ಮಧುಗಿರಿಯ ಪುರಾಣ ಪ್ರಸಿದ್ಧ ಶ್ರೀಲಕ್ಷ್ಮೀವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ 28ನೇ ವರ್ಷದ ಅದ್ಧೂರಿ ವೈಕುಂಠ ಏಕಾದಶಿ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಸಡಗರ -ಸಂಭ್ರದಿಂದ ಮಂಗಳವಾರ ನೆರವೇರಿತು.

ಮಧುಗಿರಿ: ಇಲ್ಲಿನ ಪುರಾಣ ಪ್ರಸಿದ್ಧ ಶ್ರೀಲಕ್ಷ್ಮೀವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ 28ನೇ ವರ್ಷದ ಅದ್ಧೂರಿ ವೈಕುಂಠ ಏಕಾದಶಿ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಸಡಗರ -ಸಂಭ್ರದಿಂದ ಮಂಗಳವಾರ ನೆರವೇರಿತು. ಶ್ರೀಲಕ್ಷ್ಮೀವೆಂಕಟರಣಸ್ವಾಮಿ ದೇವರು, ಅಲುವೇಲು ಮಂಗಮ್ಮ ಹಾಗೂ ಪದ್ಮಾವತಿ ದೇವರುಗಳಿಗೆ ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷವಾಗಿ ವಸ್ತ್ರಾಭರಣಗಳನ್ನು ತೊಡಿಸಿ ಹೂವಿನ ಅಲಂಕಾರ ಮಾಡಿದ್ದು ಭಕ್ತರನ್ನು ಸೆಳೆಯಿತು. ಈ ವೇಳೆ ಗೃಹ ಸಚಿವ ಡಾ.ಜಿ.ಪರಮೇಶ್ವರ್‌,ಎಂಎಲ್‌ಸಿ ಆರ್‌.ರಾಜೇಂದ್ರ, ಮಾಜಿ ಶಾಸಕ ಎಂ.ವಿ.ವೀರಭದ್ರಯ್ಯ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಎಸ್‌ಪಿ ಅಶೋಕ್‌, ಜಿಪಂ ಸಿಇಒ ಜಿ.ಪ್ರಭು, ಎಸಿ ಗೋಟೂರು ಶಿವಪ್ಪ, ತಹಸೀಲ್ದಾರ್ ಶ್ರೀನಿವಾಸ್, ಡಿವೈಎಸ್‌ಪಿ ಮಂಜುನಾಥ್‌, ಸಿಪಿಐ ಹನುಮಂತರಾಯಪ್ಪ, ನಿವೃತ್ತ ಐಎಎಸ್ ಅಧಿಕಾರಿ ಉಮಾಶಂಕರ್‌ ಇದ್ದರು.