ಸಾರಾಂಶ
ಕನ್ನಡಪ್ರಭ ವಾರ್ತೆ ಅಥಣಿ
ಕಳೆದ 14 ವರ್ಷಗಳಿಂದ ಪಟ್ಟಣದಲ್ಲಿ ಕೃಪಾ ಆರೋಗ್ಯ ಮತ್ತು ಸಮಾಜ ಸೇವಾ ಸಂಸ್ಥೆಯ ಮೂಲಕ ನಿಜಪ್ಪ ಹಿರೇಮನಿ ದಂಪತಿ ನಿರ್ಗತಿಕ ಮಕ್ಕಳ ಸಂರಕ್ಷಣೆ ಜೊತೆಗೆ ಅನೇಕ ಸಮಾಜಮುಖಿ ಕಾರ್ಯ ಶ್ಲಾಘನೀಯ ಎಂದು ಕೆಪಿಸಿಸಿ ಸದಸ್ಯ ಶ್ಯಾಮ ಪೂಜಾರಿ ಹೇಳಿದರು.ಪಟ್ಟಣದ ಕೃಪಾ ಆರೋಗ್ಯ ಮತ್ತು ಸಮಾಜ ಸೇವಾ ಸಂಸ್ಥೆಯಿಂದ ನಡೆದ ದೇವದಾಸಿ ಪದ್ಧತಿ ನಿರ್ಮೂಲನಾ ಜಾಗೃತಿ ಹಾಗೂ ಉಡುಗೊರೆ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿರ್ಗತಿಕರ ಹಾಗೂ ಹಸಿದವರ ಪಾಲಿಗೆ ಹಿರೇಮನಿ ದಂಪತಿ ಅನ್ನ ಸಂತರ್ಪಣೆ ಮಾಡುತ್ತಿರುವುದು ಸಂತಸದಾಯಕವಾಗಿದೆ. ವಿಶೇಷ ಮಕ್ಕಳ ಸೇವೆಯನ್ನು ದೇವರ ಸೇವೆ ಎಂದು ತನ್ನ ಸ್ವಂತ ಮಕ್ಕಳಿಗಿಂತ ಹೆಚ್ಚಾಗಿ ಪೋಷಿಸುತ್ತಾ ಬಂದಿದ್ದು, ಇವರ ಸೇವೆ ಇತರರಿಗೆ ಪ್ರೇರಣೆಯಾಗಲಿ ಎಂದರು.
ಈ ಸಂಸ್ಥೆಯಲ್ಲಿ ದೇವರ ಮಕ್ಕಳ ಆರೋಗ್ಯ ಪೋಷಣೆಯಾಗುತ್ತಿದೆ. ಪ್ರತಿದಿನ ನೂರಾರು ಜನರಿಗೆ ಅನ್ನದಾಸೋಹ, ಶಾಲಾ ಕಾಲೇಜುಗಳಲ್ಲಿ ಎಚ್ಐವಿ ಏಡ್ಸ ರೋಗದ ಜಾಗೃತಿ, ಅನಾಥ ಮಾನಸಿಕ ಅಸ್ವಸ್ಥರನ್ನು ಪಾಲನೆ-ಪೋಷಣೆ ಜೊತೆಗೆ ಆತ್ಮ ಸಮಾಲೋಚನೆ, ಜಾತ್ರಾ ಮಹೋತ್ಸವಗಳಲ್ಲಿ ಎಚ್ಐವಿ ಹಾಗೂ ದೇವದಾಸಿ ಪದ್ಧತಿ ನಿರ್ಮುಲನೆ ಬಗ್ಗೆ ಜಾಗೃತಿಗೊಳಿಸುತ್ತಿರುವು ಶ್ಲಾಘನೀಯ. ಆದರೂ ಈ ಸಂಸ್ಥೆ 15 ಸಂದಿದರು ಸ್ವಂತ ಸ್ಥಳ ಹಾಗೂ ಕಟ್ಟಡ ಇಲ್ಲದೆ ಇರುವುದು ವಿಪರ್ಯಾಸ. ಸರ್ಕಾರ ಅಥವಾ ದಾನಿಗಳು ಇತ್ತ ಗಮನಸಿ ಹರಿಸಿದ್ರೆ, ಇನ್ನೂ ಹೆಚ್ಚಿನ ಸಮಾಜ ಸೇವೆ ಮಾಡಲು ನಿಜಪ್ಪ ದಂಪತಿ ಅಣಿಯಾಗುತ್ತಾರೆ ಎಂದು ತಿಳಿಸಿದರು.ಡಾ.ಶ್ರೀವತ್ಸ ಕುಲಕರ್ಣಿ ಮಾತನಾಡಿ, ಎಚ್ಐವಿ ಏಡ್ಸ ಅತ್ಯಂತ ವಿನಾಶಕಾರಿಕ ರೋಗಗಳಲ್ಲಿ ಒಂದಾಗಿದ್ದು, ಸೋಂಕಿತರನ್ನು ಕೀಳರಿಮೆಯಿಂದ ಕಾಣಬಾರದು. ಅಸುರಕ್ಷಿತ ಲೈಂಗಿಕ ಕ್ರಿಯೆಯಲ್ಲಿ ಯಾರು ತೊಡಗದೇ ಈ ಸೋಂಕಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದರು. ಅಥಣಿ ಡಿವೈಎಸ್ಪಿ ಪ್ರಶಾಂತ ಮುನ್ನೋಳಿ ಮಾತನಾಡಿ, ಅಸುರಕ್ಷಿತ ಲೈಂಗಿಕತೆ, ಚುಚ್ಚು ಮದ್ದುಗಳ ಮರುಬಳಕೆ, ಸೋಂಕಿತ ಗರ್ಭಿಣಿಯರ ಮಕ್ಕಳಿಗೆ ಏಡ್ಸ ಬರಲು ಪ್ರಮುಖ ಕಾರಣ. ತಾವು ಸೋಂಕಿಗೆ ಒಳಗಾಗುವುದರ ಜೊತೆಗೆ ಸೋಂಕು ಹೊರಡಲು ಕಾರಣರಾಗದಂತೆ ಎಚ್ಚರಿಕೆವಹಿಸಬೇಕು ಎಂದರು.
ಈ ವೇಳೆ ನಿರ್ಗತಿಕ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಸಂಸ್ಥೆಯಿಂದ ಉಡುಗೊರೆ ನೀಡಲಾಯಿತು. ಸಂಸ್ಥೆ ಸಂಸ್ಥಾಪಕ ಅಧ್ಯಕ್ಷರಾದ ನಿಜಪ್ಪ ಹಿರೇಮನಿ, ಸಂಗೀತಾ ಹಿರೇಮನಿ ಹಾಗೂ ಡಾ.ಬಿ.ಎಸ್.ಕಾಂಬಳೆ, ಡಾ.ಸಂಗಮೇಶ ಮಮದಾಪೂರ, ಪ್ರಾಚಾರ್ಯ ಜಗದೀಶ ಹವಾಲ್ದಾರ, ಶ್ರೀಮಂತ ಸೋನಕರ, ಗುರು ಮಿರಜಿ, ಪ್ರಕಾಶ ಲೊಣಾರೆ ಇತರರು ಇದ್ದರು.