ಸಾರಾಂಶ
ರಕ್ತದಾನ ಮೂಲಕ ಸಂಗ್ರಹಿಸಿದ ರಕ್ತದಲ್ಲಿ ಎಚ್‌ಐವಿ ಸೋಂಕು ಇರುವ ಪ್ರಕರಣಗಳು ಹೆಚ್ಚು ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ದಾನಿಯಿಂದ ಪಡೆದ ರಕ್ತದಲ್ಲಿನ ಸೋಂಕು ಪತ್ತೆ ಹಚ್ಚಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿಯ ಡಾ। ಧನಂಜಯ ಸರ್ಜಿ ಆಗ್ರಹಿಸಿದರು.
ಕನ್ನಡಪ್ರಭ ವಾರ್ತೆ ವಿಧಾನ ಪರಿಷತ್
ರಕ್ತದಾನ ಮೂಲಕ ಸಂಗ್ರಹಿಸಿದ ರಕ್ತದಲ್ಲಿ ಎಚ್‌ಐವಿ ಸೋಂಕು ಇರುವ ಪ್ರಕರಣಗಳು ಹೆಚ್ಚು ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ದಾನಿಯಿಂದ ಪಡೆದ ರಕ್ತದಲ್ಲಿನ ಸೋಂಕು ಪತ್ತೆ ಹಚ್ಚಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿಯ ಡಾ। ಧನಂಜಯ ಸರ್ಜಿ ಆಗ್ರಹಿಸಿದರು.ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ರಾಜ್ಯದ ಅಂಕಿ-ಅಂಶಗಳ ಪ್ರಕಾರ 2024-25ರಲ್ಲಿ 44776 ಯೂನಿಟ್, 2023-24ರಲ್ಲಿ 37,906 ಯೂನಿಟ್ ಹಾಗೂ 2022-23ರಲ್ಲಿ 43857 ಯೂನಿಟ್ ರಕ್ತಗಳಲ್ಲಿ ಎಚ್‌ಐವಿ ಸೋಂಕು ಪತ್ತೆಯಾಗಿ ಅಂತಹ ರಕ್ತವನ್ನು ನಾಶಪಡಿಸಲಾಗಿದೆ. 2018-19ರಲ್ಲಿ ಆರ್‌ಟಿಐ ವರದಿಯಲ್ಲಿ 1341 ಜನರಿಗೆ ಎಚ್‌ಐವಿ ಸೋಂಕಿತ ರಕ್ತ ನೀಡಲಾಗಿದೆ. ಎಚ್‌ಐವಿ ಸೋಂಕು ತಗುಲಿ ಎರಡು ವಾರದ ನಂತರ ಆತನ ರಕ್ತದಲ್ಲಿ ಸೋಂಕು ದೃಢಪಡುತ್ತದೆ. ಒಂದು ವೇಳೆ ಈ ಅವಧಿಯಲ್ಲಿ ಆತ ರಕ್ತ ನೀಡಿದಲ್ಲಿ ಅದನ್ನು ಪತ್ತೆ ಹೆಚ್ಚಲು ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ. ಜೊತೆಗೆ ಹೆಪಟೈಟಿಸ್, ಮಲೇರಿಯಾದಂತಹ ಸೋಂಕುಗಳ ಪತ್ತೆಯಲ್ಲೂ ಬಿಗಿ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.