ಮನುಷ್ಯನಿಗೆ ಹಣ, ಆಸ್ತಿಗಿಂತ ಆರೋಗ್ಯ ಮುಖ್ಯ: ಬಿ.ವಿವೇಕಾನಂದ

| Published : Nov 10 2025, 01:00 AM IST

ಸಾರಾಂಶ

ಶುದ್ಧ ಗಾಳಿ, ನೀರು ಮತ್ತು ಪರಿಸರ ಮನುಷ್ಯನನ್ನು ರೋಗಗಳಿಂದ ದೂರವಿಡುತ್ತದೆ. ಆರೋಗ್ಯವಂತ ಜೀವನ ಶೈಲಿ, ಪೌಷ್ಟಿಕಾಂಶ ಆಹಾರ ಸೇವನೆಯಿಂದ ರೋಗಮುಕ್ತ ಜೀವನ ನಡೆಸಬಹುದು. ಇತ್ತೀಚಿನ ದಿನಗಳಲ್ಲಿ ಅತಿಯಾದ ಪ್ಲಾಸ್ಟಿಕ್ ಬಳಕೆ, ವಿಷಾಅನಿಲ ಗಳಿಂದ ಮನುಷ್ಯ ಕ್ಯಾನ್ಸರ್ ರೋಗಕ್ಕೆ ತುತ್ತಾಗುತ್ತಿದ್ದಾನೆ.

ಕನ್ನಡಪ್ರಭ ವಾರ್ತೆ ಮದ್ದೂರು

ಮನುಷ್ಯನಿಗೆ ಹಣ ಅಥವಾ ಆಸ್ತಿಗಿಂತ ಮಿಗಿಲಾಗಿರುವುದು ಆರೋಗ್ಯವಾಗಿದೆ. ಕಾಲ ಕಾಲಕ್ಕೆ ವೈದ್ಯರಲ್ಲಿ ತಪಾಸಣೆಯೊಂದಿಗೆ ಸಲಹೆ ಸೂಚನೆ ಪಾಲಿಸುವುದರಿಂದ ಆರೋಗ್ಯವಂತ ಜೀವನ ಸಾಧ್ಯವಾಗುತ್ತದೆ ಎಂದು ವಿದ್ಯಾವರ್ಧಕ ಟ್ರಸ್ಟ್ ಅಧ್ಯಕ್ಷ, ಜಿಪಂ ಮಾಜಿ ಅಧ್ಯಕ್ಷ ಬಿ.ವಿವೇಕಾನಂದ ಹೇಳಿದರು.

ತಾಲೂಕಿನ ಕೊಪ್ಪ ಗ್ರಾಮದಲ್ಲಿ ಶನಿವಾರ ಸ್ವಾತಂತ್ರ ಹೋರಾಟಗಾರ, ಮಾಜಿ ಶಾಸಕ ಎ.ಡಿ.ಬಿಳಿಗೌಡ ಅವರ 21ನೇ ವರ್ಷದ ಸ್ಮರಣಾರ್ಥ ಆದಿಚುಂಚನಗಿರಿ ವೈದ್ಯಕೀಯ ಕಾಲೇಜು, ಬೆಂಗಳೂರು ಕಿದ್ವಾಯಿ ಸ್ಮಾರಕ ಗ್ರಂಥಿ ಹಾಗೂ ವಿದ್ಯಾವರ್ಧಕ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಬೃಹತ್ ಆರೋಗ್ಯ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

ಗ್ರಾಮೀಣ ಭಾಗದ ಜನರು ನಗರ ಅಥವಾ ಪಟ್ಟಣ ಪ್ರದೇಶಗಳಿಗೆ ಹೋಗಿ ದುಬಾರಿ ಹಣ ತೆತ್ತು ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಪಡೆಯಬೇಕಾದ ಇಂದಿನ ದಿನಗಳಲ್ಲಿ ಜನರ ಮನೆ ಬಾಗಿಲಿಗೆ ಆರೋಗ್ಯ ಸೇವೆ ಒದಗಿಸಬೇಕೆಂಬ ಉದ್ದೇಶದಿಂದ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದರು.

ಶುದ್ಧ ಗಾಳಿ, ನೀರು ಮತ್ತು ಪರಿಸರ ಮನುಷ್ಯನನ್ನು ರೋಗಗಳಿಂದ ದೂರವಿಡುತ್ತದೆ. ಆರೋಗ್ಯವಂತ ಜೀವನ ಶೈಲಿ, ಪೌಷ್ಟಿಕಾಂಶ ಆಹಾರ ಸೇವನೆಯಿಂದ ರೋಗಮುಕ್ತ ಜೀವನ ನಡೆಸಬಹುದು. ಇತ್ತೀಚಿನ ದಿನಗಳಲ್ಲಿ ಅತಿಯಾದ ಪ್ಲಾಸ್ಟಿಕ್ ಬಳಕೆ, ವಿಷಾಅನಿಲ ಗಳಿಂದ ಮನುಷ್ಯ ಕ್ಯಾನ್ಸರ್ ರೋಗಕ್ಕೆ ತುತ್ತಾಗುತ್ತಿದ್ದಾನೆ. ಕಾಲಕಾಲಕ್ಕೆ ದೇಹ ತಪಾಸಣೆ ಮಾಡಿಕೊಳ್ಳುವ ಮೂಲಕ ಪ್ರಾಥಮಿಕ ಹಂತದಲ್ಲಿಯೇ ಕ್ಯಾನ್ಸರ್ ರೋಗವನ್ನು ತಡೆಗಟ್ಟಬಹುದು ವಿವೇಕಾನಂದ ಸಲಹೆ ನೀಡಿದರು.

ಆದಿಚುಂಚನಗಿರಿ ಆಸ್ಪತ್ರೆ ಮತ್ತು ಕಿದ್ವಾಯಿ ಆರೋಗ್ಯ ಸಂಸ್ಥೆ ನುರಿತ ವೈದ್ಯರು ಶಿಬಿರದಲ್ಲಿ 780 ಕ್ಕೂ ಜನರನ್ನು ತಪಾಸಣೆಗೊಳಪಡಿಸುವ ಮೂಲಕ 48 ಜನರಿಗೆ ನೇತ್ರ ಮತ್ತು ಶಸ್ತ್ರ ಚಿಕಿತ್ಸೆಗೆ ಆಯ್ಕೆ ಮಾಡಲಾಯಿತು.

ಹೃದಯ ಮತ್ತು ನರರೋಗ, ಮೂತ್ರಪಿಂಡ ಕಾಯಿಲೆ , ಮಧುಮೇಹ ಮತ್ತು ಕ್ಯಾನ್ಸರ್ ರೋಗ ಕುರಿತು ತಪಾಸಣೆ ನಡೆಸುವ ಮೂಲಕ ರೋಗಿಗಳಿಗೆ ಸಲಹೆ ಸೂಚನೆಗಳನ್ನು ನೀಡಿದರು. ಫಸ್ಟ್ ಆಡಳಿತ ಅಧಿಕಾರಿ ಡಿ.ಪಿ.ಸ್ವಾಮಿ, ಪ್ರಾಂಶುಪಾಲ ಹನುಮಂತರಾಯ, ಮುಖ್ಯ ಶಿಕ್ಷಕ ಡಾಕ್ಟರ್ ಮುಖ್ಯ ಶಿಕ್ಷಕ ಡಾ.ಕೆ. ಎಂ. ಶಿವಕುಮಾರ್ ಇದ್ದರು.