ಇತಿಹಾಸ ಪುರುಷರನ್ನು ಮಾತ್ರ ದೇಶ ಸ್ಮರಣೆ ಮಾಡುತ್ತದೆ: ತಹಸೀಲ್ದಾರ್ ನಿಸರ್ಗಪ್ರಿಯ

| Published : Jul 07 2024, 01:18 AM IST

ಇತಿಹಾಸ ಪುರುಷರನ್ನು ಮಾತ್ರ ದೇಶ ಸ್ಮರಣೆ ಮಾಡುತ್ತದೆ: ತಹಸೀಲ್ದಾರ್ ನಿಸರ್ಗಪ್ರಿಯ
Share this Article
  • FB
  • TW
  • Linkdin
  • Email

ಸಾರಾಂಶ

ಜಾತಿ, ಮತ, ಪಂಥ ಹಾಗೂ ಧರ್ಮಗಳನ್ನು ಮೀರಿದ್ದು ಭಾರತೀಯತೆ. ಸಮಾಜದ ಅತ್ಯಂತ ಕೆಳಸ್ತರದ ಸಮುದಾಯದಲ್ಲಿ ಜನಿಸಿದ ಬಾಬು ಜಗಜೀವನರಾಂ ತಮ್ಮ ಅಪ್ರತಿಮ ದೇಶ ಸೇವೆಯ ಮೂಲಕ ಭಾರತೀಯ ನಇತಿಹಾಸದ ಪುಟಗಳಲ್ಲಿ ಅಳಿಸಲಾರದ ಹೆಜ್ಜೆ ಗುರುತುಗಳನ್ನು ಬಿಟ್ಟುಹೋಗಿದ್ದಾರೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಪಟ್ಟಣದ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನ ರಾಂ ಅವರ 38ನೇ ಪುಣ್ಯ ಸಂಸ್ಮರಣೆ ಆಚರಿಸಲಾಯಿತು.

ತಾಲೂಕು ನಾಡಹಬ್ಬಗಳ ಆಚರಣಾ ಸಮಿತಿಯಿಂದ ನಡೆದ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ನಿಸರ್ಗಪ್ರಿಯ ನೇತೃತ್ವದಲ್ಲಿ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ದಲಿತ ಸಂಘಟನೆಗಳ ಮುಖಂಡರು ಬಾಬು ಜಗಜೀವನ ರಾಂ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿದರು.

ದಲಿತ ಮುಖಂಡ ಬಿ.ಬಿ.ಕಾಂತರಾಜು, ದಕ್ಷ ಆಡಳಿಗಾರ ಜಗಜೀವನರಾಂ ದೇಶಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಿದರು. ಇತಿಹಾಸ ಪುರುಷರನ್ನು ಮಾತ್ರ ದೇಶ ಸ್ಮರಣೆ ಮಾಡುತ್ತದೆ. ಸಮಸ್ತ ಭಾರತೀಯರು ಇಂದು ಜಗಜೀವನರಾಂ ಅವರ ಪುಣ್ಯಸ್ಮರಣೆ ಮಾಡುವ ಮೂಲಕ ಅವರನ್ನು ಇತಿಹಾಸ ಪುರುಷರ ಸಾಲಿಗೆ ಸೇರಿಸಿದ್ದಾರೆ ಎಂದರು.

ಜಾತಿ, ಮತ, ಪಂಥ ಹಾಗೂ ಧರ್ಮಗಳನ್ನು ಮೀರಿದ್ದು ಭಾರತೀಯತೆ. ಸಮಾಜದ ಅತ್ಯಂತ ಕೆಳಸ್ತರದ ಸಮುದಾಯದಲ್ಲಿ ಜನಿಸಿದ ಬಾಬು ಜಗಜೀವನರಾಂ ತಮ್ಮ ಅಪ್ರತಿಮ ದೇಶ ಸೇವೆಯ ಮೂಲಕ ಭಾರತೀಯ ನಇತಿಹಾಸದ ಪುಟಗಳಲ್ಲಿ ಅಳಿಸಲಾರದ ಹೆಜ್ಜೆ ಗುರುತುಗಳನ್ನು ಬಿಟ್ಟುಹೋಗಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ತಾಪಂ ಇಒ ಬಿ.ಎಸ್.ಸತೀಶ್, ಶಿಕ್ಷಣ ಇಲಾಖೆ ನೀಲಾಮಣಿ, ಆರೋಗ್ಯ ಇಲಾಖೆ ಶೀಳನೆರೆ ಸತೀಶ್, ಸಾಮಾಜಿಕ ಅರಣ್ಯಾಧಿಕಾರಿ ಶೈಲೇಂದ್ರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಅರುಣಕುಮಾರ್, ಬಿಸಿಎಂ ಅಧಿಕಾರಿ ವೆಂಕಟೆಶ್, ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಮಂಜುನಾಥ್, ಅಗ್ನಿ ಶಾಮಕ ಠಾಣೆ ಅಧಿಕಾರಿ ಚಂದ್ರಶೇಖರ್, ಸರ್ವೆ ಅಧಿಕಾರಿ ಸಿದ್ದಯ್ಯ ಸೇರಿದಂತೆ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು, ದಲಿತ ಮುಖಂಡರಾದ ಬಂಡೀಹೊಳೆ ರಮೇಶ್, ಹೊಸಹೊಳಲು ಪುಟ್ಟರಾಜು, ನಿವೃತ್ತ ಪ್ರಾಂಶುಪಾಲ ರಾಜಯ್ಯ ಸೇರಿದಂತೆ ಹಲವರು ಭಾಗವಹಿಸಿದ್ದರು.ಇಂದು ಹಲವರಿಗೆ ಉತ್ತಮ ಕಾಯಕ ಪ್ರಶಸ್ತಿ ಪ್ರದಾನ

