ದೇಶದಲ್ಲಿಯೇ ಕನ್ನಡ ಭಾಷೆಯ ಶ್ರೀಮಂತಿಕೆ ಅಪಾರ

| Published : Jul 07 2024, 01:18 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ: ದೇಶದಲ್ಲಿಯೇ ಕನ್ನಡ ಭಾಷೆಯ ಶ್ರೀಮಂತಿಕೆಯೂ ಅಪಾರವಾಗಿದೆ, ಅಲ್ಲದೇ, ಸಾಹಿತ್ಯವೂ ಅಷ್ಟೇ ಶ್ರೀಮಂತವಾಗಿದೆ. ದೇಶದಲ್ಲಿ ಕನ್ನಡ ಭಾಷೆಗಿರುವ ಇತಿಹಾಸ ಬೇರೆ ಯಾವ ಭಾಷೆಗೂ ಇಲ್ಲ. ಭಾಷೆಯ ಶ್ರೀಮಂತ ಸಾಹಿತ್ಯ ಪರಂಪರೆಯನ್ನು ಎತ್ತಿಹಿಡಿಯುವ ಮೂಲಕ ಕನ್ನಡ ಉಳಿಸಿ ಬೆಳೆಸುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ ನೂತನ ಅಧ್ಯಕ್ಷ ಕಾಮರಾಜ ಬಿರಾದಾರ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ:

ದೇಶದಲ್ಲಿಯೇ ಕನ್ನಡ ಭಾಷೆಯ ಶ್ರೀಮಂತಿಕೆಯೂ ಅಪಾರವಾಗಿದೆ, ಅಲ್ಲದೇ, ಸಾಹಿತ್ಯವೂ ಅಷ್ಟೇ ಶ್ರೀಮಂತವಾಗಿದೆ. ದೇಶದಲ್ಲಿ ಕನ್ನಡ ಭಾಷೆಗಿರುವ ಇತಿಹಾಸ ಬೇರೆ ಯಾವ ಭಾಷೆಗೂ ಇಲ್ಲ. ಭಾಷೆಯ ಶ್ರೀಮಂತ ಸಾಹಿತ್ಯ ಪರಂಪರೆಯನ್ನು ಎತ್ತಿಹಿಡಿಯುವ ಮೂಲಕ ಕನ್ನಡ ಉಳಿಸಿ ಬೆಳೆಸುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ ನೂತನ ಅಧ್ಯಕ್ಷ ಕಾಮರಾಜ ಬಿರಾದಾರ ಭರವಸೆ ನೀಡಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಮಾಧ್ಯಮ ಸಂವಾದಲ್ಲಿ ಮಾತನಾಡಿದ ಅವರು, ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಸಿಂಪೀರ ವಾಲಿಕಾರವರು ಹಾಗೂ ಮುದ್ದೇಬಿಹಾಳ ಪಟ್ಟಣದ ಗಣ್ಯರು ಸೇರಿ ನನ್ನನ್ನು ತಾಲೂಕ ಕನ್ನಡ ಸಾಹಿತ್ಯ ಪರಿಷತ್ ನೂತನ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದಾರೆ. ನನ್ನ ಸಾಮಾಜಿಕ ಸೇವೆ ಮತ್ತು ಕನ್ನಡ ತಾಯಿ ಭುವನೇಶ್ವರಿಯ ಸೇವೆ ಮಾಡುವ ಸೌಭಾಗ್ಯ ಕಲ್ಪಸಿದ್ದಾರೆ. ಅದರಂತೆ ಅವರ ಹೆಸರಿಗೆ ಧಕ್ಕೆ ಬರದಂತೆ ವಿಶ್ವಾಸಾರ್ಹ ಕಾರ್ಯದಲ್ಲಿ ತೊಡಗಿಸಿಕೊಂಡು ಎಲ್ಲರ ವಿಶ್ವಾಸದೊಂದಿಗೆ ಕೆಲಸ ಮಾಡುತ್ತೇನೆ. ನನ್ನ ಆಯ್ಕೆ ಮಾಡಿದ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು.ಈ ಹಿಂದೆ ಸಾಕಷ್ಟು ಜನ ಹಿರಿಯರು ಕನ್ನಡ ಸಾಹಿತ್ಯ ಪರಿಷತ್ತನ್ನು ಕಟ್ಟಿ ಬೆಳೆಸಿದ್ದಾರೆ ಅನೇಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದಾರೆ. ಅವರ ದಾರಿಯಲ್ಲಿ ಯಶಸ್ವಿಯಾಗುವ ಯೋಚನೆಗಳೊಂದಿಗೆ ಯಾವೂದೇ ಜಾತಿ, ಮತ, ಪಂಥ ಮೇಲು, ಕೀಳು ಎನ್ನದೇ ಎಲ್ಲರನ್ನು ಗೌರವದಿಂದ ಕಾಣುವುದರೊಂದಿಗೆ ಕನ್ನಡ ಸಾಹಿತ್ಯ ಸಮ್ಮೇಳನ, ದತ್ತಿ ಉಪನ್ಯಾಸಗಳು, ಗ್ರಂಥಗಳ ಬಿಡುಗಡೆ, ಸೇರಿದಂತೆ ಅನೇಕ ರೀತಿಯ ಸಾಹಿತ್ಯಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಕನ್ನಡದ ಕಂಪು ಪಸರಿಸುವಂತೆ ಮಾಡುತ್ತೇನೆ ಎಂದು ಹೇಳಿದರು.ತಾಲೂಕಿನಲ್ಲಿ ಅದೇಷ್ಟೋ ಜನ ಹಿರಿಯ ಹಾಗೂ ಯುವ ಸಾಹಿತಿಗಳಿದ್ದು, ಅವರಿಗೆಲ್ಲ ಸಕಾಲದಲ್ಲಿ ಕನ್ನಡ ವೇದಿಕೆ ಸಿಗದೇ ವಂಚಿತರಾಗಿದ್ದಾರೆ ಎಂಬುದು ತಿಳಿದು ಬಂದಿದೆ. ಅಂತವರನ್ನು ಗುರ್ತಿಸಿ ಕಲೆ ಸಾಹಿತ್ಯಕ್ಕೆ ಗೌರವ ದೊರಕುವಂತೆ ಮಾಡಲಾಗುವುದು. ಈ ಹಿನ್ನಲೆಯಲ್ಲಿ ತಾಲೂಕಿನ ಹಿರಿಯರ ಮಾರ್ಗದರ್ಶನದಲ್ಲಿ ತಾಲೂಕಿನ ನೆನೆಗುದಿಗೆ ಬಿದ್ದಿರುವ ಸಾಹಿತ್ಯಾತ್ಮಕ ಚಟುವಟಿಕೆಗಳನ್ನು ಮತ್ತು ಕನ್ನಡ ಹಬ್ಬಗಳನ್ನು ಆಯೋಜಿಸುವ ಮೂಲಕ ಯುವ ಸಾಹಿತಿಗಳಿಗೆ ಪ್ರೇರಣೆ ಜೊತೆಗೆ ಮಾದರಿಯ ಕಾರ್ಯ ಮಾಡುತ್ತೇನೆ. ಜೊತೆಗೆ ಸಾಹಿತ್ಯ ಪರಿಷತ್‌ನ ಗೌರವ ಎತ್ತಿಹಿಡಿಯಲು ಶ್ರಮಿಸುವ ಕನಸು ಹೊಂದಿದ್ದಾಗಿ ತಿಳಿಸಿದರು.ಈ ವೇಳೆ ಹಿರಿಯ ಮುಖಂಡ ವೈ.ಎಚ್.ವಿಜಯಕರ ಮಾತನಾಡಿ, ಕಾಮರಾಜ ಬಿರಾದಾರ ಅವರು ಸಣ್ಣ ವಯಸ್ಸಿನಲ್ಲೇ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದು ನಿಜಕ್ಕೂ ಶ್ಲಾಘನಿಯ. ಅವರು ಆ ಸ್ಥಾನವನ್ನು ತುಂಬಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಕನ್ನಡ ತಾಯಿಯ ತೇರು ಎಳೆಯವ ಕಾರ್ಯಕ್ಕೆ ತಾಲೂಕಿನ ಪಟ್ಟಣದ ಎಲ್ಲ ಗಣ್ಯರು ಕೈಜೋಡಿಸಬೇಕು ಎಂದು ಮನವಿ ಮಾಡಿದರು.ಹೋಟೆಲ್ ಉದ್ಯಮಿ ಸದಾಶಿವ ಮಠ, ಪುರಸಭೆ ಸದಸ್ಯ ಮೈಬೂಬ ಗೊಳಸಂಗಿ, ಹುಸೇನ ಮುಲ್ಲಾ, ಸಂಗಪ್ಪ ಮೇಲಿನಮನಿ, ಬಸಲಿಂಗಪ್ಪ ರಕ್ಕಸಗಿ, ವಿಲಾಸ ಪಾಟೀಲ, ರವಿ ಪಾಟೀಲ, ಬಾಬು ಗೊಳಸಂಗಿ, ಹುಸೇನ ಕಾಳಗಿ ಸೇರಿದಂತೆ ಸಾಹಿತ್ಯಾಸಕ್ತರು ಈ ವೇಳೆ ಹಾಜರಿದ್ದರು.೫ಎಂಬಿಎಲ್೧: ಮುದ್ದೇಬಿಹಾಳ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಮಾಧ್ಯಮ ಸಂವಾದ ಸಭೆಯಲ್ಲಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ನೂತನ ಅಧ್ಯಕ್ಷ ಕಾಮರಾಜ ಬಿರಾದಾರ ಮಾತನಾಡಿದರು.

