ಮಕ್ಕಳ ದೃಢ ಕಲಿಕೆಗಾಗಿ ಶಿಕ್ಷಕರು ಕಾರ್ಯ ಪ್ರವೃತ್ತರಾಗಿ: ಪುರುಷೋತ್ತಮ

| Published : Nov 22 2024, 01:18 AM IST

ಸಾರಾಂಶ

ಕಲಿಕಾಫಲ ಆಧಾರಿತವಾಗಿ ತರಬೇತಿ ಹಮ್ಮಿಕೊಳ್ಳಲಾಗಿದ್ದು ಮಕ್ಕಳ ಓದು-ಬರಹ ಸರಳ ಲೆಕ್ಜಾಚಾರ, ದೃಢೀಕರಣ ಮಾಡುವುದು ಶಿಕ್ಷಕರ ಜವಾಬ್ದಾರಿಯಾಗಿದೆ. ಶಿಕ್ಷಕರು ತರಗತಿ ಕೋಣೆಯಲ್ಲಿ ಮೌಲ್ಯಮಾಪನ ಪ್ರಕ್ರಿಯೆ ನಿರ್ವಹಿಸುವಾಗ ಮಕ್ಕಳಿಗೆ ಮಾರ್ಗದರ್ಶನ ಮಾಡಿದರೆ ಕಲಿಕೆ ದೃಢವಾಗುವ ಜತೆಗೆ ಪರಿಣಾಮಕಾರಿಯಾಗಲಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಶಿಕ್ಷಕರು ತರಗತಿಯಲ್ಲಿ ಕಲಿಕಾ ಫಲ ಆಧಾರಿತ ಸಾಮರ್ಥ್ಯಗಳನ್ನು ಕಲಿಸುವಲ್ಲಿ ಕಾರ್ಯ ಪ್ರವೃತ್ತರಾಗುವಂತೆ ಎಂದು ಉಪ ನಿರ್ದೇಶಕ (ಅಭಿವೃದ್ಧಿ) ಪುರುಷೋತ್ತಮ ಹೇಳಿದರು.

ಮಂಡ್ಯದ ಸಂತ ಜೋಸೆಫರ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ಜಿಲ್ಲೆಯ ಕನ್ನಡ ಮತ್ತು ಸಮಾಜ ವಿಜ್ಞಾನ ಶಿಕ್ಷಕರಿಗೆ ಆಯೋಜಿಸಿದ್ದ ಐದು ದಿನಗಳ ಜಿಲ್ಲಾ ಮಟ್ಟದ ಸಚೇತನ ತರಬೇತಿಗೆ ಚಾಲನೆ ನೀಡಿ ಮಾತನಾಡಿ, ಕಲಿಕಾಫಲ ಆಧಾರಿತವಾಗಿ ತರಬೇತಿ ಹಮ್ಮಿಕೊಳ್ಳಲಾಗಿದ್ದು ಮಕ್ಕಳ ಓದು-ಬರಹ ಸರಳ ಲೆಕ್ಜಾಚಾರ, ದೃಢೀಕರಣ ಮಾಡುವುದು ಶಿಕ್ಷಕರ ಜವಾಬ್ದಾರಿಯಾಗಿದೆ. ಶಿಕ್ಷಕರು ತರಗತಿ ಕೋಣೆಯಲ್ಲಿ ಮೌಲ್ಯಮಾಪನ ಪ್ರಕ್ರಿಯೆ ನಿರ್ವಹಿಸುವಾಗ ಮಕ್ಕಳಿಗೆ ಮಾರ್ಗದರ್ಶನ ಮಾಡಿದರೆ ಕಲಿಕೆ ದೃಢವಾಗುವ ಜತೆಗೆ ಪರಿಣಾಮಕಾರಿಯಾಗಲಿದೆ ಎಂದರು.

ನೈಜ ಜೀವನಕ್ಕೆ ಸಂಬಂಧೀಕರಿಸಿ ಅನುಭವಾತ್ಮಕ ಕಲಿಕೆಯನ್ನು ದೃಢೀಕರಿಸುವುದು ಶಿಕ್ಷಕರ ಆದ್ಯ ಜವಾಬ್ದಾರಿ. ಮೌಲ್ಯಾಂಕನ ಪರೀಕ್ಷೆ ಬಗ್ಗೆ ಶಿಕ್ಷಕರು ತಿಳಿವಳಿಕೆ ಪಡೆಯುವ ಜತೆಗೆ ಪ್ರಶ್ನೆ ಪತ್ರಿಕೆ ರಚಿಸುವ ಕೌಶಲವನ್ನು ಪಡೆದುಕೊಳ್ಳಬೇಕಿದೆ. ಶಿಕ್ಷಕರು ಪೋಕ್ಸೋ ಕಾಯಿದೆ ಬಗ್ಗೆ ಅರಿವು ಪಡೆದು ಕಲಿಕಾ ಪೂರಕ ವಾತಾವರಣ ಸೃಷ್ಟಿಸಬೇಕು ಎಂದರು.

ಕಾರ್ಯಗಾರದಲ್ಲಿ ಜಿಲ್ಲೆಯ ೮೨ ಶಿಕ್ಷಕರು ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂತ ಜೋಸೆಫರ ಶಿಕ್ಷಕರ ತರಬೇತಿ ಸಂಸ್ಥೆಯ ಪ್ರಾಂಶುಪಾಲೆ ಸಿಸ್ಟರ್ ವೀಣಾ ವಹಿಸಿದ್ದರು. ನೋಡಲ್ ಅಧಿಕಾರಿಗಳಾದ ಎಂ.ಶೈಲಜಾ, ಎಚ್.ಕೆ. ಪ್ರಶಾಂತ್ ಕುಮಾರ್, ಸಂಪನ್ಮೂಲ ವ್ಯಕ್ತಿಗಳಾದ ಎಸ್.ಸಿ.ಮಂಗಳಾ, ಚಲುವರಾಜು, ಮಂಜು, ಶಿವಪ್ರಕಾಶ್, ಮಂಜುನಾಥ, ಸಂಗಪ್ಪ ರಾಜನಾಳ್, ವೆಂಕಟೇಗೌಡ, ಉಮೇಶ್ ಇಟಗಿ ಇದ್ದರು.