ರಸ್ಟ್ ವತಿಯಿಂದ ವಿಶ್ವ ಪರಂಪರೆ ಪಟ್ಟಿಯಲ್ಲಿ ಈ ದೇವಾಲಯವನ್ನು ಸೇರಿಸಲು ಕೇಂದ್ರ ಸರ್ಕಾರ ಕ್ಕೆ ಶಿಫಾರಸಾಗಿತ್ತು. ಇಂತಹ ಭವ್ಯ ದೇವಾಲಯ ಸಂರಕ್ಷಣೆಗೆ ರಾಜ್ಯ ಪುರಾತತ್ವ ಇಲಾಖೆಯ ಧಾರ್ಮಿಕ ದತ್ತಿ ಇಲಾಖೆ ಸಂರಕ್ಷಣೆ ಕಾರ್ಯ ಮಾಡಲು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.;Resize=(128,128))
;Resize=(128,128))
;Resize=(128,128))