---------------------------

ಕೋಟ್‌ಪಟ್ಟಣದ ಗಣ್ಯರು ಸೇರಿ ನನ್ನನ್ನು ತಾಲೂಕ ಕನ್ನಡ ಸಾಹಿತ್ಯ ಪರಿಷತ್ ನೂತನ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದಾರೆ. ನನ್ನ ಸಾಮಾಜಿಕ ಸೇವೆ ಮತ್ತು ಕನ್ನಡ ತಾಯಿ ಭುವನೇಶ್ವರಿಯ ಸೇವೆ ಮಾಡುವ ಸೌಭಾಗ್ಯ ಕಲ್ಪಸಿದ್ದಾರೆ. ಅದರಂತೆ ಅವರ ಹೆಸರಿಗೆ ಧಕ್ಕೆ ಬರದಂತೆ ವಿಶ್ವಾಸಾರ್ಹ ಕಾರ್ಯದಲ್ಲಿ ತೊಡಗಿಸಿಕೊಂಡು ಎಲ್ಲರ ವಿಶ್ವಾಸದೊಂದಿಗೆ ಕೆಲಸ ಮಾಡುತ್ತೇನೆ. ನನ್ನ ಆಯ್ಕೆ ಮಾಡಿದ ಎಲ್ಲರಿಗೂ ಧನ್ಯವಾದಗಳು.ಕಾಮರಾಜ ಬಿರಾದಾರ. ಕಸಾಪ ತಾಲೂಕ ಅಧ್ಯಕ್ಷ

-------------