ಹಾವೇರಿ ಜಿಲ್ಲೆಯ ವಿವಿಧೆಡೆ ತಂಪೆರೆದ ಮಳೆ

| Published : May 12 2024, 01:20 AM IST

ಸಾರಾಂಶ

ಜಿಲ್ಲೆಯ ವಿವಿಧೆಡೆ ಶನಿವಾರ ಮಳೆಯಾಗಿದ್ದು, ರಣ ಬಿಸಿಲಿನಿಂದ ಕಂಗೆಟ್ಟಿದ್ದ ಜನತೆಗೆ ಮಳೆಯು ತಂಪೆರೆದಿದೆ.

ಹಾವೇರಿ: ಜಿಲ್ಲೆಯ ವಿವಿಧೆಡೆ ಶನಿವಾರ ಮಳೆಯಾಗಿದ್ದು, ರಣ ಬಿಸಿಲಿನಿಂದ ಕಂಗೆಟ್ಟಿದ್ದ ಜನತೆಗೆ ಮಳೆಯು ತಂಪೆರೆದಿದೆ.

ಹಾವೇರಿ ನಗರದಲ್ಲಿ ಸಂಜೆ 6 ಗಂಟೆ ಸುಮಾರಿಗೆ ಆರಂಭವಾದ ಮಳೆ ಸುಮಾರು ಅರ್ಧ ತಾಸು ಸುರಿದಿದೆ. ಗುಡುಗು, ಮಿಂಚು ಸಹಿತವಾಗಿ ಮಳೆಯಾಗಿದ್ದು, ಕೆಲ ಸಮಯ ವಿದ್ಯುತ್‌ ವ್ಯತ್ಯಯವಾಗಿದೆ. ಶಿಗ್ಗಾಂವಿ, ಬ್ಯಾಡಗಿ, ಹಾನಗಲ್ಲ ತಾಲೂಕಿನಲ್ಲೂ ಗಾಳಿ, ಗುಡುಗು ಸಹಿತವಾಗಿ ಸಾಧಾರಣ ಮಳೆಯಾಗಿದೆ. ರಣ ಬಿಸಿಲಿನಿಂದ ಕಂಗೆಟ್ಟಿದ್ದ ಜನತೆಗೆ ತಂಪು ನೀಡಿದೆ. ಕಳೆದ ಕೆಲವು ದಿನಗಳಿಂದ ತಾಪಮಾನದಲ್ಲಿ ಭಾರಿ ಏರಿಕೆ ಕಂಡಿದ್ದರಿಂದ ಸೆಕೆ ತಾಳಲಾರದೇ ಜನತೆ ಕಂಗೆಟ್ಟಿದ್ದರು. ಕೆಲವು ಭಾಗಗಳಲ್ಲಿ ಮಳೆಯಾಗದಿದ್ದರೂ ತಂಪನೆಯ ವಾತಾವರಣ ಉಂಟಾಗಿದೆ.