ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ: ಶಾಸಕ ಶರಣಗೌಡ ಕಂದಕೂರ

| Published : Mar 16 2024, 01:46 AM IST

ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ: ಶಾಸಕ ಶರಣಗೌಡ ಕಂದಕೂರ
Share this Article
  • FB
  • TW
  • Linkdin
  • Email

ಸಾರಾಂಶ

ಯಾದಗಿರಿ ಗುರುಮಠಕಲ್ ಶಾಸಕರ ಕಚೇರಿ ಆವರಣದಲ್ಲಿ ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿ ಫಲಾನುಭವಿ ಮಕ್ಕಳಿಗೆ ಲ್ಯಾಪ್‌ಟ್ಯಾಪ್ ಅನ್ನು ಶಾಸಕ ಶರಣಗೌಡ ಕಂದಕೂರು ವಿತರಣೆ ಮಾಡಿದರು.

ಕನ್ನಡಪ್ರಭ ವಾರ್ತೆ ಯಾದಗಿರಿ

ನನ್ನ ಕ್ಷೇತ್ರದಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತೇನೆ. ಸರ್ಕಾರದಿಂದ ಸಿಗುವ ಯೋಜನೆಗಳ ಲಾಭ ಪಡೆದುಕೊಂಡು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂದು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಹೇಳಿದರು.

ನಗರದ ಗುರುಮಠಕಲ್ ಶಾಸಕರ ಕಚೇರಿ ಆವರಣದಲ್ಲಿ ಕಾರ್ಮಿಕ ಇಲಾಖೆ ವತಿಯಿಂದ ಸರ್ಕಾರದಿಂದ ಕಾರ್ಮಿಕರ ಮಕ್ಕಳಿಗೆ ನೀಡುವ ಲ್ಯಾಪ್‌ಟ್ಯಾಪ್ ಯೋಜನೆ ಅನ್ವಯ ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿ ಫಲಾನುಭವಿ ಮಕ್ಕಳಿಗೆ ಲ್ಯಾಪ್‌ಟ್ಯಾಪ್ ವಿತರಣೆ ಮಾಡಿ ಮಾತನಾಡಿದರು.

ಪಾಲಕರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುವಲ್ಲಿ ಹಿಂದೇಟು ಹಾಕಬಾರದು. ನಮ್ಮ ಭಾಗದ ಅಭಿವೃದ್ಧಿಗೆ ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಯೇ ಮೂಲಕಾರಣವಾಗಿದ್ದು, ತಮ್ಮ ಸಹಕಾರ ಕೂಡ ಅಗತ್ಯವಾಗಿದ್ದು, ಯಾವುದೇ ಕಾರಣಕ್ಕೂ ನಿಮ್ಮ ಮಕ್ಕಳ ಓದನ್ನು ನಿಲ್ಲಸಬೇಡಿ, ನಿಮಗೆ ನನ್ನಿಂದ ಅಥವಾ ಸರ್ಕಾರದಿಂದ ಯಾವುದೇ ಸಹಾಯಬೇಕಿದ್ದರೂ ನಾನು ನೀಡುತ್ತೇನೆ ಎಂದು ಹೇಳಿದರು.

ಇದಕ್ಕೂ ಮುನ್ನ ಜೆಸ್ಕಾಂ ವತಿಯಿಂದ ಆಶನಾಳ ಗ್ರಾಮದ ಶರಣಪ್ಪ ಬಸಣ್ಣ ಮತ್ತು ಕೋಟಗೇರಾ ಗ್ರಾಮದ ಮೋನಪ್ಪ ತಂದೆ ಶರಣಪ್ಪ ಇವರಿಗೆ ಜಾನುವಾರ ಮೃತಪಟ್ಟ ಹಿನ್ನೆಲೆ ಸಹಾಯಧನ ಚೆಕ್ ವಿತರಿಸಲಾಯಿತು.

ಇತ್ತೀಚೆಗೆ ತುಮಕೂರಿನಲ್ಲಿ ಮೃತಪಟ್ಟ ಕಾರ್ಮಿಕ ಮಹಾದೇವಪ್ಪ ಮಡಿವಾಳ ರವರ ಪತ್ನಿಗೆ ₹2 ಲಕ್ಷ ಸಹಾಯಧನ ಚೆಕ್ ವಿತರಿಸಲಾಯಿತು.

ಗುರುಮಠಕಲ್ ತಹಸೀಲ್ದಾರ್ ಶ್ರೀನಿವಾಸಚಾರ್ಯ, ಜಿಲ್ಲಾ ಕಾರ್ಮಿಕ ಕಲ್ಯಾಣಾಧಿಕಾರಿ ಆರತಿ, ತಾಲೂಕು ಕಾರ್ಮಿಕ ಕಲ್ಯಾಣಧಿಕಾರಿ ಸಂಗೀತಾ, ಮುಖಂಡರಾದ ಮಲ್ಲಣ್ಣಗೌಡ ಕೌಳೂರು, ರಾಘವೇಂದ್ರರೆಡ್ಡಿ ಕೊಂಕಲ್, ನರಸಿಂಹರೆಡ್ಡಿ ಚಿಂತಗುಂಟಾ, ಮಲ್ಲಿಕಾರ್ಜುನ ಅಡಕಿ ನಜರಾಪೂರ, ಪರ್ವತರೆಡ್ಡಿ ಕಾಳಬೆಳಗುಂದಿ, ಚೌಡಯ್ಯ ಕಾಳಬೆಳಗುಂದಿ, ಮಲ್ಲಿಕಾರ್ಜುನ ಅರುಣಿ ಗಾಜರಕೋಟ, ನಾಗರಾಜ ದೇಶಮುಖ ಕೋಟಗೇರಾ, ಶರಣಗೌಡ ಬಿರಾದರ ಆಶನಾಳ, ಶಿವಾರೆಡ್ಡಿ ಆಶನಾಳ, ಮಹಾದೇವಪ್ಪ ಯಲಸತ್ತಿ, ರಾಜು ಉಡುಪಿ ಸೈದಾಪೂರ, ಬಂದಪ್ಪಗೌಡ ಲಿಂಗೇರಿ, ಆನಂದರೆಡ್ಡಿ ವಡವಟ ಇತರರಿದ್ದರು.