ಜಿಲ್ಲೆಯಾದ್ಯಂತ ಮತ್ತೆ ಅಬ್ಬರಿಸಿದ ಮಳೆ

| Published : Oct 21 2025, 01:00 AM IST

ಜಿಲ್ಲೆಯಾದ್ಯಂತ ಮತ್ತೆ ಅಬ್ಬರಿಸಿದ ಮಳೆ
Share this Article
  • FB
  • TW
  • Linkdin
  • Email

ಸಾರಾಂಶ

ಅಕಾಲಿಕ ಮಳೆಗೆ ಹಲವು ಗ್ರಾಮಗಳಲ್ಲಿನ ಕೆರೆಗಳ ಕೋಡಿ ಒಡೆದು ಕೃಷಿ ಜಮೀನು ಜಲಾವೃತಗೊಂಡಿದೆ. ಕೆಲವು ಗ್ರಾಮಗಳ ಸಂಪರ್ಕ ಕೂಡ ಕಡಿತಗೊಂಡಿದೆ. ಮನೆಗಳಿಗೂ ಕೂಡ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಈಗಾಗಲೇ ಕಟಾವಿಗೆ ಬಂದಿರುವ ಮೆಕ್ಕೆಜೋಳ ಬೆಳೆ ಹಾಗೂ ಕಟಾವು ಮಾಡಿರುವ ಜೋಳದ ಅವಕ ಮಳೆ ನೀರಿಗೆ ಆಹುತಿಯಾಗಿ ರೈತರ ಕಣ್ಣಲ್ಲಿನೀರು ತರಿಸಿದೆ. ಅಲ್ಲದೆ ಈಗಾಗಲೇ ಕೈಗೊಂಡಿರುವ ಕೆರೆ ಅಚ್ಚುಕಟ್ಟು ಪ್ರದೇಶದ ಭತ್ತ ಬೆಳೆ ಕೂಡ ಜಲಾವೃತಗೊಂಡಿರುವುದು ಕಂಡುಬಂದಿದೆ. ಕೆರೆ ಅಚ್ಚುಕಟ್ಟು ಪ್ರದೇಶದಲ್ಲಿನ ಫಸಲಿಗೆ ಬಂದಿರುವ ಅಡಿಕೆ, ಬಾಳೆ, ತೆಂಗು, ತರಕಾರಿ ಬೆಳೆಗಳು ಹಾಗೂ ಹೂ ತೋಟಗಾರಿಕೆ ಬೆಳೆಗಳ ಪ್ರದೇಶಕ್ಕೆ ನೀರು ನುಗ್ಗಿದೆ.

ಕನ್ನಡಪ್ರಭ ವಾರ್ತೆ ಅರಕಲಗೂಡು

ತಾಲೂಕಿನಾದ್ಯಂತ ಸುರಿದ ಅಕಾಲಿಕ ಮಳೆಗೆ ಹಲವು ಗ್ರಾಮಗಳಲ್ಲಿನ ಕೆರೆಗಳ ಕೋಡಿ ಒಡೆದು ಕೃಷಿ ಜಮೀನು ಜಲಾವೃತಗೊಂಡಿದೆ. ಕೆಲವು ಗ್ರಾಮಗಳ ಸಂಪರ್ಕ ಕೂಡ ಕಡಿತಗೊಂಡಿದೆ. ಮನೆಗಳಿಗೂ ಕೂಡ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.

ಕಸಬಾ ಹೋಬಳಿ ಸೇರಿದಂತೆ ತಾಲೂಕಿನಾದ್ಯಂತ ಕಾವೇರಿ, ಹೇಮಾವತಿ ಜಲಾಶಯ, ನದಿ ಮತ್ತು ಹಿನ್ನೀರು, ಏತನೀರಾವರಿ ನಾಲೆಗಳ ಮೂಲಕ ಈಗಾಗಲೇ ಕೃಷಿ ಕೈಗೊಳ್ಳಲು ನೀರು ಹರಿಯುತ್ತಿದೆ. ಇದರಿಂದ ಅಚ್ಚುಕಟ್ಟು ಮತ್ತು ನಾಲಾ ವ್ಯಾಪ್ತಿಯ ಬಹುತೇಕ ಕೆರೆಗಳು ತುಂಬಿದ್ದು, ಅತಿಯಾದ ಮಳೆ ನೀರು ಕೆರೆಗಳಿಗೆ ಸಂಗ್ರಹವಾಗಿ ಇಂತಹ ಅನಾಹುತ ಉಂಟಾಗಿದೆ.

