ಅಲಾಯಿ ಕುಣಿಗೆ ಹಿಂದೂ ದೇವರ ಆಹ್ವಾನ ಪತ್ರಿಕೆ ಎಸೆತ

| Published : Jul 06 2025, 01:48 AM IST

ಅಲಾಯಿ ಕುಣಿಗೆ ಹಿಂದೂ ದೇವರ ಆಹ್ವಾನ ಪತ್ರಿಕೆ ಎಸೆತ
Share this Article
  • FB
  • TW
  • Linkdin
  • Email

ಸಾರಾಂಶ

ಕನಕಗಿರಿಯ ಆರಾಧ್ಯ ದೈವ ಕನಕಾಚಲಪತಿ, ಭಕ್ತ ಕನಕದಾಸ, ಶಕ್ತಿ ದೇವತೆ ದುರ್ಗಾದೇವಿ, ಜಗದ್ಗುರು ಮೌನೇಶ್ವರ, ವಿಘ್ನ ನಿವಾರಕ ಗಣಪತಿ, ಸಂವಿಧಾನ ಶಿಲ್ಪಿ ಡಾ. ಬಿ.ಆರ್‌. ಅಂಬೇಡ್ಕರ್‌ ಸೇರಿದಂತೆ ಇತರೆ ಪೋಟೋಗಳನ್ನು ಅಲಾಯಿ ಕುಣಿಯಲ್ಲಿ ತೂರಲಾಗಿದೆ.

ಕನಕಗಿರಿ:

ಅಲಾಯಿ ಕುಣಿಯಲ್ಲಿ ಹಿಂದೂ ದೇವರ ಜಾತ್ರೆ ಆಹ್ವಾನ ಪತ್ರಿಕೆ ಹಾಗೂ ಭಾವಚಿತ್ರ ಎಸೆದು ಸುಡಲು ಯತ್ನಿಸಿರುವ ಘಟನೆ ಪಟ್ಟಣದ ಜುಮ್ಮಾ ಮಸೀದಿ ಬಳಿ ಶುಕ್ರವಾರ ಬೆಳಗಿನ ಜಾವ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಸ್ಥಳೀಯ ಶ್ರೀದೇವಿ ಪ್ರಿಂಟರ್ಸ್ ಮುದ್ರಿಸಿದ ಲಗ್ನ ಪತ್ರಿಕೆ, ಮೌನೇಶ್ವರ ಜಾತ್ರಾ ಮಹೋತ್ಸವದ ಆಹ್ವಾನ ಪತ್ರಿಕೆ, ಮೂಕ ದುರ್ಗಾದೇವಿ ದೇವಸ್ಥಾನದ ದೇಣಿಗೆ ರಶೀದಿ ಹೊಂದಿರುವ ನಕಲು ಪ್ರತಿಗಳನ್ನು ತಂದು ಹಳೇ ಪೊಲೀಸ್ ಠಾಣೆಯ ಜುಮ್ಮಾ ಮಸೀದಿಯ ಅಲಾಯಿ ಕುಣಿಯಲ್ಲಿ ಸುಡುವುದಕ್ಕಾಗಿ ಕೆಲ ಯುವಕರು ತೂರಿದ್ದಾರೆ.

ಕನಕಗಿರಿಯ ಆರಾಧ್ಯ ದೈವ ಕನಕಾಚಲಪತಿ, ಭಕ್ತ ಕನಕದಾಸ, ಶಕ್ತಿ ದೇವತೆ ದುರ್ಗಾದೇವಿ, ಜಗದ್ಗುರು ಮೌನೇಶ್ವರ, ವಿಘ್ನ ನಿವಾರಕ ಗಣಪತಿ, ಸಂವಿಧಾನ ಶಿಲ್ಪಿ ಡಾ. ಬಿ.ಆರ್‌. ಅಂಬೇಡ್ಕರ್‌ ಸೇರಿದಂತೆ ಇತರೆ ಪೋಟೋಗಳನ್ನು ಅಲಾಯಿ ಕುಣಿಯಲ್ಲಿ ತೂರಲಾಗಿದೆ. ಹೀಗೆ ತೂರಿದ ವೀಡಿಯೋ ಹಾಗೂ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಂಚಾಲಕ ಅಯ್ಯನಗೌಡ ಅಳ್ಳಳ್ಳಿ ಕಾರ್ಯಕರ್ತರೊಂದಿಗೆ ಠಾಣೆಗೆ ಭೇಟಿ ನೀಡಿ ದೂರು ದಾಖಲಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಜುಮ್ಮಾ ಮಸೀದಿ ಕಮಿಟಿಯ ಹಿರಿಯರು ಹಾಗೂ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರಿಂದ ಪಿಐ ಮಾಹಿತಿ ಪಡೆದಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕೈಗೊಳ್ಳಲು ತನಿಖೆ ನಡೆಸುತ್ತಿದ್ದಾರೆ.

ಅಲಾಯಿ ಕುಣಿಯಲ್ಲಿ ಹಿಂದೂ ದೇವರುಗಳಿರುವ ಆಹ್ವಾನ ಪತ್ರಿಕೆ ತೂರಿದ್ದು, ಯಾರು ಎನ್ನುವುದು ತಿಳಿದು ಬಂದಿಲ್ಲ. ಈ ಕುರಿತು ಎರಡು ಕೋಮಿನ ಹಿರಿಯರನ್ನು ಕರೆದು ಸಮಾಲೋಚನೆ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ಮೇಲೆ ಕ್ರಮಕೈಗೊಳ್ಳಲಾಗುವುದು. ಮುಂಜಾಗ್ರತಾ ಕ್ರಮವಾಗಿ ಮಸೀದಿಯ ಬಳಿ ಪೊಲೀಸರನ್ನು ನಿಯೋಜಿಸಲಾಗಿದೆ.

ಎಂ.ಡಿ ಫೈಜುಲ್ಲಾ ಠಾಣಾಧಿಕಾರಿ