ಸಾರಾಂಶ
ಅಕ್ಟೋಬರ್ ೨೪ರ ಗುರುವಾರದಂದು ಮಧ್ಯಾಹ್ನ ೧೨ ಗಂಟೆಗೆ ರಾಜ ಮನೆತನದ ನರಸಿಂಹ ರಾಜ ಅರಸು ಅವರು ಬಾಳೆಕಂದು ಕತ್ತರಿಸಿದ ನಂತರ ದೇವಿಯ ಗರ್ಭಗುಡಿಗೆ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ ಬಾಗಿಲನ್ನು ತೆಗೆದು ದರ್ಶನ ಆರಂಭವಾಗಿ ನವೆಂಬರ್ ೩ನೇ ತಾರೀಖು ಮುಚ್ಚಲಾಗುತ್ತದೆ. ಬ್ಯಾರಿಕೇಡ್, ನೆಲಹಾಸು, ಜರ್ಮನ್ ಟೆಂಟ್, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯವನ್ನು ಕಲ್ಪಿಸಲಾಗಿದೆ. ಒಂದು ಸಾವಿರ ಮತ್ತು ೩೦೦ ರು.ಗಳ ಟಿಕೆಟ್ ಪಡೆಯಲು ಪ್ರತ್ಯೇಕ ಕೌಂಟರ್ ವ್ಯವಸ್ಥೆ, ಲಾಡು ಪಡೆಯಲು ಪತ್ಯೇಕ ಕೇಂದ್ರ ಸ್ಥಾಪಿಸಲಾಗಿದೆ.
ಕನ್ನಡಪ್ರಭ ವಾರ್ತೆ ಹಾಸನ
ಅಧಿದೇವತೆ ಹಾಸನಾಂಬೆ ಬಾಗಿ ತೆಗೆಯುವ ಒಂದು ದಿನ ಇರುವಂತೆ ಸಿದ್ಧತೆಗಳು ಅಂತಿಮ ಪಡೆದುಕೊಂಡು ಭರದಿಂದ ಸಾಗಿದ್ದು, ಜಿಲ್ಲಾಧಿಕಾರಿಗಳು, ಉಪವಿಭಾಗಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳಿಗೆ ಹಾಗೂ ಇತರೆ ಇಲಾಖೆ ಸೇರಿದಂತೆ ವಿವಿಧ ಸಂಘಸಂಸ್ಥೆಗಳಿಗೆ ದೇವಸ್ಥಾನದಲ್ಲಿ ಆಯಾ ಕೆಲಸವನ್ನು ಹಂಚಿಕೆ ಮಾಡಿದರು.ಅಕ್ಟೋಬರ್ ೨೪ರ ಗುರುವಾರದಂದು ಮಧ್ಯಾಹ್ನ ೧೨ ಗಂಟೆಗೆ ರಾಜ ಮನೆತನದ ನರಸಿಂಹ ರಾಜ ಅರಸು ಅವರು ಬಾಳೆಕಂದು ಕತ್ತರಿಸಿದ ನಂತರ ದೇವಿಯ ಗರ್ಭಗುಡಿಗೆ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ ಬಾಗಿಲನ್ನು ತೆಗೆದು ದರ್ಶನ ಆರಂಭವಾಗಿ ನವೆಂಬರ್ ೩ನೇ ತಾರೀಖು ಮುಚ್ಚಲಾಗುತ್ತದೆ. ಬ್ಯಾರಿಕೇಡ್, ನೆಲಹಾಸು, ಜರ್ಮನ್ ಟೆಂಟ್, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯವನ್ನು ಕಲ್ಪಿಸಲಾಗಿದೆ. ಒಂದು ಸಾವಿರ ಮತ್ತು ೩೦೦ ರು.ಗಳ ಟಿಕೆಟ್ ಪಡೆಯಲು ಪ್ರತ್ಯೇಕ ಕೌಂಟರ್ ವ್ಯವಸ್ಥೆ, ಲಾಡು ಪಡೆಯಲು ಪತ್ಯೇಕ ಕೇಂದ್ರ ಸ್ಥಾಪಿಸಲಾಗಿದೆ.
ಬಾಗಿಲು ತೆಗೆಯುವ ಒಂದು ದಿನ ಇರುವಂತೆ ಹಾಸನಾಂಬೆ ದೇವಾಲಯದ ಒಳಗೆ ಹೊರಗೆ ಹೂವಿನ ಅಲಂಕಾರಗಳು, ಹಳೆಯ ಕಾಲದ ದೇವಸ್ಥಾನದ ಕಂಬಗಳು, ಹೂವಿನ ಆನೆ, ನವಿಲು, ಕಳಸ ಸೇರಿದಂತೆ ಮನಸ್ಸಿಗೆ ಒಂದು ರೀತಿಯಲ್ಲಿ ನೆಮ್ಮದಿ, ಸಂತೋಷ ಕೊಡುವ ಎಲ್ಲಾ ರೀತಿಯ ಶೃಂಗಾರಗಳು ಪೂರ್ಣಗೊಂಡು ಭಕ್ತರ ಬರುವಿಕೆಗೆ ಕಾಯುತ್ತಿದೆ. ಇನ್ನು ಪೊಲೀಸ್ ಬಿಗಿ ಬಂದೋಬಸ್ತ್ ಅನ್ನು ಎಸ್ಪಿ ಮಹಮದ್ ಸುಜೀತಾ ನಿರ್ವಹಿಸಿದ್ದಾರೆ. ಜಿಲ್ಲಾಧಿಕಾರಿ ಸಿ. ಸತ್ಯಭಾಮ ಅವರು, ಕಂದಾಯ ಇಲಾಖೆ ಅಧಿಕಾರಿಗಳಿಗೆ ಹಾಗೂ ಇತರೆ ಇಲಾಖೆ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಭೆ ಕರೆದು ಉದ್ದೇಶಿಸಿ ಮಾತನಾಡಿ, ಕಳೆದ ವರ್ಷ ಆಗಿರುವ ಸಮಸ್ಯೆ ಮತ್ತೆ ಮರುಕಳಿಸಬಾರದು. ಗುರುವಾರ ದೇವಸ್ಥಾನದ ಬಾಗಿಲು ತೆಗೆದು ಬಾಗಿಲು ಮುಚ್ಚುವವರೆಗೂ ತಮಗೆ ಕೊಟ್ಟಿರುವ ಜವಬ್ಧಾರಿಯನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಸೂಚನೆ ನೀಡಿದರು.