ದ್ವಿಚಕ್ರ ಸವಾರರಿಗೆ ಹೆಲ್ಮೆಟ್ ಧಾರಣೆ ಕಡ್ಡಾಯ: ಎಂ.ಸಿ.ಶ್ರೀಧರ್‌ ಎಚ್ಚರಿಕೆ

| Published : Jun 08 2024, 12:30 AM IST

ದ್ವಿಚಕ್ರ ಸವಾರರಿಗೆ ಹೆಲ್ಮೆಟ್ ಧಾರಣೆ ಕಡ್ಡಾಯ: ಎಂ.ಸಿ.ಶ್ರೀಧರ್‌ ಎಚ್ಚರಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಮಾದಾಪುರ ರಸ್ತೆಯಲ್ಲಿ ಶುಕ್ರವಾರ ಸಂಜೆ ವೇಳೆ ಶಾಲೆ ಕಾಲೇಜು ಬಿಡುವ ಸಂಧರ್ಭ ಶಾಲಾ ಮಕ್ಕಳಿಗೆ ದ್ವಿಚಕ್ರ ಸವಾರರಿಗೆ ಕಡ್ಡಾಯವಾಗಿ ಹೆಲ್ಮೆಟ್ ಧರಿಸುವಂತೆ ಸೂಚಿಸಿದರು. ವಾಹನ ಚಾಲಕರನ್ನು ಉದ್ದೇಶಿಸಿ ಮಾತನಾಡಿದ ಅವರು, ವಾಹನ ಸವಾರರು ವಾಹನ ಚಾಲನೆ ಮಾಡುವ ಸಂದರ್ಭದಲ್ಲಿ ಪರವಾನಗಿ ಕಡ್ಡಾಯವಾಗಿ ಹೊಂದಿರಬೇಕು ಎಂದರು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಶಾಲಾ ಕಾಲೇಜು ಮಕ್ಕಳಿಗೆ ರಸ್ತೆ ನಿಯಮಗಳನ್ನು ಚಾಚು ತಪ್ಪದೆ ಪಾಲಿಸುವುದು ಅದರೊಂದಿಗೆ ಆರಿವು ಮುಖ್ಯ ಎಂದು ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಎಂ.ಸಿ.ಶ್ರೀಧರ್ ಮಕ್ಕಳಿಗೆ ಮಾಹಿತಿ ನೀಡಿದ್ದಾರೆ.

ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಮಾದಾಪುರ ರಸ್ತೆಯಲ್ಲಿ ಶುಕ್ರವಾರ ಸಂಜೆ ವೇಳೆ ಶಾಲೆ ಕಾಲೇಜು ಬಿಡುವ ಸಂಧರ್ಭ ಶಾಲಾ ಮಕ್ಕಳಿಗೆ ದ್ವಿಚಕ್ರ ಸವಾರರಿಗೆ ಕಡ್ಡಾಯವಾಗಿ ಹೆಲ್ಮೆಟ್ ಧರಿಸುವಂತೆ ಸೂಚಿಸಿದರು. ವಾಹನ ಚಾಲಕರನ್ನು ಉದ್ದೇಶಿಸಿ ಮಾತನಾಡಿದ ಅವರು, ವಾಹನ ಸವಾರರು ವಾಹನ ಚಾಲನೆ ಮಾಡುವ ಸಂದರ್ಭದಲ್ಲಿ ಪರವಾನಗಿ ಕಡ್ಡಾಯವಾಗಿ ಹೊಂದಿರಬೇಕು ಎಂದರು.

ಆಟೋ ಚಾಲಕರು ಮಕ್ಕಳನ್ನು ಮಿತಿಗಿಂತ ಅಧಿಕ ಸಂಖ್ಯೆಯಲ್ಲಿ ಮಕ್ಕಳನ್ನು ಕರೆದೊಯ್ಯುವುದು ಕಂಡು ಬಂದಲ್ಲ್ಲಿ ಆಟೋಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ವಾಹನ ಚಾಲನೆ ಸಂದರ್ಭದಲ್ಲಿ ಮೊಬೈಲ್ ಬಳಸುವುದರಿಂದ ಚಾಲಕರು ಪ್ರಯಾಣಿಕರ ಪ್ರಾಣಕ್ಕೆ ಕುತ್ತು ಬರುತ್ತಿದೆ. ದ್ವಿಚಕ್ರ ಸವಾರರು ತಾವು ಹೆಲ್ಮೆಟ್ ಹಾಕುವುದರೊಂದಿಗೆ ಹಿಂಬದಿ ಸವಾರರು ಹೆಲ್ಮೆಟ್ ಹಾಕುವುದು ಕಡ್ಡಾಯ. ಹಾಗೆಯೇ ಕಾರು ಚಾಲಕರು ಸೀಟು ಬೆಲ್ಟ್ ಹಾಕುವುದರೊಂದಿಗೆ ರಸ್ತೆ ನಿಯಮವನ್ನು ಪಾಲಿಸಿ ಇತರ ಚಾಲಕರಿಗೆ ಮಾದರಿಯಾಗಬೇಕು ಎಂದರು.

ಶಾಲಾ ಶಿಕ್ಷಕರು ಆಟೋ ಮತ್ತು ವಾಹನಗಳಲ್ಲಿ ಶಾಲೆಗಳಿಗೆ ಆಗಮಿಸುವ ಶಾಲಾ ಮಕ್ಕಳನ್ನು ಮಿತಿಗಿಂತ ಅಧಿಕವಾಗಿ ಕರೆದೊಯ್ಯದಂತೆ ಚಾಲಕರಿಗೆ ಹಾಗೂ ಮಕ್ಕಳ ಪೋಷಕರಿಗೆ ಮಾಹಿತಿ ನೀಡುವಂತೆ ತಿಳಿಸಿದರು.

ಅಪರಾಧ ವಿಭಾಗದ ಎಸ್.ಐ ನಾಗರಾಜು ಪೊಲೀಸ್ ಸಿಬ್ಬಂದಿ ಕೆ.ಆರ್.ಜಗದೀಶ್, ಪ್ರವೀಣ್, ಹೊನ್ನ ರಾಜಪ್ಪ, ಅಭಿಶೇಕ್ ಹಾಗೂ ಶಾಲಾ ಶಿಕ್ಷರು ಹಾಜರಿದ್ದರು.