ವರದಿ ಓದುವುದು, ಕೇಳುವುದಕ್ಕೆ ಸೀಮಿತವಾದ ತಾಪಂ ಸಭೆಸಭೆಯಲ್ಲಿ ಬರೆದ ವರದಿ ಓದುವುದು, ಕೇಳುವುದು, ಸಿದ್ಧಪಡಿಸಿದ ವರದಿಯನ್ನು ಅಧಿಕಾರಿಗಳು ಸಭೆಗೆ ಒಪ್ಪಿಸುವ ಕೆಲಸವಷ್ಟೇ ನಡೆದ ತಾಲೂಕು ಪಂಚಾಯಿತಿ ಸಭೆಯಲ್ಲಿ ನಡೆಯಿತು, ತಾಲೂಕಿನಲ್ಲಿ ವಿವಿಧ ಇಲಾಖಾವಾರು ಅಭಿವೃದ್ಧಿಗಳ ಪ್ರಗತಿ ಪರಿಶೀಲನೆ ಕುರಿತು ನಡೆಯಬೇಕಾದ ಸಭೆ ಶಿಗ್ಗಾಂವಿ ತಾಲೂಕಿನ ಸಮಗ್ರ ಅಭಿವೃದ್ಧಿಯ ಪರ ಯಾವುದು ಕಾಣಸಿಗದಂತೆ ಮಾಯವಾಯಿತು. ಕೇವಲ ಸ್ಥಗಿತಗೊಂಡ ಅಭಿವೃದ್ಧಿಗಳನ್ನು ಪೂರ್ಣಗೊಳಿಸಿ ಎಂಬ ಪ್ರತ್ಯುತ್ತರಗಳ ಸಲಹೆ ಅಧಿಕಾರಿಗಳಿಂದ ಕೇಳಿ ಬಂದಿತು.