ಹಾಲಿನ ದರ 4 ರು. ಗೆ ಹೆಚ್ಚಿಸಿ ಹಾವೆಮುಲ್ ಆದೇಶ - ರೈತರ ಪ್ರತಿಭಟನೆಗೆ ಮಣಿದ ಒಕ್ಕೂಟ

| N/A | Published : Apr 13 2025, 10:59 AM IST

Milk Packet
ಹಾಲಿನ ದರ 4 ರು. ಗೆ ಹೆಚ್ಚಿಸಿ ಹಾವೆಮುಲ್ ಆದೇಶ - ರೈತರ ಪ್ರತಿಭಟನೆಗೆ ಮಣಿದ ಒಕ್ಕೂಟ
Share this Article
  • FB
  • TW
  • Linkdin
  • Email

ಸಾರಾಂಶ

ನಷ್ಟದ ನೆಪ ಹೇಳಿ ಹಾಲು ಉತ್ಪಾದಕರಿಗೆ ದರ ಕಡಿತ ಮಾಡಿದ್ದ ಹಾವೇರಿ ಹಾಲು ಒಕ್ಕೂಟ (ಹಾವೆಮುಲ್) ಕೊನೆಗೂ ಲೀಟರ್‌ಗೆ ₹4 ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.

  ಹಾವೇರಿ : ನಷ್ಟದ ನೆಪ ಹೇಳಿ ಹಾಲು ಉತ್ಪಾದಕರಿಗೆ ದರ ಕಡಿತ ಮಾಡಿದ್ದ ಹಾವೇರಿ ಹಾಲು ಒಕ್ಕೂಟ (ಹಾವೆಮುಲ್) ಕೊನೆಗೂ ಲೀಟರ್‌ಗೆ ₹4 ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.

ಸರ್ಕಾರ ₹4 ಹೆಚ್ಚಳ ಮಾಡಿದ್ದರೂ ಒಕ್ಕೂಟ, ಹಾಲು ಉತ್ಪಾದಕರಿಗೆ ಕೊಡುವ ದರದಲ್ಲಿ ₹3.50 ಕಡಿತಗೊಳಿಸಿ, ನಂತರ ಕೇವಲ 50 ಪೈಸೆ ಹೆಚ್ಚಿಸುವ ಮೂಲಕ ರೈತರ ಕೆಂಗಣ್ಣಿಗೆ ಗುರಿಯಾಗಿತ್ತು. ಬಳಿಕ ಎಚ್ಚೆತ್ತ ಒಕ್ಕೂಟ ₹2.50 ಹೆಚ್ಚಿಸಿತ್ತು. ಆದರೆ, ಸಂಪೂರ್ಣವಾಗಿ ₹4 ಹೆಚ್ಚಿಸುವಂತೆ ರೈತ ಸಂಘ ಪ್ರತಿಭಟನೆ ನಡೆಸಿತ್ತು.

ಈ ವಿಷಯ ಸಿಎಂವರೆಗೆ ತಲುಪಿತ್ತು. ₹4 ಸಂಪೂರ್ಣವಾಗಿ ರೈತರಿಗೆ ಕೊಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಖಡಕ್ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಒಕ್ಕೂಟ ಮತ್ತೆ ₹2.50ನಿಂದ ಸಂಪೂರ್ಣವಾಗಿ ₹4 ದರ ಹೆಚ್ಚಿಸಿ ಆದೇಶಿಸಿದೆ. ಈ ಮೂಲಕ ಸದ್ಯ ಆಕಳ ಹಾಲಿಗೆ ₹35.55 ಹಾಗೂ ಎಮ್ಮೆ ಹಾಲಿಗೆ ₹48.05 ದರ ರೈತರಿಗೆ ಸಿಗಲಿದೆ.