ಬ್ಯಾಂಕಾಕ್‌ನಲ್ಲಿ ಶಿರೂರ ಗಾಯನ: ಸಂತಸಪಟ್ಟ ಕನ್ನಡಿಗರು

| Published : May 11 2024, 01:30 AM IST

ಸಾರಾಂಶ

ಬಾದಾಮಿ ತಾಲೂಕಿನ ಕೆರೂರ ಗ್ರಾಮದ ಗಾಯಕ ವೆಂಕಟೇಶಮೂರ್ತಿ ಶಿರೂರ ತಮ್ಮ ಪ್ರತಿಭೆಯನ್ನು ಥಾಯ್ಲೆಂಡ್‌ ದೇಶದ ಬ್ಯಾಂಕಾಕ್‌ನಲ್ಲಿ ಸುಗಮ ಸಂಗೀತ ಹಾಗೂ ಚಲನಚಿತ್ರ ಗೀತೆಗಳನ್ನು ಪ್ರಸ್ತುತಪಡಿಸಿ ಪ್ರತಿಭೆ ಮೆರೆದರು.

ಕೆರೂರ: ಕರ್ನಾಟಕದ ಬಾದಾಮಿ ತಾಲೂಕಿನ ಕೆರೂರ ಗ್ರಾಮದ ಗಾಯಕ ವೆಂಕಟೇಶಮೂರ್ತಿ ಶಿರೂರ ತಮ್ಮ ಪ್ರತಿಭೆಯನ್ನು ಥಾಯ್ಲೆಂಡ್‌ ದೇಶದ ಬ್ಯಾಂಕಾಕ್‌ನಲ್ಲಿ ಸುಗಮ ಸಂಗೀತ ಹಾಗೂ ಚಲನಚಿತ್ರ ಗೀತೆಗಳನ್ನು ಪ್ರಸ್ತುತಪಡಿಸಿ ಪ್ರತಿಭೆ ಮೆರೆದರು.ಅಲ್ಲಿಯ ಕನ್ನಡಿಗರು ಹಮ್ಮಿಕೊಂಡ ಕನ್ನಡ ಸಂಸ್ಕೃತಿ ಹಬ್ಬ ಹಾಗೂ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮದಲ್ಲಿ ತಮ್ಮ ಸಂಗಡಿಗರೊಂದಿಗೆ ಭಾಗವಹಿಸಿ ಕನ್ನಡ ಸಂಗೀತದ ಕಲರವ ಎಬ್ಬಿಸಿದರು. ಅಲ್ಲಿಯ ಕನ್ನಡಿಗರು ಅಭಿಮಾನದಿಂದ ಚಪ್ಪಾಳೆ ತಟ್ಟಿ ಕೇಕೇ ಹಾಕಿ ಕನ್ನಡದ ಅಭಿಮಾನ ಮೆರೆದರು. ವಿದೇಶದಲ್ಲಿ ತಮ್ಮ ಪ್ರತಿಭೆ ತೋರಿಸಿದ ವೆಂಕಟೇಶಮೂರ್ತಿ ಶಿರೂರ ಅವರನ್ನು ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ, ಪಪಂ ಮಾಜಿ ಸದಸ್ಯ ರಫೀಕ ಫೀರಖಾನ, ಭೀಮಸೇನ ದೇಸಾಯಿ, ಸೈದುಸಾಬ ಚೌಧರಿ, ಗಣ್ಯರಾದ ಮಹಾಂತೇಶ ಮೆಣಸಗಿ, ಸಂಕಣ್ಣ ಕರಿಮರಿ, ರಂಗನಗೌಡ ಪಾಟೀಲ, ಸುರೇಶ ಜಾಲಿಹಾಳ, ಸುನೀಲ ಗೌಡರ, ರಂಗಣ್ಣ ದೇಸಾಯಿ, ಪ್ರಭು ಘಟ್ಟದ ಸೇರಿದಂತೆ ಹಲವಾರು ಸಂಗೀತ ಅಭಿಮಾನಿಗಳು ಅಭಿನಂದಿಸಿದ್ದಾರೆ.