ಹಾಸನಾಂಬೆ ದೇವಿ ಜಾತ್ರಾ ಮಹೋತ್ಸವ ದರ್ಶನ ಅಭಿಯಾನ

| Published : Oct 17 2024, 12:05 AM IST

ಸಾರಾಂಶ

ಹಾಸನಾಂಬೆ ದೇವಿ ಜಾತ್ರಾ ಸಮಯದಲ್ಲಿ ಭಕ್ತಾದಿಗಳು ಸಾಂಪ್ರದಾಯಿಕ (ದೇಶೀಯ) ವಸ್ತ್ರ ಸಂಹಿತೆ ವೇಷಭೂಷಣಗಳಲ್ಲಿ (ಹಣೆಯಲ್ಲಿ ಕುಂಕುಮ, ಚಂದನ, ವಿಭೂತಿ, ನಾಮ ಇತ್ಯಾದಿ ಇಟ್ಟು) ದರ್ಶನ ಮಾಡಲು ಪ್ರೇರೇಪಿಸುವ ಅಭಿಯಾನ (ಜನಜಾಗೃತಿ) ಶ್ರೀ ಹಾಸನಾಂಬೆ ದೇವಾಲಯದ ಮುಂಭಾಗ ಚಾಲನೆ ನೀಡಲಾಯಿತು. ದೇವಿಯ ದರ್ಶನಕ್ಕೆ ಆಗಮಿಸುವ ಭಕ್ತರು ವಸ್ತ್ರಸಂಹಿತೆಯನ್ನು ಪಾಲಿಸಿ ಹಾಗೂ ಹಣೆಯಲ್ಲಿ ಕುಂಕುಮ ಚಂದನ ಅಥವಾ ವಿಭೂತಿ ಇತ್ಯಾದಿಗಳನ್ನು ಧರಿಸಿ ದರ್ಶನಕ್ಕೆ ಆಗಮಿಸಲು ವಿನಂತಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಹಾಸನಾಂಬೆ ದೇವಿ ಜಾತ್ರಾ ಸಮಯದಲ್ಲಿ ಭಕ್ತಾದಿಗಳು ಸಾಂಪ್ರದಾಯಿಕ (ದೇಶೀಯ) ವಸ್ತ್ರ ಸಂಹಿತೆ ವೇಷಭೂಷಣಗಳಲ್ಲಿ (ಹಣೆಯಲ್ಲಿ ಕುಂಕುಮ, ಚಂದನ, ವಿಭೂತಿ, ನಾಮ ಇತ್ಯಾದಿ ಇಟ್ಟು) ದರ್ಶನ ಮಾಡಲು ಪ್ರೇರೇಪಿಸುವ ಅಭಿಯಾನ (ಜನಜಾಗೃತಿ) ಶ್ರೀ ಹಾಸನಾಂಬೆ ದೇವಾಲಯದ ಮುಂಭಾಗ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಭಾರತೀಯ ವೈದ್ಯಕೀಯ ಸಂಘದ ಮಾಜಿ ಅಧ್ಯಕ್ಷರಾದ ಡಾ. ಎನ್ ರಮೇಶ್ ಮಾತನಾಡಿ, ಶ್ರೀ ಹಾಸನಾಂಬೆ ದೇವಿ ಜಾತ್ರಾ ಸಮಯದಲ್ಲಿ ದೇವಿಯ ದರ್ಶನಕ್ಕೆ ಆಗಮಿಸುವ ಭಕ್ತರು ವಸ್ತ್ರಸಂಹಿತೆಯನ್ನು ಪಾಲಿಸಿ ಹಾಗೂ ಹಣೆಯಲ್ಲಿ ಕುಂಕುಮ ಚಂದನ ಅಥವಾ ವಿಭೂತಿ ಇತ್ಯಾದಿಗಳನ್ನು ಧರಿಸಿ ದರ್ಶನಕ್ಕೆ ಆಗಮಿಸಲು ವಿನಂತಿಸಿದರು.

ಇದೇ ಸಮಯದಲ್ಲಿ ಮಾತನಾಡಿದ ಚಿನ್ನ ಬೆಳ್ಳಿ ಕೆಲಸಗಾರ ಸಂಘದ ಅಧ್ಯಕ್ಷ ಹಾಗೂ ಹಿಂದೂ ಜನಜಾಗೃತಿ ಸಮಿತಿಯ ಸದಸ್ಯ ರಾಜ ವೆಂಕಟೇಶ್‌ರವರು ಮಾತನಾಡಿ, ಹಿಂದೂ ಧರ್ಮದ ಆಚಾರ ವಿಚಾರಗಳನ್ನು ಗೌರವಿಸುವ ಮತ್ತು ಕಾಪಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಪ್ರತಿಯೊಬ್ಬರೂ ಕೂಡ ವಸ್ತ್ರಸಂಹಿತೆಯನ್ನು ದೇವಿ ದರ್ಶನದಲ್ಲಿ ಸ್ವಯಂಪ್ರೇರಿತರಾಗಿ ಪಾಲಿಸಲು ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ಅರುಣ್ ಕುಮಾರ್, ನಾಗೇಶ್, ಮಂಜುನಾಥ್, ಬೀರೇಶ್, ಅಶೋಕ್ಕ ಕೋಶಿ ಶ್ರೀಮತಿ ಸುಭಾಷಿಣಿ ಉದಯ್ ಕುಮಾರ್‌, ಪಾಂಡುರಂಗ, ಗೋಪಾಲ್‌ ಇನ್ನಿತರರು ಹಾಸನಾಂಬ ದೇವಿ ಜಾತ್ರೆ ಹಿತ ರಕ್ಷಣಾ ಸಮಿತಿಯವರು ಭಾಗವಹಿಸಿದ್ದರು.