ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಪಿಂಚಣಿದಾರರ ಅಹವಾಲು ಆಲಿಸಲು ಹಾಗೂ ಅರ್ಹರಿಗೆ ಪಿಂಚಣಿ ಮಂಜೂರು ಮಾಡುವ ಕುರಿತು ಸಾಮಾಜಿಕ ಭದ್ರತಾ ಯೋಜನೆಯಡಿ ಜಿಲ್ಲೆಯ 14 ಗ್ರಾಮಗಳಲ್ಲಿ ಅ.5ರಂದು ಹೋಬಳಿ ಮಟ್ಟದ ಪಿಂಚಣಿ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ತಿಳಿಸಿದರು.ಅಕ್ಟೋಬರ್ 5ರ ಬೆಳಗ್ಗೆ 11 ಗಂಟೆಗೆ ಮುದ್ದೇಬಿಹಾಳ ತಾಲೂಕಿನ ಸರೂರ ಗ್ರಾಮದ ಶ್ರೀ ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ವಿಜಯಪುರದ ಉಪ ವಿಭಾಗಾಧಿಕಾರಿ ಮತ್ತು ದೇವರ ಹಿಪ್ಪರಗಿ ತಾಲೂಕಿನ ಚಿಕ್ಕರೂಗಿ ಗ್ರಾಮದ ಶ್ರೀ ಹನುಮಾನ ಮಂದಿರದಲ್ಲಿ ಇಂಡಿ ಉಪ ವಿಭಾಗಾಧಿಕಾರಿ ಪಿಂಚಣಿ ಅದಾಲತ್ ನಡೆಸಲಿದ್ದಾರೆ.ವಿಜಯಪುರ ಗ್ರೇಡ್-2 ತಹಶೀಲ್ದಾರ್ ಡೋಮನಾಳ ಗ್ರಾಮದ ಗ್ರಾಮ ಚಾವಡಿಯಲ್ಲಿ, ತಿಕೋಟಾ ಗ್ರೇಡ್-2 ತಹಶೀಲ್ದಾರ್ ಮಲಕನದೇವರಹಟ್ಟಿ ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ, ಬಬಲೇಶ್ವರದ ಗ್ರೇಡ್-2 ತಹಶೀಲ್ದಾರ್ ತಾಜಪೂರ ಪಿ.ಎಂ. ಗ್ರಾಮದ ಸರ್ಕಾರಿ ಗಂಡು ಮಕ್ಕಳ ಶಾಲೆಯಲ್ಲಿ ಪಿಂಚಣಿ ಅದಾಲತ್ ನಡೆಸಲಿದ್ದಾರೆ.ಬ.ಬಾಗೇವಾಡಿ ಗ್ರೇಡ್-2 ತಹಶೀಲ್ದಾರ್ ಮನಗೂಳಿ ಗ್ರಾಮದ ಗ್ರಾಮ ಚಾವಡಿಯಲ್ಲಿ, ತಹಶೀಲ್ದಾರ್ ಗ್ರೇಡ್-1 ಚಿಕ್ಕ ಆಸಂಗಿಯ ಸಮುದಾಯ ಭವನದಲ್ಲಿ ಹಾಗೂ ನಿಡಗುಂದಿ ಗ್ರೇಡ್-2 ತಹಶೀಲ್ದಾರ್ ಗೊಳಸಂಗಿ ಗ್ರಾಮದ ವಿಠ್ಠಲ ಮಂದಿರದಲ್ಲಿ ಪಿಂಚಣಿ ಅದಾಲತ್ ನಡೆಸುವರು.ಮುದ್ದೇಬಿಹಾಳ ಗ್ರೇಡ್-2 ತಹಶೀಲ್ದಾರ್ ಅಮರಗೋಳ ಗ್ರಾಮದ ದೇವಪ್ಪ ಮುತ್ಯಾನ ಮಠದಲ್ಲಿ, ತಾಳಿಕೋಟೆ ತಹಶೀಲ್ದಾರ್ ಅವರು ರಾಂಪೂರ.ಪಿ.ಟಿ ಗ್ರಾಮದ ಮಾರುತಿ ದೇವಸ್ಥಾನದಲ್ಲಿ, ಇಂಡಿ ಗ್ರೇಡ್-2 ತಹಶೀಲ್ದಾರ್ ಬನ್ನಿಹಟ್ಟಿ ಗ್ರಾಮದ ಹನುಮಾನ ದೇವಸ್ಥಾನದ ಆವರಣದಲ್ಲಿ, ಚಡಚಣ ಗ್ರೇಡ್-2 ತಹಶೀಲ್ದಾರ್ ಗೋವಿಂದಪೂರ ಗ್ರಾಮದ ಲಕ್ಕಮ್ಮದೇವಿ ದೇವಸ್ಥಾನದಲ್ಲಿ ಪಿಂಚಣಿ ಅದಾಲತ್ ನಡೆಸಲಿದ್ದಾರೆ.ಸಿಂದಗಿ ಗ್ರೇಡ್-2 ತಹಶೀಲ್ದಾರ್ ಮಾಡಬಾಳ ಗ್ರಾಮದ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ, ಹಾಗೂ ಆಲಮೇಲ ತಹಶೀಲ್ದಾರ್ ಬಗಲೂರು ಗ್ರಾಮದ ಗ್ರಾಚಾಯಲ್ಲಿ ಪಿಂಚಣಿ ಅದಾಲತ್ ನಡೆಸಲಿದ್ದಾರೆ. ಪಿಂಚಣಿ ಅದಾಲತ್ ನಡೆಯುವ ಗ್ರಾಮಗಳಲ್ಲಿ ಸಾಮಾಜಿಕ ಭದ್ರತೆ ಪಿಂಚಣಿ ಫಲಾನುಭವಿಗಳಿಗೆ ಎನ್.ಪಿ.ಸಿ.ಐ. ಮ್ಯಾಪಿಂಗ್ ಕಾರ್ಯವನ್ನು ಸಂಬಂಧಿಸಿದ ಬ್ಯಾಂಕ್, ಅಂಚೆ ಕಚೇರಿ ಅಧಿಕಾರಿಗಳ ಸಹಯೋಗದೊಂದಿಗೆ ತಪ್ಪದೇ ಮಾಡಿಸುವಂತೆಯೂ ಹಾಗೂ ಪಿಂಚಣಿ ಅದಾಲತ್‌ನಲ್ಲಿ ಪಿಂಚಣಿದಾರರ ಮಾಹಿತಿಯೊಂದಿಗೆ ಎಲ್ಲಾ ಗ್ರಾಮಗಳ ಗ್ರಾಮ ಲೆಕ್ಕಿಗರು, ಪಂಚಾಯತ್ ಕಾರ್ಯದರ್ಶಿಗಳು, ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು ಹಾಗೂ ಅಂಚೆ ಕಚೇರಿ ಸಿಬ್ಬಂದಿಗಳು ಕಡ್ಡಾಯವಾಗಿ ಹಾಜರಿರುವಂತೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.