ಕೆರಗೋಡಿನಲ್ಲಿ ಮತ್ತೆ ಹನುಮ ಧ್ವಜ ಹಾರಿಸಿ: ಬಿಜೆಪಿ

| Published : Jan 30 2024, 02:02 AM IST

ಕೆರಗೋಡಿನಲ್ಲಿ ಮತ್ತೆ ಹನುಮ ಧ್ವಜ ಹಾರಿಸಿ: ಬಿಜೆಪಿ
Share this Article
  • FB
  • TW
  • Linkdin
  • Email

ಸಾರಾಂಶ

ಹನುಮ ಧ್ವಜ ಹಾರಿಸಿದ್ದ ವಿಶಾಲ ಕಂಬದ ಮೇಲೆ ರಾಷ್ಟ್ರ ಧ್ವಜಾರೋಹಣವನ್ನು ಮಧ್ಯಾಹ್ನ 3 ಗಂಟೆಗೆ ಮಾಡುವ ಮೂಲಕ ರಾಷ್ಟ್ರಧ್ವಜಕ್ಕೂ ಕಾಂಗ್ರೆಸ್ ಸರ್ಕಾರ, ಪೊಲೀಸ್ ಇಲಾಖೆ ಅವಮಾನಿಸಿದೆ. ರಾಷ್ಟ್ರಧ್ವಜಕ್ಕೆಂದೇ ಧ್ವಜ ಸಂಹಿತೆ ಇದೆ. ರಾಷ್ಟ್ರಧ್ವಜಕ್ಕೆ ಸಂಬಂಧಿಸಿದ ನಿಯಮಾವಳಿಗಳನ್ನೇ ಉಲ್ಲಂಘಿಸುವ ಮೂಲಕ ಸರ್ಕಾರ ಅವಮಾನ ಮಾಡಿದ್ದನ್ನು ಖಂಡಿಸುತ್ತೇವೆ. ತಕ್ಷಣವೇ ಕೆರಗೋಡಿನಲ್ಲಿ ಮತ್ತೆ ಹನುಮನ ಧ್ವಜ ಹಾರಿಸಬೇಕು. ಈ ಮೂಲಕ ಹಿಂದು ಸಮಾಜಕ್ಕೆ ಗೌರವ ನೀಡುವ ಮಾದರಿಯಲ್ಲಿ ಇನ್ನಾದರೂ ಸರ್ಕಾರ ಕೆಲಸ ಮಾಡಲಿ.

ಕನ್ನಡಪ್ರಭ ವಾರ್ತೆ ದಾವಣಗೆರೆ

ಮಂಡ್ಯ ಜಿಲ್ಲೆ ಕೆರಗೋಡಿನಲ್ಲಿ ಗ್ರಾಪಂ ಅನುಮತಿ ಪಡೆದು ಹನುಮ ಧ್ವಜ ಆರೋಹಣ ಮಾಡಿದ್ದನ್ನು ರಾಜ್ಯ ಕಾಂಗ್ರೆಸ್ ಸರ್ಕಾರ, ಅಲ್ಲಿನ ಜಿಲ್ಲಾ ಸಚಿವರು, ಸ್ಥಳೀಯ ಶಾಸಕರ ಪ್ರಚೋದನೆಯಿಂದ ಇಳಿಸಿದ್ದನ್ನು ಖಂಡಿಸಿ ಬಿಜೆಪಿ ಜಿಲ್ಲಾ ಘಟಕದಿಂದ ನಗರದಲ್ಲಿ ಸೋಮವಾರ ಪ್ರತಿಭಟಿಸಲಾಯಿತು.