ಈಗಾಗಲೇ ಕಟಾವಿಗೆ ಬಂದಿರುವ ಮೆಕ್ಕೆಜೋಳ ಬೆಳೆ ಹಾಗೂ ಕಟಾವು ಮಾಡಿರುವ ಜೋಳದ ಅವಕ ಮಳೆ ನೀರಿಗೆ ಆಹುತಿಯಾಗಿ ರೈತರ ಕಣ್ಣಲ್ಲಿನೀರು ತರಿಸಿದೆ. ಅಲ್ಲದೆ ಈಗಾಗಲೇ ಕೈಗೊಂಡಿರುವ ಕೆರೆ ಅಚ್ಚುಕಟ್ಟು ಪ್ರದೇಶದ ಭತ್ತ ಬೆಳೆ ಕೂಡ ಜಲಾವೃತಗೊಂಡಿರುವುದು ಕಂಡುಬಂದಿದೆ. ಕೆರೆ ಅಚ್ಚುಕಟ್ಟು ಪ್ರದೇಶದಲ್ಲಿನ ಫಸಲಿಗೆ ಬಂದಿರುವ ಅಡಿಕೆ, ಬಾಳೆ, ತೆಂಗು, ತರಕಾರಿ ಬೆಳೆಗಳು ಹಾಗೂ ಹೂ ತೋಟಗಾರಿಕೆ ಬೆಳೆಗಳ ಪ್ರದೇಶಕ್ಕೆ ನೀರು ನುಗ್ಗಿದೆ.ತಾಲೂಕಿನ ಬೆಳವಾಡಿ ಗ್ರಾಮದ ಹಿರಿಕೆರೆ ಕೋಡಿ ಒಡೆದು ಅಚ್ಚುಕಟ್ಟು ಪ್ರದೇಶದಲ್ಲಿ ಕೈಗೊಳ್ಳಲಾಗಿದ್ದ 80 ಎಕರೆ ಪ್ರದೇಶದ ಭತ್ತ, ಅಡಿಕೆ ಇತರೆ ತೋಟಗಾರಿಕೆ ಬೆಳೆಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ. ಇದೇ ನೀರು ಕೋಟೆ ಕರ್ಪೂವರವಳ್ಳಿ ಗ್ರಾಮದ ಚನ್ನಯ್ಯ ಅವರ ಅಡಿಕೆ ತೋಟಕ್ಕೆ ನೀರು ನುಗ್ಗಿದೆ. ಅದೇ ರೀತಿ ಸೀಬಳ್ಳಿ, ಹಾನಗಲ್ಲು ಗ್ರಾಮದ ರಸ್ತೆ ಮೇಲೆ ಕೆರೆ ನೀರು ಹರಿಯುತ್ತಿರುವ ಪರಿಣಾಮ ರಸ್ತೆ ಸಂಪರ್ಕ ಕಡಿತಗೊಂಡಿದೆ.ತಾಲೂಕಿನ ಮುತ್ತಿಗೆ ಗ್ರಾಮದ ಕೆರೆಗೆ ಅಧಿಕ ಮಳೆ ನೀರು ಸಂಗ್ರಹವಾದ ಹಿನ್ನೆಲೆಯಲ್ಲಿ ಕೋಡಿಯಲ್ಲಿ ಭಾರೀ ಪ್ರಮಾಣದ ನೀರು ನುಗ್ಗುತ್ತಿರುವ ಪರಿಣಾಮ ಕೋಡಿ ಅಕ್ಕಪಕ್ಕದಲ್ಲಿ ಬರುವ ಕೃಷಿ ಜಮೀನು, ವಾಸದ ಮನೆಗಳಿಗೆ ಅಪಾರ ಪ್ರಮಾಣದ ನೀರು ನುಗ್ಗಿ ಹಾನಿ ಉಂಟುಮಾಡಿದೆ. ಅರಕಲಗೂಡು-ಸಂತೆಮರೂರು ನಡುವಿನ ಪಾರಸನಹಳ್ಳಿ ಗ್ರಾಮದ ಸಮೀಪ ಕೆರೆಕೋಡಿ ನೀರು ರಸ್ತೆ ಮೇಲೆ ಇಡೀ ರಾತ್ರಿ ಭಾರೀ ಪ್ರಮಾಣದಲ್ಲಿ ಹರಿಯುತ್ತಿದ್ದ ಪರಿಣಾಮ ಸಂಪರ್ಕ ಕೂಡ ಕಡಿತಗೊಂಡಿತ್ತು. ಬೆಳಗ್ಗೆ ಜೆಸಿಬಿ ಮೂಲಕ ತೆರವು ಕಾರ್ಯಾಚರಣೆ ಕೈಗೊಳ್ಳಲಾಯಿತು.

