ಹೆಮ್ಮನಹಳ್ಳಿಯಲ್ಲಿ ಎಸ್.ಎಂ.ಕೃಷ್ಣರಿಗೆ ಶ್ರದ್ಧಾಂಜಲಿ

| Published : Dec 21 2024, 01:20 AM IST

ಸಾರಾಂಶ

ಎಸ್‌ಎಂಕೆ ಅವರು ತಾಲೂಕಿನಾದ್ಯಂತ ಹಲವು ಜನಪರ ಯೋಜನೆ ಜಾರಿಗೊಳಿಸಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಏತ ನೀರಾವರಿ ನಿರ್ಮಾಣ, ಸಕ್ಕರೆ ಕಾರ್ಖಾನೆ, ಕುಡಿಯುವ ನೀರು, ಪುರಸಭೆ, ಬಸ್ ನಿಲ್ದಾಣ ಇನ್ನಿತರ ಹತ್ತು ಹಲವು ಯೋಜನೆ ಕೈಗೊಂಡು ಮದ್ದೂರನ್ನು ಮಾದರಿ ತಾಲೂಕನ್ನಾಗಿಸಿದ ಕೀರ್ತಿ ಎಸ್.ಎಂ.ಕೃಷ್ಣ ಅವರಿಗೆ ಸಲ್ಲುತ್ತದೆ .

ಮದ್ದೂರು:ತಾಲೂಕಿನ ಹೆಮ್ಮನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಿಂದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಡೇರಿ ಆವರಣದಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಮಾಜಿ ಸಿಎಂ ಎಸ್.ಎಂ.ಕೃಷ್ಣರ ಭಾವಚಿತ್ರಕ್ಕೆ ತಾಪಂ ಮಾಜಿ ಅಧ್ಯಕ್ಷ ಕೆ.ಎನ್. ನಾಗೇಗೌಡ ಪುಷ್ಪ ನಮನ ಸಲ್ಲಿಸಿ ಮಾತನಾಡಿ, ಎಸ್.ಎಂ.ಕೃಷ್ಣ ಅವರು, ಸರಳ ಸಜ್ಜನಿಕೆಯ ಶುದ್ಧ ರಾಜಕಾರಣಿಯಾಗಿದ್ದರು. ಅವರ ಅಧಿಕಾರದ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು ಇಂದಿಗೂ ಜನಮಾಸದಲ್ಲಿ ಉಳಿದಿವೆ ಎಂದು ಬಣ್ಣಿಸಿದರು.

ಎಂಪಿಸಿಎಸ್ ಅಧ್ಯಕ್ಷ ಎಸ್.ಕೆ.ಕೃಷ್ಣ ಮಾತನಾಡಿ, ಎಸ್‌ಎಂಕೆ ಅವರು ತಾಲೂಕಿನಾದ್ಯಂತ ಹಲವು ಜನಪರ ಯೋಜನೆ ಜಾರಿಗೊಳಿಸಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಏತ ನೀರಾವರಿ ನಿರ್ಮಾಣ, ಸಕ್ಕರೆ ಕಾರ್ಖಾನೆ, ಕುಡಿಯುವ ನೀರು, ಪುರಸಭೆ, ಬಸ್ ನಿಲ್ದಾಣ ಇನ್ನಿತರ ಹತ್ತು ಹಲವು ಯೋಜನೆ ಕೈಗೊಂಡು ಮದ್ದೂರನ್ನು ಮಾದರಿ ತಾಲೂಕನ್ನಾಗಿಸಿದ ಕೀರ್ತಿ ಎಸ್.ಎಂ.ಕೃಷ್ಣ ಅವರಿಗೆ ಸಲ್ಲುತ್ತದೆ ಎಂದರು.

ಈ ವೇಳೆ ಉಪಾಧ್ಯಕ್ಷೆ ಸುಧಾ, ಸದಸ್ಯರಾದ ಶ್ರೀನಿವಾಸ್, ಕೃಷ್ಣೇಗೌಡ, ನಾಗರಾಜು, ಕೃಷ್ಣ, ಶಶಿಕಲಾ, ತಗಡೇಗೌಡ, ಮುಖಂಡರಾದ ಶಿವರಾಜು, ರಾಮಣ್ಣ, ಶಿವಣ್ಣ, ಜಯಶಂಕರ್ ಇತರರಿದ್ದರು.