ಸಾರಾಂಶ
ಸುರಪುರ ನಗರದ ನಿಷ್ಠಿ ಕಡ್ಲಪ್ಪನವರ ಮಠದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣಾ ಶಿಬಿರಕ್ಕೆ ಪ್ರಭುಲಿಂಗ ಸ್ವಾಮೀಜಿ ಚಾಲನೆ ನೀಡಿದರು. ಸಾರ್ವಜನಿಕರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು.
ಕನ್ನಡಪ್ರಭ ವಾರ್ತೆ ಸುರಪುರ
ಮನುಷ್ಯನು ತನ್ನ ಜೀವನಮಾನದಲ್ಲಿ ಹಣ ಉಳಿತಾಯ ಮಾಡುವುದಕ್ಕಿಂತ ಆರೋಗ್ಯ ಸಂರಕ್ಷಿಸಿಕೊಂಡರೇ ಅದೇ ದೊಡ್ಡ ಸಂಪತ್ತಾಗಿದೆ ಎಂದು ಡಾ. ಹರ್ಷವರ್ಧನ ರಫಗಾರ ಹೇಳಿದರು. ನಗರದ ನಿಷ್ಠಿ ಕಡ್ಲಪ್ಪನವರ ಮಠದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದ ಅವರು, ಮಠಗಳು ಜನರ ಆರೋಗ್ಯದ ಬಗೆಗೆ ಕಾಳಜಿ ವಹಿಸಿರುವುದು ಹೆಮ್ಮೆಯ ವಿಷಯ. ವಿದ್ಯೆ ಜತೆಗೆ ಆರೋಗ್ಯ ಶಿಬಿರ ಏರ್ಪಡಿಸಿ ಸಮಾಜಿಮುಖಿ ಕಾರ್ಯ ಮಾಡುತ್ತಿರುವುದು ಎಂದರು. ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ನಿಷ್ಠಿ ಕಡ್ಲಪ್ಪನವರ ಮಠದ ಪೀಠಾಧಿಪತಿ ಪ್ರಭುಲಿಂಗ ಸ್ವಾಮೀಜಿ, ಮಠದ ಭಕ್ತರು ಆರೋಗ್ಯದೆಡೆಗೆ ಜಾಗೃತಿ ವಹಿಸಬೇಕು. ಆರೋಗ್ಯ ಶಿಬಿರದ ಲಾಭ ಪಡೆಯಬೇಕು. ವೈದ್ಯರ ಮಾಹಿತಿ ಪಡೆದು ಆರೋಗ್ಯ ಸಂರಕ್ಷಿಸಿಕೊಳ್ಳಬೇಕು ಎಂದರು. ಡಾ. ಶಮೀಮ್ ಅಹಮದ್ ಹಾಗೂ ಆರ್‌ಬಿಎಸ್‌ಕೆ ತಂಡದ ವೈದ್ಯರ ತಂಡ ಕಾರ್ಯ ನಿರ್ವಹಿಸಿತು. ರಾಜಾ ಚನ್ನಪ್ಪ ನಾಯಕ, ರಾಜಾ ಹುಚ್ಚಪ್ಪ ನಾಯಕ, ಪಂಕಜ ಕುಮಾರ, ಸುನೀಲ ಪಂಚಾಂಗಮಠ, ಸಿದ್ದಲಿಂಗ ಸ್ವಾಮೀಜಿ, ಎಚ್. ರಾಠೋಡ್, ಶರಣಬಸಪ್ಪ ಯಾಳವಾರ, ಮಹೇಶ ಹಳ್ಳದ್, ಮಂಜುನಾಥ ಗಚ್ಚಿಮನಿ, ಮಂಜುನಾಥ ಹೂಗಾರ ಸೇರಿದಂತೆ ಇತರರಿದ್ದರು.