ಪಟ್ಟಣದ ದೊಡ್ಡಕೆರೆಗೆ ಭಾರೀ ಪ್ರಮಾಣದ ನೀರು ಹರಿದು ಬರುತ್ತಿರುವ ಪರಿಣಾಮ ಕೆರೆ ಅಪಾಮಟ್ಟದಿಂದ ಕೂಡಿದೆ. ಕೋಡಿ ಬಿರುಕು ಬಿಟ್ಟಿರುವ ಪರಿಣಾಮ ನಾಲೆಯಲ್ಲಿ ಹರಿಯುವಂತ ನೀರಿನ ರಭಸ ಕಂಡುಬಂದಿದೆ. ಇದರಿಂದ ಪಟ್ಟಣದ ಗದ್ದೆಬಯಲಿನಲ್ಲಿ ನಿರ್ಮಿಸಿಕೊಂಡಿರುವ ವಾಸದ ಮನೆಗಳಿಗೆ ನೀರು ನುಗ್ಗಿದೆ. ಕೋಡಿ ನೀರು ಅಧಿಕವಾಗಿ ಹರಿಯುತ್ತಿದ್ದು, ಹೆಂಟಗೆರೆ ಕೆರೆ ಕೂಡ ಭರ್ತಿಯಾಗಿದೆ. ಇಲ್ಲಿಂದ ಭಾರೀ ಪ್ರಮಾಣದ ನೀರು ಹರಿಯುತ್ತಿರುವ ಪರಿಣಾಮ ಕಾಶೀಪುರ ಬಳಿಯ ಕೊಲ್ಲಿಯಲ್ಲಿ ಅಧಿಕ ನೀರು ಸಂಗ್ರಹವಾಗಿ ಕೃಷಿ ಜಮೀನ್ನನ್ನು ಆವರಿಸಿಕೊಂಡಿದೆ. ಅಲ್ಲದೆ ನೇಗೆರೆ, ಮರಡಿ ನಡುವಿನ ರಸ್ತೆ ಕೂಡ ಜಲಾವೃತಗೊಂಡಿದೆ.ತಾಲೂಕಿನ ಕತ್ತಿಮಲ್ಲೇಮನಹಳ್ಳಿ ಬಳಿ ಹರಿಯುವ ಅಡಿಕೆಬೊಮ್ಮನಹಳ್ಳಿ ಏತನೀರಾವರಿ ನಾಲೆಯಲ್ಲಿ ಹೂಳು ತುಂಬಿಕೊಂಡಿದ್ದ ಪರಿಣಾಮ ಮಳೆ ನೀರು ಹೆಚ್ಚುವರಿಯಾಗಿ ತುಂಬಿದ ಪರಿಣಾಮ ನೀರು ಮುಂದೆ ಹರಿಯಲು ಸಾಧ್ಯವಾಗದೇ ನಾಲೆಯ ತಡಗೋಡೆಯಿಂದ ಹೊಳ್ಳಿ ಸಮೀಪದ ಸರಕಾರಿ ಪ್ರೌಢಶಾಲೆಯ ಕಾಂಪೌಂಡ್ ಉರುಳಿದೆ.ಇಲ್ಲಿಯೂ ಕೂಡ ರಸ್ತೆಯ ಮೇಲೆ ಅಧಿಕ ನೀರು ಹರಿಯುತ್ತಿರುವ ಪರಿಣಾಮ ಕೃಷಿ ಜಮೀನು ಹಾನಿಯಾಗಿದೆ.ಹಾನಿ ಪ್ರದೇಶಕ್ಕೆ ಶಾಸಕ ಭೇಟಿ:

