ಕಳೆದ ೨೩ ವರ್ಷಗಳಿಂದ ಎಲ್ಲ ನಿಯಮಗಳನ್ನು ಉಲ್ಲಂಘಿಸಿ ಟೋಲ್ ಸಂಗ್ರಹಿಸುತ್ತಿರುವ ಬ್ರಹ್ಮರಕೂಟ್ಲು ಟೋಲ್‌ಗೇಟ್ ಮುಚ್ಚಲು ಆಗ್ರಹಿಸಿ ಸಮಾನ ಮನಸ್ಕ ಸಂಘಟನೆಗಳ ಸಹಭಾಗಿತ್ವದಲ್ಲಿ ಪ್ರಥಮ ಹಂತದ ಸಾಮೂಹಿಕ ಧರಣಿ ಮಂಗಳವಾರ ಬ್ರಹ್ಮರಕೂಟ್ಲು ಟೋಲ್‌ಗೇಟ್‌ನಲ್ಲಿ ನಡೆಯಿತು.

ಬಂಟ್ವಾಳ: ಕಳೆದ ೨೩ ವರ್ಷಗಳಿಂದ ಎಲ್ಲ ನಿಯಮಗಳನ್ನು ಉಲ್ಲಂಘಿಸಿ ಟೋಲ್ ಸಂಗ್ರಹಿಸುತ್ತಿರುವ ಬ್ರಹ್ಮರಕೂಟ್ಲು ಟೋಲ್‌ಗೇಟ್ ಮುಚ್ಚಲು ಆಗ್ರಹಿಸಿ ಸಮಾನ ಮನಸ್ಕ ಸಂಘಟನೆಗಳ ಸಹಭಾಗಿತ್ವದಲ್ಲಿ ಪ್ರಥಮ ಹಂತದ ಸಾಮೂಹಿಕ ಧರಣಿ ಮಂಗಳವಾರ ಬ್ರಹ್ಮರಕೂಟ್ಲು ಟೋಲ್‌ಗೇಟ್‌ನಲ್ಲಿ ನಡೆಯಿತು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಈ ಟೋಲ್‌ಗೇಟ್ ಕಾನೂನು ಬಾಹಿರವಾಗಿ ಹಣ ಸಂಗ್ರಹಿಸುತ್ತಿದ್ದು ಸುಲಿಗೆಯ ಕೇಂದ್ರವಾಗಿದೆ. ಈ ಟೋಲ್‌ಗೇಟನ್ನು ತೆರವು ಮಾಡಬೇಕಾಗಿರುವುದು ನ್ಯಾಯುತವಾದ ಬೇಡಿಕೆ ಎಂದರು. ಟೋಲ್‌ಗೇಟ್ ಮಾಡಲು ಅರ್ಹತೆ ಇಲ್ಲದ ಪ್ರದೇಶದಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಈ ಟೋಲ್‌ಗೇಟ್ ತೆರವು ಆಗುವವರೆಗೂ ಹೋರಾಟ ನಿರಂತರವಾಗಿ ನಡೆಯಲಿದೆ ಎಂದರು.

ಸಾಮಾಜಿಕ ಮುಖಂಡ ಮುನೀರ್ ಕಾಟಿಪಳ್ಳ ಮಾತನಾಡಿ ಜಿಲ್ಲೆಯಲ್ಲಿ ಕಳೆದ ೩೦ ವರ್ಷಗಳಿಂದ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ದಿ ಕಾರ್ಯ ಆಗುತ್ತಿದೆ. ಆದರೆ ಹೆದ್ದಾರಿ ಪ್ರಾಧಿಕಾರ ಒಮ್ಮೆಯೂ ಅಹವಾಲು ಸಭೆ ಕರೆದಿಲ್ಲ. ಇಲ್ಲಿ ಟೋಲ್‌ಗೇಟ್‌ನಲ್ಲಿ ಅಂತರದ ನಿಯಮ ಪಾಲನೆಯಾಗಿಲ್ಲ ಎಂದರು.ಪ್ರಮುಖರಾದ ಎಮ್ ಜಿ ಹೆಗ್ಡೆ, ನ್ಯಾಯವಾದಿ ಅಶ್ವಿನ್ ಕುಮಾರ್ ರೈ, ಬಂಟ್ವಾಳ ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟದ ಕಾರ್ಯದರ್ಶಿ ಸುರೇಶ್ ಕುಮಾರ್, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಸದಾಶಿವ ಪಡುಬಿದ್ರೆ, ಸಾಹುಲ್ ಹಮೀದ್, ರೈತ ನಾಯಕ ರೂಪೇಶ್ ರೈ, ಸಿಐಟಿಯು ಜಿಲ್ಲಾಧ್ಯಕ್ಷ ಬಿ ಎಮ್ ಭಟ್, ಇಂಟಕ್ ಜಿಲ್ಲಾ‌ ಕಾರ್ಯದರ್ಶಿ ಸೀತಾರಾಮ ಬೆರಿಂಜೆ, ಕಾರ್ಮಿಕ ನಾಯಕರಾದ ಸುನಿಲ್ ಕುಮಾರ್ ಬಜಾಲ್, ರಾಮಣ್ಣ ವಿಟ್ಲ, ಪುತ್ತೂರಿನ ಹಿರಿಯ ಮುಂದಾಳು ಕಾವು ಹೇಮನಾಥ ಶೆಟ್ಟಿ, ಯುವ ಮುಂದಾಳು ಸುಹೈಲ್ ಕಂದಕ್, ಸಾಮರಸ್ಯ ಮಂಗಳೂರಿನ ಮಂಜುಳಾ ನಾಯಕ್, ಮಮತಾ ಗಟ್ಟಿ, ಸಮಿತಿಯ ಸಂಚಾಲಕರಾದ ಮೋಹನ್ ಶೆಟ್ಟಿ, ಪ್ರಮುಖರಾದ ಪದ್ಮರಾಜ್ ಆರ್. ಪೂಜಾರಿ, ಪಿಯೂಸ್ ಎಲ್. ರೋಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ, ಎಂ.ಎಸ್. ಮಹಮ್ಮದ್, ಅಪ್ಪಿ, ಬೇಬಿ ಕುಂದರ್, ಸೊಹೈಲ್ ಕಂದಕ್, ಉಮೇಶ್ ಕುಮಾರ್ ವೈ, ಶ್ರೀಧರ್ ಶೆಟ್ಟಿ, ವಾಸು ಪೂಜಾರಿ, ಇಬ್ರಾಹಿಂ ನವಾಝ್, ಸುದರ್ಶನ್ ಜೈನ್, ರಾಮಕೃಷ್ಣ ಆಳ್ವ, ಜೋಸ್ಪಿನ್ ಡಿಸೋಜಾ, ಶೈಲಜಾ ರಾಜೇಶ್, ಸುದೀಪ್ ಕುಮಾರ್ ಶೆಟ್ಟಿ, ಪದ್ಮನಾಭ ರೈ, ಸದಾಶಿವ ಬಂಗೇರ , ಲಾವಣ್ಯ ಬಳ್ಳಾಲ್, ಅಶ್ರಫ್ ಕಲ್ಲೇಗ, ವಿ ಕುಕ್ಯಾನ್ , ಲುಕ್ಮಾನ್ ಬಂಟ್ವಾಳ, ಡಿವೈಎಫ್ಐ ಜಿಲ್ಲಾ‌ ಕಾರ್ಯದರ್ಶಿ ಸಂತೋಷ್ ಬಜಾಲ್, ರೈತ ನಾಯಕ ರಾದ ಶ್ರೀಧರ್ ಶೆಟ್ಟಿ, ಕೆ ಯಾದವ ಶೆಟ್ಟಿ, ಅಬ್ಬಾಸ್ ಅಲಿ, ಸದಾಶಿವ ದಾಸ್ ಸಹಿತ ಹಲವಾರು ಪ್ರಮುಖರು ಉಪಸ್ಥಿತರಿದ್ದರು. ಹೋರಾಟ ಸಮಿತಿಯ ಸಂಚಾಲಕರಾದ ಬಿ ಶೇಖರ್, ಮೋಹನ್ ಶೆಟ್ಟಿ ಪಂಜಿಕಲ್ಲು, ಮುಖಂಡರಾದ ಬೇಬಿ ಕುಂದರ್ ಕಾರ್ಯಕ್ರಮ ನಿರ್ವಹಿಸಿದರು. ಬಿ ಶೇಖರ್ ಮನವಿ ವಾಚನ ಮಾಡಿದರು.ಸಮಾನ ಮನಸ್ಕ ಸಂಘಟನೆಗಳ ಸಹಭಾಗಿತ್ವದಲ್ಲಿ ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವು ಹೋರಾಟ ಸಮಿತಿ, ಬಂಟ್ವಾಳ ಹಮ್ಮಿಕೊಂಡಿದ್ದ ಸಾಮೂಹಿಕ ಧರಣಿ ಅಪಾರ ಸಂಖ್ಯೆಯ ಜನರ ಭಾಗವಹಿಸುವಿಕೆಯೊಂದಿಗೆ ಯಶಸ್ವಿಯಾಗಿ ನಡೆಯಿತು. ಜಾತ್ಯಾತೀತ ಪಕ್ಷಗಳು, ಸಂಘಟನೆಗಳು, ರೈತ, ದಲಿತ, ಕಾರ್ಮಿಕ, ಸಾರಿಗೆ ರಂಗದ ಸಂಘಟನೆಗಳಿಗೆ ಸೇರಿದ ದೊಡ್ಡ ಸಂಖ್ಯೆಯ ಪ್ರತಿನಿಧಿಗಳು, ಸಾರ್ವಜನಿಕರು ಧರಣಿಯಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ಸುಳ್ಯ ದಿಂದ ಮೂಲ್ಕಿ ಯವರಗೆ ಜಿಲ್ಲೆಯ ಎಲ್ಲಾ ತಾಲೂಕುಗಳಿಂದಲೂಅ ಮುಖಂಡರು ಧರಣಿಯಲ್ಲಿ ಭಾಗವಹಿಸಿ ಗಮನ ಸೆಳೆದರು.ಸಮುದಾಯದ ಶ್ಯಾಮರಾಜ್ ಪಟ್ರಮೆ, ಈಶ್ವರಿ ಪದ್ಮುಂಜ, ಜಯಶ್ರೀ ಟೋಲ್‌ ವಿರೋಧಿ ಹಾಡುಗಳನ್ನು ಹಾಡಿದರು.