ಸಾರಾಂಶ
- ಪೊಲೀಸ್ ಬಂದೋಬಸ್ತ್ । ಒಟ್ಟು 45 ಮೂರ್ತಿಗಳ ವಿಸರ್ಜನೆ - - - ಹೊನ್ನಾಳಿ: ಪಟ್ಟಣದ ಹೊರವಲಯದ ಕೆಎಸ್‌ಆರ್‌ಟಿಸಿ ಡಿಪೋದಲ್ಲಿ ಅಧಿಕಾರಿಗಳು ಹಾಗೂ ಎಲ್ಲ ಸಿಬ್ಬಂದಿ ಸೇರಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯನ್ನು ವಿಶೇಷ ಪೂಜೆ, ಬಸ್‌ನಲ್ಲಿ ಟಿ.ಬಿ.ವೃತ್ತದಿಂದ ಅದ್ಧೂರಿ ಮೆರವಣಿಗೆ ನಡೆಸಲಾಯಿತು.
ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ವೇಳೆ ಸಾರ್ವಜನಿಕರು ಸಹ ಅಧಿಕಾರಿ, ಸಿಬ್ಬಂದಿ ಜೊತೆ ಕುಣಿದು ಕುಪ್ಪಳಿಸಿದರು. ಉತ್ಸವದಲ್ಲಿ ನಟ ದಿ।। ಪುನೀತ್ ರಾಜ್‌ಕುಮಾರ್ ಭಾವಚಿತ್ರ ರಾರಾಜಿಸುತ್ತಿತ್ತು. ಮೆರವಣಿಗೆ ಬಳಿಕ ಶಾಸ್ತ್ರೋಕ್ತ ಪೂಜೆ ನೆರವೇರಿಸಿ, ತುಂಗಭದ್ರಾ ನದಿಯಲ್ಲಿ ಗಣೇಶ ಮೂರ್ತಿ ಜಲಸ್ಥಂಭನಗೊಳಿಸಲಾಯಿತು.ಕೆಎಸ್‌ಆರ್‌ಟಿಸಿ ಡಿಪೋ ವ್ಯವಸ್ಥಾಪಕ ರಾಮಚಂದ್ರಪ್ಪ, ಫಿದಾ ಗೌಸ್, ಲೋಕೇಶ್, ರವಿ, ಕಾಶೀನಾಥ್, ಸುರೇಶ್, ಚನ್ನಕೇಶವ, ಗದ್ದಿಗೇಶ್, ರಾಜು ಪಾಟೀಲ್ ಸೇರಿದಂತೆ ಬಸ್‌ಗಳ ಚಾಲಕರು, ನಿರ್ವಾಹಕರು, ಮೆಕ್ಯಾನಿಕ್‌ಗಳು, ಕಚೇರಿ ಸಿಬ್ಬಂದಿ ಉತ್ಸವದಲ್ಲಿ ಪಾಲ್ಗೊಂಡರು.
ಇತರೆ ಗಣೇಶಗಳ ಜಲಸ್ಥಂಭನ:ಪಟ್ಟಣದ ಹಿರೇಕಲ್ಮಠದ ಗಣಪತಿ, ದುರ್ಗಿಗುಡಿ ಬಡಾವಣೆ ಸೇರಿದಂತೆ ತಾಲೂಕಿನ ಸಾಸ್ವೇಹಳ್ಳಿ, ಕಮ್ಮಾರಗಟ್ಟೆ, ಕುಂದೂರು ಸೇರಿದಂತೆ ಒಟ್ಟು 45 ಗಣೇಶ ಮೂರ್ತಿಗಳ ಪ್ರತಿಷ್ಠಾಪನಾ ಸಮಿತಿಯವರು ಭವ್ಯ ಮೆರವಣಿಗೆಯಲ್ಲಿ ಪಾಲ್ಗೊಂಡರು. ಗಣಪತಿ ಮೂರ್ತಿಗಳ ಮೆರವಣಿಗೆ, ಜಲಸ್ಥಂಭನ ಹಿನ್ನೆಲೆ ಪೊಲೀಸ್ ಇನ್‌ಸ್ಪೆಕ್ಟರ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಅಹಿತಕರ ಘಟನೆ ಸಂಭವಿಸದಂತೆ ಶಾಂತಿಯುತವಾಗಿ ಭಕ್ತರು ವಿನಾಯಕ ಮೂರ್ತಿಗಳನ್ನು ನೀರಿನಲ್ಲಿ ವಿಸರ್ಜಿಸಿದರು.
- - --12ಎಚ್.ಎಲ್.ಐ2:ಹೊನ್ನಾಳಿ ಪಟ್ಟಣದ ಕೆಎಸ್ಆರ್‌ಟಿಸಿ ಬಸ್ ಡಿಪೋದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯನ್ನು ಸಾರಿಗೆ ಬಸ್‌ನಲ್ಲಿ ಮೆರವಣಿಗೆ ನಡೆಸಿ, ನದಿಯಲ್ಲಿ ಜಲಸ್ಥಂಭನಗೊಳಿಸಲಾಯಿತು.