ಶ್ರೀರಂಗಪಟ್ಟಣ:ಮಹಿಳಾ ಮತ್ತು ಗ್ರಾಮೀಣ ಅಭಿವೃದ್ಧಿ ಸೇವಾ ಟ್ರಸ್ಟ್ ಹಾಗೂ ಸಂಸ್ಥೆ ಉದ್ಘಾಟನೆ ಅಂಗವಾಗಿ ತಾಲೂಕಿನ ಬಿದರಹಳ್ಳಿಯ ಗೋವರ್ಧನ್ ಫಾರಂನಲ್ಲಿ ಜುಲೈ 7 ರಂದು ಹಲವರಿಗೆ ಉತ್ತಮ ಕಾಯಕ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಸಮಾರಂಭದಲ್ಲಿ ಕೆಆರ್ ಐಡಿಎಲ್ ಮಾಜಿ ಅಧ್ಯಕ್ಷ ಎಂ.ರುದ್ರೇಶ್ ಅವರಿಗೆ ವಿದ್ಯಾರ್ಥಿಗಳು ಮತ್ತು ಗ್ರಾಮೀಣ ಮತ್ತು ಧಾರ್ಮಿಕ ಕ್ಷೇತ್ರಕ್ಕೆ ನಿಸ್ವಾರ್ಥ ಮನೋಭಾವದಿಂದ ಕೂಡಿದ ಸೇವೆ ಸಹಕಾರ ಮತ್ತು ಸಹಾಯ ಗಮನಿಸಿ, ಬ್ಯಾಂಕ್ ಆಫ್ ಇಂಡಿಯಾ ಎಸ್‌ಕೆವಿಕೆ ಕೇಂದ್ರ ಕಚೇರಿ ಮುಖ್ಯಸ್ಥ ಶ್ರೀನಿವಾಸ್ ಅವರು ಮಹಿಳಾ ಮತ್ತು ಪುರುಷ ಸ್ವಸಹಾಯ ಸಂಘಗಳಿಗೆ ಆರ್ಥಿಕ ನೆರವಿರಿಗೆ ಸಹಕರಿಸಿದ ಹಿನ್ನೆಲೆಯಲ್ಲಿ ಉತ್ತಮ ಕಾಯಕ ಪ್ರಶಸ್ತಿ ನೀಡಿ ಅಭಿನಂದಿಸಲಾಗುವುದು.ಬಿದರಹಳ್ಳಿ ಮಹಿಳಾ ಮತ್ತು ಪುರುಷ ಸ್ವಸಹಾಯ ಸಂಘಗಳು ಫಲಾನುಭವಿಗಳಿಂದ ಕೃತಜ್ಞತಾ ಮನೋಭಾವದ ಕಾರ್ಯಕ್ರಮದಲ್ಲಿ ಶ್ರೀಗುರು ಶಾಂತ ಸ್ವಾಮೀಜಿ ಹಾಗೂ ಶಿವಬಸವ ಸ್ವಾಮೀಜಿ ಸಾನಿಧ್ಯ ವಹಿಸುವರು. ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಎಲ್.ನಾಗರಾಜು ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಮೈಸೂರಿನ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್. ನಂದಿನಿ, ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅಂಚೆ ನಂದೀಶ್ ಭಾಗವಹಿಸುವರು.

ಸುಮಾರು 18 ಗ್ರಾಮಗಳ 3000 ಜನರಿಗೆ 30 ಕೋಟಿ ರು. ಸಾಲವನ್ನು ಕೊಡಿಸಲು ಯಶಸ್ವಿಯಾದ ಮಹಿಳಾ ಮತ್ತು ಗ್ರಾಮೀಣ ಅಭಿವೃದ್ಧಿ ಸೇವಾ ಸಂಸ್ಥೆ ಅಧ್ಯಕ್ಷ ನಿಜಗುಣ ಮತ್ತು ಬ್ಯಾಂಕಿನ ಎಲ್ಲಾ ಹಿರಿಯ ಮತ್ತು ಕಿರಿಯ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಲಾಗುವುದು.