ಬಾಂಧವ್ಯ ಬೆಸೆಯುವ ಹೋಳಿ

| Published : Mar 28 2024, 12:46 AM IST

ಸಾರಾಂಶ

ರಾಮದುರ್ಗ: ಹೋಳಿ ಹಬ್ಬ ಪರಸ್ಪರ ಬಾಂಧವ್ಯ ಬೆಸೆಯುವ ಹಬ್ಬವಾಗಿದ್ದು, ಪ್ರತಿಯೊಬ್ಬರು ಬಣ್ಣದ ಓಕಳಿಯೊಂದಿಗೆ ಹಬ್ಬವನ್ನು ಸಂಭ್ರಮಿಸಿ ಆನಂದಿಸಬೇಕು ಎಂದು ಉದ್ಯಮಿ ಅಮರ ಧೂತ ಅಭಿಪ್ರಾಯ ವ್ಯಕ್ತಪಡಿಸಿದರು. ಪಟ್ಟಣದ ರಾಧಾಪೂರ ಪೇಟೆಯಲ್ಲಿ ಹೋಳಿ ಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಎಲ್ಲರೂ ಕೂಡಿ ಹಬ್ಬ ಆಚರಿಸಿದಲ್ಲಿ ಸಂಬಂಧಗಳು ಗಟ್ಟಿಯಾಗುತ್ತವೆ.

ಕನ್ನಡಪ್ರಭ ವಾರ್ತೆ ರಾಮದುರ್ಗ

ಹೋಳಿ ಹಬ್ಬ ಪರಸ್ಪರ ಬಾಂಧವ್ಯ ಬೆಸೆಯುವ ಹಬ್ಬವಾಗಿದ್ದು, ಪ್ರತಿಯೊಬ್ಬರು ಬಣ್ಣದ ಓಕಳಿಯೊಂದಿಗೆ ಹಬ್ಬವನ್ನು ಸಂಭ್ರಮಿಸಿ ಆನಂದಿಸಬೇಕು ಎಂದು ಉದ್ಯಮಿ ಅಮರ ಧೂತ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ರಾಧಾಪೂರ ಪೇಟೆಯಲ್ಲಿ ಹೋಳಿ ಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಎಲ್ಲರೂ ಕೂಡಿ ಹಬ್ಬ ಆಚರಿಸಿದಲ್ಲಿ ಸಂಬಂಧಗಳು ಗಟ್ಟಿಯಾಗುತ್ತವೆ. ಈ ಹಿನ್ನೆಲೆಯಲ್ಲಿ ರಾಧಾಪೂರ ಪೇಟೆಯ ಕಾಮಣ್ಣನ ಕಮಿಟಿ ಸದಸ್ಯರು ಕಳೆದ 11 ವರ್ಷಗಳಿಂದ ನಿರಂತರ ಕಾರ್ಯಕ್ರಮ ಆಯೋಜಿಸುವ ಮೂಲಕ ಹಬ್ಬದ ಕಳೆಯನ್ನು ಹೆಚ್ಚಿಸಿದ್ದಾರೆ ಎಂದರು.

ಕುಬೇರ ಗರಡಿಮನಿ ಮಾತನಾಡಿ, ಭಾರತೀಯ ಸಾಂಸ್ಕೃತಿಕ ಸಾಹಿತ್ಯಿಕ ಹಾಗೂ ಜಾನಪದ ಕಲೆಯನ್ನು ಬೆಳೆಸಲು ಆದ್ಯತೆ ನೀಡಲಾಗುತ್ತಿದೆ. ಅದರಲ್ಲೂ ಸ್ಥಳೀಯ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿ ಪ್ರೋತ್ಸಾಹ ನೀಡುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ನ್ಯಾಯವಾದಿ ರಾಜು ಕೋಪರ್ಡೆ, ನಾರಾಯಣ ಹೂಲಿ, ಪತ್ರಕರ್ತ ರಾಮಚಂದ್ರ ಯಾದವಾಡ, ವಿರೇಶ ಬಳಿಗೇರ, ಮಾತನಾಡಿದರು. ಜಗದೀಶ ಲಾಹೋಟಿ ಅಧ್ಯಕ್ಷತೆ ವಹಿಸಿದ್ದರು. ಕೃಷ್ಣಸ್ವಾಮಿ ದೇವಾಂಗಮಠ ಸಾನಿಧ್ಯ ವಹಿಸಿ, ಆಶೀರ್ವಚನ ನೀಡಿದರು. ಕಾರ್ಯಕ್ರಮ ಪ್ರಯುಕ್ತ ವಿವಿಧ ಸ್ಪರ್ಧೇ ಹಮ್ಮಿಕೊಂಡಿದ್ದು, ವಿಜೇತರಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಕಾರವಾರದ ಬಿ.ಎನ್.ಸೂರ್ಯಪ್ರಕಾಶ ನಿರ್ದೇಶನದ ಕಲ್ಪನಾ ರಶ್ಮಿ ಕಲಾಲೋಕ ತಂಡದಿಂದ ನೃತ್ಯ ವೈಭವ ಹಾಗೂ ವೆಂಕಟೇಶ ವೆಂಕಟಾಪೂರ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿದವು.

ಈ ವೇಳೆ ಮನೋಜ ಕಾಂಕಾಣಿ, ದಶರಥಪ್ಪ ಸೂಳಿಭಾವಿ, ರವಿ ಬಸರಗಿ, ಮುತ್ತು ಕರಿಚಣ್ನವರ, ವಿಷ್ಣು ಸೂಳಿಭಾವಿ, ಸಂತೋಷ ಶಾಲದಾರ, ರಾಮಣ್ಣ ಗರಡಿಮನಿ, ರಮೇಶ ಬೆನ್ನೂರ, ನೀಲಕಂಠ ಘಂಟಿ ಸೇರಿದಂತೆ ಇತರರು ವೇದಿಕೆಯಲ್ಲಿದ್ದರು. ಟಿ.ಜಿ.ಕರದಿನ ಸ್ವಾಗತಿಸಿದರು. ಅಶೋಕ ಖಾನಾಪೂರ ನಿರೂಪಿಸಿ, ವಂದಿಸಿದರು.