ಪ್ರೇಯಸಿ ಹತ್ಯೆಮಾಡಿ, ತಾನೂ ಆತ್ಮಹತ್ಯೆ ಮಾಡಿಕೊಂಡ

| Published : Mar 05 2025, 12:32 AM IST

ಪ್ರೇಯಸಿ ಹತ್ಯೆಮಾಡಿ, ತಾನೂ ಆತ್ಮಹತ್ಯೆ ಮಾಡಿಕೊಂಡ
Share this Article
  • FB
  • TW
  • Linkdin
  • Email

ಸಾರಾಂಶ

ಮದುವೆ ಆಗಲು ನಿರಾಕರಿಸಿದ ಪ್ರೇಯಸಿಯ ಕತ್ತಿಗೆಯನ್ನು ಚಾಕುವಿನಿಂದ ಚುಚ್ಚಿ ಹತ್ಯೆ ಮಾಡಿದ ಪ್ರೇಮಿ, ಬಳಿಕ ತಾನೂ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶಹಾಪುರದ ನಾಥಪೈ ವೃತ್ತದ ಬಳಿ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಮದುವೆ ಆಗಲು ನಿರಾಕರಿಸಿದ ಪ್ರೇಯಸಿಯ ಕತ್ತಿಗೆಯನ್ನು ಚಾಕುವಿನಿಂದ ಚುಚ್ಚಿ ಹತ್ಯೆ ಮಾಡಿದ ಪ್ರೇಮಿ, ಬಳಿಕ ತಾನೂ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶಹಾಪುರದ ನಾಥಪೈ ವೃತ್ತದ ಬಳಿ ಮಂಗಳವಾರ ನಡೆದಿದೆ.

ನಾಥಪೈ ವೃತ್ತದ ನಿವಾಸಿ ಐಶ್ವರ್ಯಾ ಮಹೇಶ ಲೋಹಾರ (18) ಹತ್ಯೆಗೀಡಾದ ಪ್ರೇಯಸಿ. ಬೆಳಗಾವಿ ತಾಲೂಕಿನ ‌ಯಳ್ಳೂರ ಗ್ರಾಮದ ಪ್ರಶಾಂತ ಯಲ್ಲಪ್ಪ ಕುಂಡೇಕರ್ (29) ಪ್ರೇಯಸಿಯನ್ನು ಹತ್ಯೆ ಮಾಡಿ, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡ ಯುವಕ. ಪೇಂಟರ್ ಆಗಿ ಕೆಲಸ ಮಾಡುತ್ತಿದ್ದ ಪ್ರಶಾಂತ ಕಳೆದ ಒಂದೂವರೆ ವರ್ಷದಿಂದ ಐಶ್ವರ್ಯಾಳನ್ನು ಪ್ರೀತಿಸುತ್ತಿದ್ದ.

ಇವರ ಪ್ರೀತಿಯ ವಿಚಾರವನ್ನು ಯುವತಿ ತಾಯಿಗೆ ತಿಳಿಸಿದ್ದ. ಈಗಲೇ ಮದುವೆ ಬೇಡ ಎಂದು ತಾಯಿ ಬುದ್ಧಿವಾದ ಹೇಳಿದ್ದರು. ಆದರೆ, ಐಶ್ವರ್ಯಾ ಚಿಕ್ಕಮ್ಮಳ ಮನೆಯಲ್ಲಿ ಇಬ್ಬರು ಸೇರಿದ್ದಾರೆ. ಮದುವೆಗೆ ನಿರಾಕರಿಸಿದ ಐಶ್ವರ್ಯಾಗೆ ಒತ್ತಾಯಪೂರ್ವಕವಾಗಿ ವಿಷ ಕುಡಿಸಲು ಯತ್ನಿಸಿದ. ಬಳಿಕ ತನ್ನ ಬೇಬಿನಲ್ಲಿದ್ದ ಚೂರಿಯಿಂದ ಆಕೆಯ ಕತ್ತು ಕೊಯ್ದು ಕೊಲೆ ಮಾಡಿದ. ಬಳಿಕ ತಾನೂ ಚೂರಿಯಿಂದ ಕುತ್ತಿಗೆ ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ನಗರ ಪೊಲೀಸ್‌ ಆಯುಕ್ತ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌, ಡಿಸಿಪಿ ರೋಹನ ಜಗದೀಶ ಭೇಟಿ ನೀಡಿ ಪರಿಶೀಲಿಸಿದರು. ಈ ಕುರಿತು ಶಹಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.