ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರಶೃಂಗೇರಿ ಕಿರಿಯ ಶ್ರೀಗಳಾದ ವಿಧುಶೇಖರ ಸ್ವಾಮಿಗಳ ಸಮ್ಮುಖದಲ್ಲಿ ಮುಳಬಾಗಿಲು ತಾಲೂಕಿನ ಆವನಿ ಶೃಂಗೇರಿ ಶಾಖಾ ಮಠಕ್ಕೆ ನೂತನ ಉತ್ತರಾಧಿಕಾರಿ ಪಟ್ಟಾಭಿಷೇಕ ನಡೆಯಿತು. ಮುಳಬಾಗಿಲು ತಾಲ್ಲೂಕಿನ ಆವನಿ ಕ್ಷೇತ್ರದಲ್ಲಿರುವ ಶೃಂಗೇರಿ ಶಾರದಾ ಮಠದಲ್ಲಿ ಪಟ್ಟಾಭಿಷೇಕ ನೆರವೇರಿತು. ಆವನಿ ಶೃಂಗೇರಿ ಶಾಖಾ ಮಠದ ಉತ್ತರಾಧಿಕಾರಿಯಾಗಿ ಅದ್ವೈತಾನಂದ ಭಾರತಿ ಸ್ವಾಮಿಗಳ ಪಟ್ಟಾಭಿಷೇಕ ಅತ್ಯಂತ ವೈಭವಪೇತವಾಗಿ ನಡೆಯಿತು.ಆವನಿ ಶೃಂಗೇರಿ ಶಾರದಾ ಪೀಠಕ್ಕೆ ಸೇರಿದ ಮಠದಲ್ಲಿ ಶಾಸ್ತ್ರೋಕ್ತವಾಗಿ ಕಿರಿಯ ಶ್ರೀಗಳ ಸಮ್ಮುಖದಲ್ಲಿ ಪಟ್ಟಾಭಿಷೇಕ ಕಾರ್ಯಕ್ರಮ ನೆರವೇರಿತು.ಜುಲೈ ತಿಂಗಳಲ್ಲಿ ಸನ್ಯಾಸ ದೀಕ್ಷೆ ಹಾಗೂ ಉತ್ತರಾಧಿಕಾರ ಹಸ್ತಾಂತರ ಪ್ರಕ್ರಿಯೆ ನಡೆದಿತ್ತು ಅದರಂತೆ ಇಂದು ಶೃಂಗೇರಿ ಕಿರಿಯ ಶ್ರೀಗಳಾದ ವಿಧುಶೇಖರ ಸ್ವಾಮಿಗಳ ಸಮ್ಮುಖದಲ್ಲಿ ಮಠಕ್ಕೆ ನೂತನ ಉತ್ತರಾಧಿಕಾರಿಯ ಪಟ್ಟಾಭಿಷೇಕ ಕಾರ್ಯಕ್ರಮ ನೆರವೇರಿತು. ಕಳೆದೊಂದು ವರ್ಷದ ಹಿಂದಷ್ಟೇ ಶ್ರೀಶಾಂತಾನಂದ ಭಾರತಿ ಸ್ವಾಮಿಗಳನ್ನು ನೇಮಿಸಲಾಗಿತ್ತು, ಆದರೆ ಕಾರಣಾಂತರಗಳಿಂದ ಅವರ ಬದಲಿಗೆ ಇಂದು ಮತ್ತೆ ಮಠಕ್ಕೆ ನೂತನ ಉತ್ತರಾಧಿಕಾರಿಯಾಗಿ ಶ್ರೀ ಅದ್ವೈತಾನಂದ ಭಾರತಿ ಪಟ್ಟಾಭಿಷೇಕ ಕಾರ್ಯಕ್ರಮ ನೆರವೇರಿತು. ಆಂದ್ರಪ್ರದೇಶದ ಕುಪ್ಪಂ ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಬಂದಿದ್ದ ಮಠದ ಭಕ್ತರ ಸಮ್ಮುಖದಲ್ಲಿ ಪಟ್ಟಾಭಿಷೇಕ ನೆರವೇರಿತು.ಸಂಸದ ಡಾ.ಸುಧಕರ್ ಮಾತನಾಡಿ, ಸನಾತನ ಧರ್ಮ ನಮಗೆ ಆಚಾರ, ವಿಚಾರ, ಎಲ್ಲವನ್ನ ಕೊಟ್ಟಿದೆ, ಇಂತಹ ಸನಾತನ ಧರ್ಮದ ಬಗ್ಗೆ ಲೆವರು ಹಗುರವಾಗಿ ಮಾತನಾಡುತ್ತಾರೆ ಎಂದು ಹೇಳುವ ಮೂಲಕ ಮಠಗಳ ಮಹತ್ವ ಕುರಿತು ತಿಳಿಸಿದರು. ೨ ಬಾರಿ ಜಿಲ್ಲಾ ಉಸ್ತುವಾರಿ ಸಚಿವರಾದಾಗಲೂ ನನಗೆ ಇಲ್ಲಿನ ಮಠದ ಕುರಿತು ತಿಳಿದಿರಲಿಲ್ಲ, ಆದರೆ ಈಗ ಗೊತ್ತಾಗಿದೆ ಶ್ರೀಗಳ ಆದೇಶವನ್ನ ಪಾಲನೆ ಮಾಡುತ್ತೇನೆ, ಮಠಕ್ಕೆ ಬೇಕಾದ ಸಹಕಾರ ನೀಡುವುದಾಗಿ ಭರವಸೆ ನೀಡಿದರು.ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಅಶ್ವತ್ಥ ನಾರಾಯಣ, ಅರವಿಂದ ಲಿಂಬಾವಳಿ ಇದ್ದರು.