ಮದುವೆ ಮುಗಿಸಿ ಕಾರಿನಲ್ಲಿ ವಾಪಾಸು ತಮ್ಮ ಊರುಗಳಿಗೆ ತೆರಳುತ್ತಿದ್ದಾಗ ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಓರ್ವ ಸಾವನಪ್ಪಿರುವ ಘಟನೆ ಮಂಗಳವಾರ ನಸುಕಿನ ಜಾವ ಬೀರೂರಿನಲ್ಲಿ ನಡೆದಿದೆ.

ಬೀರೂರು: ಮದುವೆ ಮುಗಿಸಿ ಕಾರಿನಲ್ಲಿ ವಾಪಾಸು ತಮ್ಮ ಊರುಗಳಿಗೆ ತೆರಳುತ್ತಿದ್ದಾಗ ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಓರ್ವ ಸಾವನಪ್ಪಿರುವ ಘಟನೆ ಮಂಗಳವಾರ ನಸುಕಿನ ಜಾವ ಬೀರೂರಿನಲ್ಲಿ ನಡೆದಿದೆ.

ತುರುವೇಕೆರೆ ಗಜೇಂದ್ರ(37) ಅಪಘಾತ ನಡೆದ ಸ್ಥಳದಲ್ಲೇ ಮೃತಪಟ್ಟಿದ್ದು, ಕಾರಿನಲ್ಲಿದ್ದ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಕಡೂರು ಮತ್ತು ಶಿವಮೊಗ್ಗ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ವಿವರ: ಮೂಸೂರಿನಲ್ಲಿ ಮದುವೆ ಮುಗಿಸಿ ಗದಗಕ್ಕೆ ಎರ್ಟಿಗಾ ಕಾರಿನಲ್ಲಿ 8 ಜನ ವಾಪಾಸು ಬೀರೂರು ಮಾರ್ಗವಾಗಿ ತೆರಳುತ್ತಿದ್ದ ಕಾರು ಮತ್ತು ಸಾಗರದಿಂದ ಮಾರುತಿ ಸ್ವಿಪ್ಟ್ ಡಿಸೈರ್‌ನಲ್ಲಿ 4 ಜನ ಬೆಂಗಳೂರಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದು ಬೀರೂರು ಸಮೀಪದ ಹೊಸದಾಗಿ ರೈಲ್ವೇ ಪ್ಲೈಓವರ್ ಸಮೀಪದ ತಿರುವಿನಲ್ಲಿ ಕಾರುಗಳು ಅತಿವೇಗದಿಂದ ಸಂಚರಿಸುತ್ತಿದ್ದ ಪರಿಣಾಮ ಎರಡು ಕಾರುಗಳು ಮುಖಾಮುಖಿ ಡಿಕ್ಕಿಯಾಗಿ ಅಫಘಾತವಾಗಿವೆ ಎಂದು ತಿಳಿದು ಬಂದಿದ್ದು, ಅಪಘಾತದ ರಬಸಕ್ಕೆ ಕಾರಿನ ಬಲೂನುಗಳು ತೆರೆದಿರುವ ಪರಿಣಾಮ ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮೃತ ಗಜೇಂದ್ರನ ತಂದೆ ನೀಡಿರುವ ದೂರಿನಂತೆ ಬೀರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.