ಸಾರಾಂಶ
ಧಾರವಾಡ:
ಜಾತ್ರಾ ಮಹೋತ್ಸವದಂತಹ ಆಚರಣೆಗಳು ಭಾರತೀಯ ಪರಂಪರೆ, ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಜೀವಂತವಾಗಿಡಲು ಸಹಕಾರಿಯಾಗಿದೆ ಎಂದು ಪಾಲಿಕೆ ಸದಸ್ಯೆ ಅನಿತಾ ಚಳಗೇರಿ ಹೇಳಿದರು.ಇಲ್ಲಿಯ ಕುಮಾರೇಶ್ವರ ನಗರದ ಕರಿಯಮ್ಮ ದೇವಿ ದೇವಸ್ಥಾನ ನಿರ್ವಹಣಾ ಸಂಘವು ಕರಿಯಮ್ಮ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ಏರ್ಪಡಿಸಿದ್ದ ಸಂಗೀತ ನೃತ್ಯೋತ್ಸವ ಉದ್ಘಾಟಿಸಿ ಮಾತನಾಡಿದರು.
ಈ ಭಾಗದ ಜನರು ಒಂದೆಡೆ ಸೇರಿ ಎರಡು ದಿನ ಹಮ್ಮಿಕೊಳ್ಳುವ ಜಾತ್ರಾ ಮಹೋತ್ಸವದಲ್ಲಿ ಬಹಳಷ್ಟು ಶ್ರದ್ಧೆ-ಭಕ್ತಿ ಇರುತ್ತದೆ. ನಮ್ಮ ಸಂಸ್ಕೃತಿ, ಆಚಾರ-ವಿಚಾರ ಮುಂದುವರಿಸಿಕೊಂಡು ಹೋಗುತ್ತಿರುವುದು ಅಭಿಮಾನದ ಸಂಗತಿ ಎಂದ ಅವರು, ಇಂತಹ ಜಾತ್ರೆಗಳಿಂದ ಸಮಾಜದ ಜನರೊಟ್ಟಿಗೆ ಬೆರೆತು ಒಳ್ಳೆಯ ಸಾಮರಸ್ಯ ಜೀವನ ನಡೆಸಲು ಸಾಧ್ಯವಾಗಲಿದೆ ಎಂದರು.ಕುಮಾರೇಶ್ವರ ಕಲ್ಚರಲ್ ಸೊಸೈಟಿ ಸಂಯೋಜಕ ಪ್ರಕಾಶ ಬಾಳಿಕಾಯಿ ಮಾತನಾಡಿದರು. ಕರಿಯಮ್ಮ ದೇವಸ್ಥಾನ ನಿರ್ವಹಣಾ ಸಂಘದ ಅಧ್ಯಕ್ಷ ಪ್ರೊ. ಜಿ.ಎನ್.ವಿ. ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಜೆ.ವೈ. ತೋಟದ, ಬಸವರಾಜ ಕೊಂಗವಾಡ, ಬಸವರಾಜ ನಿಗದಿ, ಉದಯ ನಾಯಕ್, ಪುಷ್ಪಾವತಿ ಚವ್ಹಾಣ ಇದ್ದರು. ಶಂಕರ ಗಸ್ತಿ ನಿರೂಪಿಸಿದರು, ಪ್ರಭು ಹಿರೇಮಠ ಸ್ವಾಗತಿಸಿದರು, ನಂದಾ ಗುಳೇದಗುಡ್ಡ ವಂದಿಸಿದರು. ನಂತರ ಜರುಗಿದ ಸಂಗೀತ ನೃತ್ಯೋತ್ಸವ ಕಾರ್ಯಕ್ರಮದಲ್ಲಿ ಡಾ. ರಶ್ಮಿ ಪಾಟೀಲ, ದರ್ಬಾರ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳು ವಿದುಷಿ ಭಾರ್ಗವಿ ಕುಲಕರ್ಣಿ, ಪದ್ಮಶ್ರೀ ಸಂಗೀತ ಪ್ರತಿಷ್ಠಾನದ ವಿದ್ಯಾರ್ಥಿಗಳು, ಬಸವರಾಜ ಹೂಗಾರ ಮತ್ತು ಶಿಷ್ಯವೃಂದ ಹಾಗೂ ಸುಮಾ ಡೊಳ್ಳಿನ ಗಾಯನ ಪ್ರಸ್ತುತ ಪಡಿಸಿದರು. ತಬಲಾದಲ್ಲಿ ವಿಜಯಕುಮಾರ ಸುತಾರ, ದಯಾನಂದ ಸುತಾರ ಹಾಗೂ ಹಾರ್ಮೊನಿಯಂದಲ್ಲಿ ಬಸವರಾಜ ಹೂಗಾರ, ಆದರ್ಶ ಬಗಾಡೆ ಸಮರ್ಥ ಸಾಥ್ ನೀಡಿದರು.