ಸದೃಢ ಮಕ್ಕಳು ದೇಶದ ಅಮೂಲ್ಯ ಆಸ್ತಿ

| Published : Sep 02 2024, 02:07 AM IST

ಸಾರಾಂಶ

ಮಗು ಯಾವುದೇ ಜಾತಿ, ಜನಾಂಗ, ಲಿಂಗ, ಧರ್ಮಕ್ಕೆ ಸೇರಿದ್ದರೂ ಅದು ಆ ದೇಶದ ಅಮೂಲ್ಯವಾದ ಆಸ್ತಿಯಾಗಿದೆ. ನಾಮ ಮಾತ್ರಕ್ಕೆ ಮಗು ಇದ್ದರೆ ಅದು ದೇಶದ ಆಸ್ತಿಯಾಗಲಾರದು. ಮಾನಸಿಕವಾಗಿ, ದೈಹಿಕವಾಗಿ ಸದೃಢವಾಗಿದ್ದಾಗ ಮಾತ್ರ ಆ ಮಗು ದೇಶದ ಆಸ್ತಿ, ಸಂಪತ್ತಾಗಲು ಸಾಧ್ಯ.

ಕನ್ನಡಪ್ರಭ ವಾರ್ತೆ ಕೆಜಿಎಫ್ಮಾನವ ಕುಲಕ್ಕೆ ದೇವರು ನೀಡಿರುವಂತಹ ಬಹುದೊಡ್ಡ ಕೊಡುಗೆ ಮಕ್ಕಳು. ಮಕ್ಕಳಿದ್ದರೆ ಮಾತ್ರ ಮಾನವ ಕುಲದ ಅಸ್ತಿತ್ವ ಇರಲು ಸಾಧ್ಯ ಎಂದು ಸಾರ್ವಜನಿಕ ಆಸ್ಪತ್ರೆಯ ಜಿಲ್ಲಾಶಸ್ತ್ರ ಚಿಕಿತ್ಸಕ ಡಾ.ಸುರೇಶ್‌ಕುಮಾರ್ ಹೇಳಿದರು.ನಗರದ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯಿಂದ ವಿಶ್ವ ಪೌಷ್ಟಿಕಾಂಶ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಮಗು ದೇಶದ ಸಂಪತ್ತಾಗಬೇಕು

ಒಂದು ಮಗು ಯಾವುದೇ ಜಾತಿ, ಜನಾಂಗ, ಲಿಂಗ, ಧರ್ಮಕ್ಕೆ ಸೇರಿದ್ದರೂ ಅದು ಆ ದೇಶದ ಅಮೂಲ್ಯವಾದ ಆಸ್ತಿಯಾಗಿದೆ. ನಾಮ ಮಾತ್ರಕ್ಕೆ ಮಗು ಇದ್ದರೆ ಅದು ದೇಶದ ಆಸ್ತಿಯಾಗಲಾರದು. ಮಾನಸಿಕವಾಗಿ, ದೈಹಿಕವಾಗಿ ಸದೃಢವಾಗಿದ್ದಾಗ ಮಾತ್ರ ಆ ಮಗು ದೇಶದ ಆಸ್ತಿ, ಸಂಪತ್ತಾಗಲು ಸಾಧ್ಯ. ಮಗು ಹುಟ್ಟಿದಾಗಿನಿಂದ ಅದರ ಸರ್ವಾಂಗೀಣ ಬೆಳವಣಿಗೆಗೆ ಅಗತ್ಯವಾದ ಪೂರಕವಾದ ವಾತಾವರಣ ಒದಗಿಸಿಕೊಡಬೇಕಾದ ಜವಾಬ್ದಾರಿ ಆ ಮಗುವಿನ ಪೋಷಕರು ಮತ್ತು ಸರ್ಕಾರದ ಮೇಲಿದೆ ಎಂದರು.

ಆದರೆ ಇಂದು ಮಕ್ಕಳಿಗೆ ಅವಶ್ಯಕವಾದ ಪೌಷ್ಟಿಕಾಂಶಗಳು ಅಗತ್ಯ ಪ್ರಮಾಣದಲ್ಲಿ ನೀಡಲು ಸರಕಾರ ಅಂಗನವಾಡಿಗಳನ್ನು ತೆರೆದಿದ್ದು, ಮಕ್ಕಳ ಬೆಳವಣಿಗೆಗೆ ಪೂರಕವಾಗುವ ಪೌಷ್ಟಿಕಾಂಶ ನೀಡುತ್ತಿರುವುದರಿಮದ ಲಕ್ಷಾಂತರ ಮಕ್ಕಳು ಪೌಷ್ಟಿಕತೆಯಿಂದ ಕೂಡಿದ್ದು ಇದ್ದರಿಂದ ಸದೃಢ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದರು. ಪ್ರಕೃತಿದತ್ತ ಆಹಾರ ಬಳಸಿ

ವಕೀಲರ ಸಂಘದ ಅಧ್ಯಕ್ಷ ಎಸ್.ಎನ್.ರಾಜಗೋಪಾಲಗೌಡ ಮಾತನಾಡಿ, ಪ್ರಕೃತಿದತ್ತವಾಗಿ ಬೆಳೆದ ಆಹಾರದಲ್ಲಿ ಹೆಚ್ಚಿನ ಪೌಷ್ಟಿಕಾಂಶಗಳು ಇರುತ್ತವೆ. ಪೌಷ್ಟಿಕ ಆಹಾರದೊಂದಿಗೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಸರ್ಕಾರ ಈ ನಿಟ್ಟಿನಲ್ಲಿ ಹೆಚ್ಚಿನ ಪೌಷ್ಟಿಕಾಂಶಯುಕ್ತ ಪದಾರ್ಥಗಳನ್ನು ನೀಡಲು ಕ್ರಮ ವಹಿಸಿದ್ದು, ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ತಾಲೂಕು ಆರೋಗ್ಯಧಿಕಾರಿ ಡಾ.ಪದ್ಮಾವತಿ, ಪ್ರಧಾನ ಸಿವಿಲ್ ನ್ಯಾಯಾಧೀಶರಾದ ವಿನೋದ್ ಕುಮಾರ್ ಎಂ, ಸಿಡಿಪಿಒ ಎಸ್.ಟಿ.ರಾಜೇಶ್, ವಕೀಲರ ಸಂಘದ ಉಪಾಧ್ಯಕ್ಷ ಮಣಿವಣ್ಣನ್, ರಾಬರ್ಟ್‌ಸನ್‌ಪೇಟೆ ವೃತ್ತ ನಿರಿಕ್ಷರಾದ ನವೀನ್ ಇದ್ದರು.