ನಗರದ ಕೆಬಿ ಬಡಾವಣೆಯ ಬಿಜೆಪಿ ಕಾರ್ಯಾಲಯದಿಂದ ಪಕ್ಷದ ಹಿರಿಯ ಮುಖಂಡರು, ಪದಾಧಿಕಾರಿಗಳ ನೇತೃತ್ವದಲ್ಲಿ ಹಳೆ ಪಿಬಿ ರಸ್ತೆ ಮಾರ್ಗವಾಗಿ ಉಪ ವಿಭಾಗಾಧಿಕಾರಿ ಕಚೇರಿವರೆಗೆ ರಾಜ್ಯ ಸರ್ಕಾರದ ಹಿಂದು ವಿರೋಧಿ ನೀತಿ, ಧೋರಣೆಗಳ ವಿರುದ್ಧ ಘೋಷಣೆ ಕೂಗುತ್ತಾ ಸಾಗಿದ ಕಾರ್ಯಕರ್ತರು ನಂತರ ಉಪವಿಭಾಗಾಧಿಕಾರಿ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಪಕ್ಷದ ಮುಖಂಡರು, ರಾಜ್ಯವನ್ನು ಆಳುತ್ತಿರುವ ಕಾಂಗ್ರೆಸ್ ಸರ್ಕಾರವು ಶ್ರೀರಾಮ, ಹನುಮ, ಹಿಂದು ವಿರೋಧಿ ನೀತಿಗಳ ಅನುಸರಿಸುತ್ತಿದೆ. ಮಂಡ್ಯ ಜಿಲ್ಲೆ ಕೆರಗೋಡಿನಲ್ಲಿ ಗ್ರಾಪಂ ಅನುಮತಿ, ಸರ್ವಾನುಮತದೊಂದಿಗೆ ಸ್ವಂತ ಖರ್ಚಿನಲ್ಲಿ ಹನುಮ ಧ್ವಜ ಆರೋಹಣ ಮಾಡಲಾಗಿತ್ತು. ಆದರೆ, ಇದನ್ನು ಸಹಿಸದ ಕಾಂಗ್ರೆಸ್ ಸರ್ಕಾರ, ಅಲ್ಲಿನ ಜಿಲ್ಲಾ ಮಂತ್ರಿ, ಸ್ಥಳೀಯ ಶಾಸಕರ ಪ್ರಚೋದನೆಯಿಂದ ಹನುಮ ಧ್ವಜ ತೆರವುಗೊಳಿಸಿದ್ದು ಇದನ್ನು ಇಡೀ ಗ್ರಾಮಸ್ಥರು ತೀವ್ರವಾಗಿ ಖಂಡಿಸಿದ್ದಾರೆ ಎಂದರು.

ಹನುಮ ಧ್ವಜ ಹಾರಿಸಿದ್ದ ವಿಶಾಲ ಕಂಬದ ಮೇಲೆ ರಾಷ್ಟ್ರ ಧ್ವಜಾರೋಹಣವನ್ನು ಮಧ್ಯಾಹ್ನ 3 ಗಂಟೆಗೆ ಮಾಡುವ ಮೂಲಕ ರಾಷ್ಟ್ರಧ್ವಜಕ್ಕೂ ಕಾಂಗ್ರೆಸ್ ಸರ್ಕಾರ, ಪೊಲೀಸ್ ಇಲಾಖೆ ಅವಮಾನಿಸಿದೆ. ರಾಷ್ಟ್ರಧ್ವಜಕ್ಕೆಂದೇ ಧ್ವಜ ಸಂಹಿತೆ ಇದೆ. ರಾಷ್ಟ್ರಧ್ವಜಕ್ಕೆ ಸಂಬಂಧಿಸಿದ ನಿಯಮಾವಳಿಗಳನ್ನೇ ಉಲ್ಲಂಘಿಸುವ ಮೂಲಕ ಸರ್ಕಾರ ಅವಮಾನ ಮಾಡಿದ್ದನ್ನು ಖಂಡಿಸುತ್ತೇವೆ. ತಕ್ಷಣವೇ ಕೆರಗೋಡಿನಲ್ಲಿ ಮತ್ತೆ ಹನುಮನ ಧ್ವಜ ಹಾರಿಸಬೇಕು. ಈ ಮೂಲಕ ಹಿಂದು ಸಮಾಜಕ್ಕೆ ಗೌರವ ನೀಡುವ ಮಾದರಿಯಲ್ಲಿ ಇನ್ನಾದರೂ ಸರ್ಕಾರ ಕೆಲಸ ಮಾಡಲಿ ಎಂದು ತಾಕೀತು ಮಾಡಿದರು.

