ಸಾರಾಂಶ
ಶಿಗ್ಗಾವಿ ಪಟ್ಟಣದಲ್ಲಿ ಶುಕ್ರವಾರ ಹೋಳಿ ಹಬ್ಬವನ್ನು ಮಕ್ಕಳು, ಯುವಕರು, ಮಹಿಳೆಯರು ಆದಿಯಾಗಿ ಬಗೆಬಗೆಯ ಬಣ್ಣಗಳನ್ನು ಎರಚುತ್ತಾ, ಹಲಗೆ ನಾದ ಹಾಗೂ ಡಿಜೆ ಹಾಡಿಗೆ ಸ್ಟೇಪ್ ಹಾಕುತ್ತಾ ಸಂಭ್ರಮದಿಂದ ಆಚರಿಸಿದರು.
ಶಿಗ್ಗಾವಿ: ಪಟ್ಟಣದಲ್ಲಿ ಶುಕ್ರವಾರ ಹೋಳಿ ಹಬ್ಬವನ್ನು ಮಕ್ಕಳು, ಯುವಕರು, ಮಹಿಳೆಯರು ಆದಿಯಾಗಿ ಬಗೆಬಗೆಯ ಬಣ್ಣಗಳನ್ನು ಎರಚುತ್ತಾ, ಹಲಗೆ ನಾದ ಹಾಗೂ ಡಿಜೆ ಹಾಡಿಗೆ ಸ್ಟೇಪ್ ಹಾಕುತ್ತಾ ಸಂಭ್ರಮದಿಂದ ಆಚರಿಸಿದರು.
ಬೆಳಗ್ಗೆಯಿಂದಲೇ ಯುವಕರು, ಮಹಿಳೆಯರು, ಮಕ್ಕಳು, ಸೇರಿದಂತೆ ಎಲ್ಲರೂ ಒಂದಾಗಿ ಸಂಭ್ರಮದಲ್ಲಿ ಪಾಲ್ಗೊಂಡಿದ್ದು, ವಿಶೇಷವಾಗಿ ಹಳೆ ಪೇಟೆಯ ವಿರಾಟಗಲ್ಲಿಯಲ್ಲಿನ ಡಿಜೆ ನಾದಕ್ಕೆ ಸ್ಟೇಪ್ ಹಾಕುತ್ತ ಹಿರಿಯರು ತಲೆದೂಗುತ್ತಾ ಬಣ್ಣದೋಕುಳಿಯಲ್ಲಿ ತಮ್ಮನ್ನೇ ತಾವು ಮರೆತಿರುವುದು ಸಾಮಾನ್ಯವಾಗಿತ್ತು,ಪೂರ್ವಜರ ಪ್ರತೀತಿಯಂತೆ ಹಳೆ ಪೇಟೆಯ ಪ್ರಸಿದ್ಧ ಕಾಮನ ಕಟ್ಟೆಯಲ್ಲಿ ಪ್ರತಿಷ್ಠಾಪಿಸಿರುವ ರತಿ-ಕಾಮನ ಮೂರ್ತಿಯನ್ನು ಮಧ್ಯಾಹ್ನ ಪಟ್ಟಣದ ತುಂಬೆಲ್ಲ ಮೆರವಣಿಗೆ ಮಾಡುವ ಮೂಲಕ ಸಾಯಂಕಾಲ ಪುನಃ ಹಳೆ ಪೇಟೆಯ ಕಾಮಣ್ಣನ ಕಟ್ಟೆಯಲ್ಲಿಯೆ ಮೂರ್ತಿಗಳನ್ನು ದಹಿಸಿದ ನಂತರ ಅಲ್ಲಿಯ ಬೆಂಕಿಯಿಂದ ಪಟ್ಟಣದ ದೇಸಾಯಿ ಓಣಿ, ಬೆಣ್ಣೆ ಕಟ್ಟಿ, ವಿರಕ್ತಮಠ ಓಣಿ, ಹಾದಿಮನಿ ಓಣಿ, ಗಾಂಧಿ ನಗರ, ಈಶ್ವರ ದೇವಸ್ಥಾನದ ಓಣಿ, ಭಾವನಮಠದ ಓಣಿ ಸೇರಿದಂತೆ ಪಟ್ಟಣದ ಎಲ್ಲ ಬಡಾವಣೆಯಲ್ಲಿ ಪ್ರತಿಷ್ಠಾಪಿಸಿರುವ ಕಾಮಣ್ಣ, ರತಿ-ಮನ್ಮಥರ ಮೂರ್ತಿಗಳನ್ನು ದಹಿಸುವ ಮೂಲಕ ಸಂಭ್ರಮದ ಹಬ್ಬಕ್ಕೆ ವಿರಾಮ ನೀಡಿದರು. ಬಿಗಿಯಾದ ಪೊಲೀಸ್ ಬಂದೋಬಸ್ತ್: ಪಟ್ಟಣದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಅಧಿಕಾರಿಗಳ ನೇತೃತ್ವದ ಪೊಲೀಸ್ ಪಡೆಯು ಸೂಕ್ತ ಬಂದೋಬಸ್ತ್ ವ್ಯವಸ್ಥೆ ಏರ್ಪಡಿಸಿದ್ದರು. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪಟ್ಟಣದಲ್ಲಿರುವ ವ್ಯಾಪಾರ ಮಳಿಗೆಗಳು ಮತ್ತು ಮದ್ಯ ಮಾರಾಟ ಅಂಗಡಿಗಳನ್ನು ಬಂದ್ ಮಾಡಲಾಗಿತ್ತು.