ಅಕಾಲಿಕ ಮಳೆಯಿಂದ ಹಾನಿ ಸಂಭವಿಸಿರುವ ಕೆರೆಕೋಡಿ, ಕೃಷಿಪ್ರದೇಶಕ್ಕೆ ಶಾಸಕ ಎ.ಮಂಜು ಅವರು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮುತ್ತಿಗೆ ಕೆರೆಯಲ್ಲಿ ಭಾರೀ ಪ್ರಮಾಣದ ನೀರು ಸಂಗ್ರಹವಾಗಿರುವ ಪರಿಣಾಮ ಕೋಡಿಯಲ್ಲಿ ಹೆಚ್ಚು ನೀರು ಹರಿದು ಕೃಷಿ ಪ್ರದೇಶ, ವಾಸದ ಮನೆಗಳು ಹಾಗೂ ರಸ್ತೆಗೆ ಹಾನಿಯಾಗಿದೆ. ಇಷ್ಟೊಂದು ಪ್ರಮಾಣದ ನೀರು ಸಣ್ಣಪ್ರಮಾಣದ ತೂಬಿನಲ್ಲಿ ಹರಿಯಲು ಸಾಧ್ಯವಿಲ್ಲ. ಕೂಡಲೇ ಈ ರಸ್ತೆಯ ಮಧ್ಯೆ ದೊಡ್ಡದಾದ ಸೇತುವೆ ನಿರ್ಮಿಸಿ ನೀರು ಸರಾಗವಾಗಿ ಸಾಗುವಂತೆ ಕ್ರಮ ವಹಿಸಬೇಕೆಂದು ಎಂಜಿನಿಯರ್‌ಗೆ ದೂರವಾಣಿ ಮೂಲಕ ಸೂಚನೆ ನೀಡಿದರು.ಲಭ್ಯವಿರುವ ಪರಿಹಾರ ಕಲ್ಪಿಸಿ:

ಈ ವರ್ಷದಲ್ಲಿ ಅಧಿಕ ಮಳೆ ಶನಿವಾರ ಬಿದ್ದಿದ್ದು, ಕೆರೆಗಳ ಕೋಡಿ ಒಡೆಯಲು ಕಾರಣವಾಗಿದೆ. ಕೂಡಲೇ ಕೋಡಿ ನಿರ್ಮಾಣ, ನೀರು ನುಗ್ಗಿರುವ ಮನೆಗಳು, ಬೆಳೆ ಹಾನಿ ಸಂಭವಿಸಿರುವ ರೈತರಿಗೆ ಲಭ್ಯವಿರುವ ಪರಿಹಾರ ನೀಡುವ ಕುರಿತು ಗಮನಹರಿಸಬೇಕಿದೆ. ಈಗಾಗಲೇ ಬಹುತೇಕ ಕೆರೆಗಳು ಭರ್ತಿಯಾಗಿದ್ದು, ಮುಂದಿನ ದಿನಗಳಲ್ಲಿ ಮಳೆಯ ಪ್ರಮಾಣ ಅಧಿಕಗೊಂಡರೇ ಮತ್ತೊಷ್ಟು ಹಾನಿ ಉಂಟಾಗುವ ಸಾಧ್ಯತೆ ಇದೆ. ಇಂದಿನಿಂದಲೇ ಸ್ಥಳ ಪರಿಶೀಲನೆ ನಡೆಸಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಶಾಸಕ ಎ.ಮಂಜು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.ತಹಸೀಲ್ದಾರ್‌ ಗ್ರೇಡ್-2 ತಹಸೀಲ್ದಾರ್ ಸಿ.ಸ್ವಾಮಿ ಹಾಗೂ ತಾಪಂ ಇಒ ಶ್ರೀನಿವಾಸ್ ಅವರು ಸಿಬ್ಬಂದಿಯೊಂದಿಗೆ ಬೆಳಗ್ಗೆಯಿಂದಲೇ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ನೆರವಾದರು.ಮಳೆಯ ವರದಿ: ಶನಿವಾರ ಸುರಿದ ಮಳೆಯ ವಿವರ