ಪಕ್ಷದ ಜಿಲ್ಲಾಧ್ಯಕ್ಷ ಎನ್‌.ರಾಜಶೇಖರ ನಾಗಪ್ಪ, ಶಾಸಕ ಬಿ.ಪಿ.ಹರೀಶ ಗೌಡ, ಮಾಜಿ ಸಚಿವರಾದ ಎಸ್.ಎ.ರವೀಂದ್ರನಾಥ, ಎಂ.ಪಿ.ರೇಣುಕಾಚಾರ್ಯ, ಮುಖಂಡರಾದ ಎಸ್.ಎಂ.ವೀರೇಶ ಹನಗವಾಡಿ, ಯಶವಂತರಾವ್ ಜಾಧವ್, ಟಿ.ಶ್ರೀನಿವಾಸ ದಾಸಕರಿಯಪ್ಪ, ಬಿ.ಎಸ್‌.ಜಗದೀಶ, ಡಾ.ಟಿ.ಜಿ.ರವಿಕುಮಾರ, ರಾಜನಹಳ್ಳಿ ಶಿವಕುಮಾರ, ಪಿ.ಸಿ.ಶ್ರೀನಿವಾಸ ಭಟ್‌, ಬಿ.ಎಂ.ಸತೀಶ, ಲೋಕಿಕೆರೆ ನಾಗರಾಜ, ಕೆ.ಬಿ.ಕೊಟ್ರೇಶ, ಚಂದ್ರಶೇಖರ ಪೂಜಾರ, ಬಿ.ಜಿ.ಅಜಯಮಾರ, ಆರ್.ಲಕ್ಷ್ಮಣ, ಎಸ್.ಟಿ.ವೀರೇಶ, ಆರ್.ಎಲ್.ಶಿವಪ್ರಕಾಶ, ಪ್ರಭು ಕಲ್ಬುರ್ಗಿ, ಸಂತೋಷ ಪೈಲ್ವಾನ್, ಶಿವನಗೌಡ ಪಾಟೀಲ, ಟಿಂಕರ್ ಮಂಜಣ್ಣ, ತರಕಾರಿ ಶಿವು, ನವೀನ, ಭಾಗ್ಯ ಪಿಸಾಳೆ, ಪುಷ್ಪಾ ವಾಲಿ, ಚೇತನ ಶಿವಕುಮಾರ, ಕಡ್ಲೇಬಾಳು ಧನಂಜಯ, ಧನುಷ್ ರೆಡ್ಡಿ, ಕೆಟಿಜೆ ನಗರ ಲೋಕೇಶ, ಆನಂದ, ನಿಂಗರಾಜ ರೆಡ್ಡಿ, ಬಾತಿ ದೊಗ್ಗಳ್ಳಿ ವೀರೇಶ, ಸೋಗಿ ಗುರು, ಎಲ್‌.ಡಿ.ಗೋಣೆಪ್ಪ, ಕರಾಟೆ ತಿಮ್ಮೇಶ, ಎನ್.ಎಚ್.ಹಾಲೇಶ ನಾಯಕ ಇತರರಿದ್ದರು.ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಬಾಯಿಂದ ಕೇವಲ ಶ್ರೀರಾಮ ಅಂತಾ ಹೇಳುವುದಲ್ಲ. ಹೃದಯದಿಂದ ಅದು ಬರಬೇಕು. ಇನ್ನಾದರೂ ಓಲೈಕೆ ರಾಜಕಾರಣ, ತುಷ್ಟೀಕರಣ ನೀತಿ ಕೈಬಿಡದಿದ್ದರೆ, ರಾಜ್ಯದ ಜನತೆಯೇ ಶಾಶ್ವತವಾಗಿ ನಿಮ್ಮ ಕೈಬಿಡುವ ದಿನ ದೂರವಿಲ್ಲ.

ಬಿ.ಪಿ.ಹರೀಶ ಗೌಡ, ಹರಿಹರ ಶಾಸಕ

--

ಕಾಂಗ್ರೆಸ್ ಸರ್ಕಾರ ನಿರಂತರ ಹಿಂದು ವಿರೋಧಿ ಧೋರಣೆ ಅನುಸರಿಸುತ್ತಿದೆ. ಹಿಂದು ಆಚರಣೆಗಳ ವಿರುದ್ಧ ನಿರಂತರ ದೌರ್ಜನ್ಯ, ದಬ್ಬಾಳಿಕೆ ಮಾಡುತ್ತಿದೆ. ಒಂದು ಧರ್ಮದ ಪರವಾಗಿ ತುಷ್ಟೀಕರಣ ನೀತಿ ಅನುಸರಿಸುತ್ತಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ರಾಜ್ಯದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ.

ಎನ್‌.ರಾಜಶೇಖರ ನಾಗಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