ಸಾರಾಂಶ
ಮಂಡ್ಯ ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತಿದ್ದು ತಾವು ಆಗಮಿಸುವಂತೆ ಕಲ್ಪನಾ ಅವರಿಗೆ ಆಹ್ವಾನ ನೀಡಿದರು. ಶೀಘ್ರದಲ್ಲಿ ನಾನು ನಿಮ್ಮನ್ನು ಮತ್ತೊಮ್ಮೆ ಭೇಟಿಯಾಗಿ ಮಾತುಕತೆ ನಡೆಸುವುದಾಗಿ ಹೇಳಿ ಅಲ್ಲಿಂದ ತೆರಳಿದರು.
ಕನ್ನಡಪ್ರಭ ವಾರ್ತೆ ಮದ್ದೂರು
ಲೋಕಸಭಾ ಚುನಾವಣೆ ಎನ್ ಡಿಎ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಬುಧವಾರ ರಾತ್ರಿ ಮಾಜಿ ಶಾಸಕಿ ಕಲ್ಪನಾ ಸಿದ್ದರಾಜು ನಿವಾಸಕ್ಕೆ ದಿಢೀರ್ ಭೇಟಿ ನೀಡಿ ಚುನಾವಣೆಯಲ್ಲಿ ಬೆಂಬಲ ನೀಡುವಂತೆ ಮನವಿ ಮಾಡಿದರು.ಪಟ್ಟಣದ ಮದ್ದೂರಮ್ಮನ ದೇವಾಲಯದ ಬಳಿ ಇರುವ ರೈತಪರ ಹೋರಾಟಗಾರ, ಮಾಜಿ ಶಾಸಕ ದಿ. ಎಂ.ಎಸ್. ಸಿದ್ದರಾಜು ಸಮಾಧಿಗೆ ಮಾಲಾರ್ಪಣೆ ಮಾಡಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಮಾಜಿ ಶಾಸಕಿ ಕಲ್ಪನಾ ಸಿದ್ದರಾಜು ನಿವಾಸಕ್ಕೆ ತೆರಳಿ ಉಭಯ ಕುಶಲೋಪರಿ ವಿಚಾರಿಸಿದರು.
ಮಂಡ್ಯ ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತಿದ್ದು ತಾವು ಆಗಮಿಸುವಂತೆ ಕಲ್ಪನಾ ಅವರಿಗೆ ಆಹ್ವಾನ ನೀಡಿದರು. ಶೀಘ್ರದಲ್ಲಿ ನಾನು ನಿಮ್ಮನ್ನು ಮತ್ತೊಮ್ಮೆ ಭೇಟಿಯಾಗಿ ಮಾತುಕತೆ ನಡೆಸುವುದಾಗಿ ಹೇಳಿ ಅಲ್ಲಿಂದ ತೆರಳಿದರು. ಈ ವೇಳೆ ಮಾಜಿ ಸಚಿವ ಡಿ.ಸಿ. ತಮ್ಮಣ್ಣ ಪುರಸಭೆ ಸದಸ್ಯ ಎಂ.ಐ.ಪ್ರವೀಣ್ ಹಾಗೂ ಕಲ್ಪನಾ ಸಿದ್ದರಾಜು ಬೆಂಬಲಿಗರು ಹಾಜರಿದ್ದರು.