೨೪ರಂದು ಕೊಕ್ಕನೂರಲ್ಲಿ ಆರೋಗ್ಯ ತಪಾಸಣೆ ಶಿಬಿರ: ಡಾ.ವಿರೂಪಾಕ್ಷಪ್ಪ

| Published : Nov 22 2024, 01:18 AM IST

೨೪ರಂದು ಕೊಕ್ಕನೂರಲ್ಲಿ ಆರೋಗ್ಯ ತಪಾಸಣೆ ಶಿಬಿರ: ಡಾ.ವಿರೂಪಾಕ್ಷಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಮಲೇಬೆನ್ನೂರು ಸಮೀಪದ ಕೊಕ್ಕನೂರು ಗ್ರಾಮದ ಪವನದೇವ ಕಲ್ಯಾಣ ಮಂಟಪದಲ್ಲಿ ನ.೨೪ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ ಎಂದು ಹೆರಿಗೆ ತಜ್ಞ ಡಾ. ವಿರೂಪಾಕ್ಷಪ್ಪ ಹೇಳಿದ್ದಾರೆ.

- ಮಕ್ಕಳು, ಕಣ್ಣು, ಹೃದಯ, ಕೀಲುಮೂಳೆ ತಜ್ಞರು ಭಾಗಿ - - - ಮಲೇಬೆನ್ನೂರು: ಇಲ್ಲಿಗೆ ಸಮೀಪದ ಕೊಕ್ಕನೂರು ಗ್ರಾಮದ ಪವನದೇವ ಕಲ್ಯಾಣ ಮಂಟಪದಲ್ಲಿ ನ.೨೪ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ ಎಂದು ಹೆರಿಗೆ ತಜ್ಞ ಡಾ. ವಿರೂಪಾಕ್ಷಪ್ಪ ಹೇಳಿದರು.

ನಂದಿ ವಿವಿಧೋದ್ದೇಶ ಸಹಕಾರ ಸಂಘದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಬರುವ ದಿನಗಳಲ್ಲಿ ಕುಗ್ರಾಮಗಳಲ್ಲೂ ಆರೋಗ್ಯ ತಪಾಸಣಾ ಶಿಬಿರಗಳನ್ನು ಹಮ್ಮಿಕೊಳ್ಳಲಾಗುವುದು. ನೇತ್ರ ತಪಾಸಣೆ, ಹೃದಯ ತಪಾಸಣೆ, ಮಕ್ಕಳು, ಕೀಲುಮೂಳೆ ಮತ್ತಿತರ ನುರಿತ ತಜ್ಞ ವೈದ್ಯರು ಶಿಬಿರದಲ್ಲಿ ಭಾಗವಹಿಸಲಿದ್ದಾರೆ. ರೋಗಿಗಳ ಅಗತ್ಯವಿರುವ ಉಚಿತ ಔಷಧಿ ವಿತರಿಸಲಾಗುವುದು ಎಂದರು.

ಸಹಕಾರ ಭಾರತಿ ಸಮಾವೇಶ ಸ್ವಾಗತ ಸಮಿತಿ ಕಾರ್ಯದರ್ಶಿ ಇಂದೂಧರ್ ಮಾತನಾಡಿ, ಸಹಕಾರ ಭಾರತಿ ರಾಜ್ಯ ಸಮಾವೇಶ ನ.೨೨ರಂದು ದಾವಣಗೆರೆಯ ಶಾಮನೂರು ಪಾರ್ವತಮ್ಮ ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ. ಹರಿಹರ ತಾಲೂಕಿಂದ ಸಾವಿರಾರು ಸಂಖ್ಯೆಯಲ್ಲಿ ಸಹಕಾರಿ ಸದಸ್ಯರು ಭಾಗವಹಿಸಬೇಕು ಎಂದು ತಿಳಿಸಿದರು.

ಸಹಕಾರ ಭಾರತಿ ಎನ್ನುವುದು ದೇಶವ್ಯಾಪಿ ಸರ್ಕಾರೇತರ ಸಂಘಟನೆಯಾಗಿದೆ. ಕೃಷಿ ಪತ್ತಿನ ಸಂಘ, ಸೌಹಾರ್ದ ಸಹಕಾರಿಗಳು, ಮಾರಾಟ ಸಹಕಾರ ಸಂಘಗಳು, ಡೇರಿ ಮತ್ತಿತರೆ ಸಹಕಾರ ಸಂಸ್ಥೆಗಳಿಂದ ಉದಾರ ದೇಣಿಗೆ ಬಯಸಿದೆ. ಅಂಥ ಸಂಘಗಳ ಸದಸ್ಯರು ಭಾಗವಹಿಸುವ ಸಮಾವೇಶ ಇದಾಗಿದೆ. ಅವುಗಳ ಬಲವರ್ಧನೆಗೂ ಶ್ರಮಿಸುತ್ತಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ನಂದಿ ಸೌಹಾರ್ದ ಸಹಕಾರಿಯ ಅಧ್ಯಕ್ಷ ಬಿ.ಬಸವರಾಜಪ್ಪ, ಉಪಾಧ್ಯಕ್ಷ ಆಂಜನೇಯ, ಶೋಭಾ, ಎನ್‌ಪಿ. ತಿಮ್ಮನಗೌಡ, ನಾಗರಾಜ್, ವೀರನಗೌಡ, ಡಾ.ಚಂದ್ರಶೇಖರ್, ಪರಮೇಶ್ವರಪ್ಪ ಮತ್ತಿತರರು ಇದ್ದರು.

- - - -೨೧ಎಂಬಿಆರ್೧: ಮಲೇಬೆನ್ನೂರಿನ ಸುದ್ದಿಗೋಷ್ಠಿಯಲ್ಲಿ ವೈದ್ಯರು ಮುಖಂಡರು ಆರೋಗ್ಯ ಶಿಬಿರ ಆಯೋಜನೆ ಕುರಿತು ಮಾಹಿತಿ ನೀಡಿದರು.