ಮಂಗಳೂರು; ಪತಿ-ಪತ್ನಿಯ ಅನುಬಂಧ ಏಳೇಳು ಜನ್ಮದ್ದು ಎಂಬುದು ಪ್ರಚಲಿತದ ಮಾತು. ಹೀಗಾಗಿ ತನ್ನ‌ ಪತ್ನಿಯನ್ನು ಖುಷಿಪಡಿಸಲು ಪತಿ ಏನೆಲ್ಲಾ ಸಾಹಸವನ್ನು ಮಾಡುತ್ತಾನೆ ಎಂಬುದಕ್ಕೆ ಇಲ್ಲೊಂದು ನಿದರ್ಶನ. ತನ್ನ ಪತ್ನಿಯ ಸೀಮಂತ ಕಾರ್ಯಕ್ರಮಕ್ಕೆ ಸರ್‌ಪ್ರೈಸ್ ನೀಡಲು ಹೊಸ ಐಡಿಯಾ ಮಾಡಿದ್ದು ಎಲ್ಲರ ಗಮನ ಸೆಳೆದಿದೆ.ಮಂಗಳೂರು ಹೊರವಲಯದ ಅಡ್ಯಾರ್ ಗಾರ್ಡನ್‌ನಲ್ಲಿ ಪತ್ನಿಯ ಸೀಮಂತಕ್ಕೆ ಖ್ಯಾತ ಉದ್ಯಮಿ ಪ್ರಕಾಶ್ ಅವರು ಹೆಲಿಕಾಪ್ಟರ್ ಮೂಲಕ ಹೂವಿನ ಸುರಿಮಳೆಗೈದು ಸರ್‌ಪ್ರೈಸ್ ನೀಡಿದ್ದಾರೆ. ಇದು ಮಂಗಳೂರಲ್ಲಿ ಮೊಟ್ಟ ಮೊದಲ ಬಾರಿಗೆ ಸೀಮಂತಕ್ಕೆ ಹೆಲಿಕಾಪ್ಟರ್ ಮೂಲಕ ಪತ್ನಿಗೆ ಪುಷ್ಪವೃಷ್ಟಿಯ ಉಡುಗೊರೆ ನೀಡಿದಂತಾಗಿದೆ.

ಬಾನಂಗಳಲ್ಲಿ ಅಚಾನಕ್‌ ಆಗಿ ಹೆಲಿಕಾಪ್ಟರ್‌ ಹಾರಾಟ, ಆಗಸದಿಂದಲೇ ಪುಷ್ಪವೃಷ್ಟಿ ನೋಡಿ ಪತಿಯೊಂದಿಗೆ ಇದ್ದ ಪತ್ನಿ ಅರ್ಪಿತಾ ಆಶ್ಚರ್ಯಚಕಿತರಾಗಿದ್ದು, ಪತಿಯ ಸರ್‌ಪ್ರೈಸ್‌ಗೆ ಫಿದಾ ಆಗಿದ್ದಾರೆ.

-------------