ಯೋಗದಿಂದ ಮಾತ್ರ ಆರೋಗ್ಯಪೂರ್ಣ ಜೀವನ: ಗಣೇಶ್

| Published : Feb 06 2025, 12:18 AM IST

ಸಾರಾಂಶ

ರಥಸಪ್ತಮಿ ಆಚರಣೆ ಅಂಗವಾಗಿ ಟರ್ಪ್ ಮೈದಾನದಲ್ಲಿ 108 ಸೂರ್ಯನಮಸ್ಕಾರ ಮತ್ತು ಯೋಗಾಭ್ಯಾಸ ನಡೆಯಿತು. ನಿರಂತರ ಯೋಗದಿಂದ ಮಾತ್ರ ಆರೋಗ್ಯ ಪೂರ್ಣ ಜೀವನ ನಡೆಸಲು ಸಾಧ್ಯ ಎಂದು ಕಿಬ್ಬೆಟ್ಟ ಗಣೇಶ್‌ ತಿಳಿಸಿದರು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ರಥಸಪ್ತಮಿ ಆಚರಣೆ ಅಂಗವಾಗಿ ಇಲ್ಲಿನ ಟರ್ಫ್ ಮೈದಾನದಲ್ಲಿ ಮಂಗಳವಾರ ಬೆಳಗ್ಗೆ 108 ಸೂರ್ಯ ನಮಸ್ಕಾರ ಮತ್ತು ಯೋಗಾಭ್ಯಾಸ ನಡೆಯಿತು.

ನಿರಂತರ ಯೋಗದಿಂದ ಮಾತ್ರ ಆರೋಗ್ಯಪೂರ್ಣ ಜೀವನ ನಡೆಸಲು ಸಾಧ್ಯ. ದೇಹದ ಆರೋಗ್ಯದೊಂದಿಗೆ ಮಾನಸಿಕ ಒತ್ತಡವೂ ನಿವಾರಣೆಯಾಗಿ ಮನಸ್ಸಿನಲ್ಲಿ ಏಕಾಗ್ರತೆ ಮೂಡುತ್ತದೆ ಎಂದು ನಿರಂತರ ಯೋಗ ಕೇಂದ್ರದ ಶಿಕ್ಷಕರಾದ ಕಿಬ್ಬೆಟ್ಟ ಗಣೇಶ್ ಹೇಳಿದರು.

ಯೋಗ ಕರ್ಮಸ್ಯ ಕೌಶಲ ಕೇಂದ್ರ, ನಿರಂತರ ಯೋಗ ಕೇಂದ್ರ, ಆಯುಷ್ ಇಲಾಖೆ ಹಾಗೂ ಜ್ಞಾನ ವಿಕಾಸ ಶಾಲೆಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.