ಮೇ 23ರಂದು ಸಾಮರಸ್ಯ‌ ಸಂಗಮ ಕಾರ್ಯಕ್ರಮ‌, ಯೋಧರಿಗೆ ಸನ್ಮಾನ

| Published : May 20 2025, 11:56 PM IST

ಸಾರಾಂಶ

ಪಹಲ್ಗಾಮ್‌ ಕೃತ್ಯದಲ್ಲಿ ಅಮಾಯಕರನ್ನು ಬಲಿಪಡೆದ ಉಗ್ರರನ್ನು ಆಪರೇಷನ್ ಸಿಂದೂರ ಮೂಲಕ ಸೆದೆಬಡಿದು ಶತ್ರು ರಾಷ್ಟ್ರಕ್ಕೆ ತಕ್ಕಪಾಠ ಕಲಿಸಿದ ಸೇನೆಯ ಕಾರ್ಯ ಶ್ಲಾಘನೀಯವಾಗಿದ್ದು, ಈ ನಿಟ್ಟಿನಲ್ಲಿ ಯಾವುದೇ ಜಾತಿ, ಧರ್ಮ‌, ಭೇದ-ಭಾವವಿಲ್ಲದೆ ಸಾಮರಸ್ಯ ಬೆಸೆಯುವ ನಿಟ್ಟಿನಲ್ಲಿ‌ ಮಾಜಿ ಹಾಗೂ ಕರ್ತವ್ಯನಿರತ ತಾಲೂಕಿನ ಸೈನಿಕರಿಗೆ ಕೃತಜ್ಞತೆ ಹಾಗೂ ಗೌರವ ಸಲ್ಲಿಸಲು ಕಾರ್ಯಕ್ರಮ‌ ಆಯೋಜಿಸಲಾಗಿದೆ.

ಕುಷ್ಟಗಿ:

ಪಟ್ಟಣದ ಬುತ್ತಿ ಬಸವೇಶ್ವರ ಸಭಾಂಗಣದಲ್ಲಿ ಮೇ 23ರಂದು ಸಾಮರಸ್ಯ ಸಂಗಮ ಕಾರ್ಯಕ್ರಮ ನಡೆಯಲಿದ್ದು ಈ ಕಾರ್ಯಕ್ರಮದಲ್ಲಿ ಸೈನಿಕರು ಹಾಗೂ ಮಾಜಿ ಸೈನಿಕರನ್ನು ಸನ್ಮಾನಿಸಲಾಗುವುದು ಎಂದು ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಟಿ. ಬಸವರಾಜ ಹೇಳಿದರು.

ಪಟ್ಟಣದ ಬಸವ ಭವನದಲ್ಲಿ ಸಾಮರಸ್ಯ ಸಂಗಮ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಈ ಕಾರ್ಯಕ್ರಮವನ್ನು ಬಸವ ಸಮಿತಿ, ಅಖಿಲ ಭಾರತ ವೀರಶೈವ ಮಹಾಸಭಾ, ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ಮುಸ್ಲಿಂ ಯೂತ್ಸ್‌ ಕಮಿಟಿ ಆಶ್ರಯದಲ್ಲಿ ಆಯೋಜಿಸಲಾಗಿದೆ ಎಂದರು.

ದೇಶ ಸೇವೆ ಸಲ್ಲಿಸುತ್ತಿರುವ ಸೈನಿಕರು ನಮ್ಮ ಜೀವನಾಡಿಯಾಗಿದ್ದಾರೆ. ಇತ್ತೀಚೆಗೆ ಉಗ್ರರ ಕೃತ್ಯ ಹೆಚ್ಚುತ್ತಿದ್ದರೂ ಭಾರತೀಯರನ್ನು ರಕ್ಷಿಸುತ್ತಾ ತಮ್ಮ‌ ಕರ್ತವ್ಯದಲ್ಲಿ‌ ನಿರತಾಗಿರುತ್ತಾರೆ ಎಂದರು.

ಪಹಲ್ಗಾಮ್‌ ಕೃತ್ಯದಲ್ಲಿ ಅಮಾಯಕರನ್ನು ಬಲಿಪಡೆದ ಉಗ್ರರನ್ನು ಆಪರೇಷನ್ ಸಿಂದೂರ ಮೂಲಕ ಸೆದೆಬಡಿದು ಶತ್ರು ರಾಷ್ಟ್ರಕ್ಕೆ ತಕ್ಕಪಾಠ ಕಲಿಸಿದ ಸೇನೆಯ ಕಾರ್ಯ ಶ್ಲಾಘನೀಯವಾಗಿದ್ದು, ಈ ನಿಟ್ಟಿನಲ್ಲಿ ಯಾವುದೇ ಜಾತಿ, ಧರ್ಮ‌, ಭೇದ-ಭಾವವಿಲ್ಲದೆ ಸಾಮರಸ್ಯ ಬೆಸೆಯುವ ನಿಟ್ಟಿನಲ್ಲಿ‌ ಮಾಜಿ ಹಾಗೂ ಕರ್ತವ್ಯನಿರತ ತಾಲೂಕಿನ ಸೈನಿಕರಿಗೆ ಕೃತಜ್ಞತೆ ಹಾಗೂ ಗೌರವ ಸಲ್ಲಿಸಲು ಕಾರ್ಯಕ್ರಮ‌ ಆಯೋಜಿಸಲಾಗಿದೆ ಎಂದು ಹೇಳಿದರು.

ಈ ವೇಳೆ ಬಸವ ಸಮಿತಿ ಅಧ್ಯಕ್ಷ ಶಿವಸಂಗಪ್ಪ ಬಿಜಕಲ್, ರಾಮನಗೌಡ ಪಾಟೀಲ, ಸಿ.ಎನ್. ಉಪ್ಪಿನ ವಕೀಲರು, ಡಾ. ಶೇಖ್ ಜವ್ವಾದ್ ಹುಸೇನ್, ಶಾಮೀದಸಾಬ್‌ ಗಂಧೆಣ್ಣಿ, ಸೈಯದ್ ಖಾಜಾಹುಸೇನ್ ಅತ್ತಾರ್, ಮುಖ್ತಾರ್ ಬಳ್ಳಾರಿ, ತಾಹಿರ್ ಕಪಾಲಿ, ಮುನವ್ವರ್ ಪಾಶಾ, ಅಬ್ದುಲ್ ರಹೀಮ್, ಫಾರೂಕ್ ಚೌಧರಿ, ಸೈಯದ್ ಆಟೊ, ಯೂಸೂಫ್ ಮೋದಿ, ಎಜಾಜ್ ಕಪಾಲಿ, ಮಹಬೂಬ್ ವಾಲೀಕಾರ, ನೂರಸಾಬ ಆಧೋನಿ, ಅಬ್ದುಲ್ ಕನಕಾಪೂರ, ರಾಜು ಗೈಬಣ್ಣನವರ, ಜೀಲಾನ್ ಮೆಡಿಕಲ್, ಸದ್ದಾಂ‌‌ ಗುಮಗೇರ, ಮುರ್ತುಜಾಸಾಬ್‌ ಅತ್ತಾರ, ಜಮೀರ್ ಟಕ್ಕಳಕಿ, ಸೈಯದ್ ಮುರ್ತುಜಾ (ಪೇಂಟರ್), ಅಜಮೀರ ಸೇರಿದಂತೆ ಅನೇಕರು ಇದ್ದರು.