ಸಾರಾಂಶ
ತರೀಕೆರೆ, ಅರಿವಳಿಕೆ ತಜ್ಞರನ್ನು ಸಮಾಜದ ಮುಖ್ಯ ವಾಹಿನಿಗೆ ತಂದು ಸನ್ಮಾನಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಸಾರ್ವಜನಿಕ ಆಸ್ಪತ್ರೆ ಅಡಳಿತ ವೈದ್ಯಾಧಿಕಾರಿ ಡಾ.ಟಿ.ಎಂ.ದೇವರಾಜ್ ಹೇಳಿದ್ದಾರೆ.
ತರೀಕೆರೆಯಲ್ಲಿ ವಿಶ್ವ ಅರಿವಳಿಕೆ ದಿನಾಚರಣೆ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ತರೀಕೆರೆಅರಿವಳಿಕೆ ತಜ್ಞರನ್ನು ಸಮಾಜದ ಮುಖ್ಯ ವಾಹಿನಿಗೆ ತಂದು ಸನ್ಮಾನಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಸಾರ್ವಜನಿಕ ಆಸ್ಪತ್ರೆ ಅಡಳಿತ ವೈದ್ಯಾಧಿಕಾರಿ ಡಾ.ಟಿ.ಎಂ.ದೇವರಾಜ್ ಹೇಳಿದ್ದಾರೆ.
ಸಾರ್ವಜನಿಕ ಆಸ್ಪತ್ರೆಯಲ್ಲಿ ಏರ್ಪಡಿಸಿದ್ದ ವಿಶ್ವ ಅರಿವಳಿಕೆ ದಿನಾಚರಣೆಯಲ್ಲಿ ಅರಿವಳಿಕೆ ತಜ್ಞರಾದ ಡಾ.ಗೀತಾ ಅವರನ್ನು ಸನ್ಮಾನಿಸಿ ಮಾತನಾಡಿದರು. ಅರಿವಳಿಕೆ ನೀಡುವುದು ಅತಿ ಸೂಕ್ಷ್ಮವಾದ ವಿಷಯ. ಯಾವ ಔಷಧಿ ಯಾವ ರೀತಿ ಕೆಲಸ ಮಾಡುತ್ತದೆ ಎನ್ನುವುದನ್ನು ವಿಚಾರ ಮಾಡಿ ಸರಿಯಾಗಿ ನೀಡಬೇಕಾಗುತ್ತದೆ. ಈ ಮುಂಚೆ ರೋಗಿಗೆ ಅನೇಕ ಕಾಯಿಲೆಗಳಿದ್ದರೂ ಕೂಡ ಯಾವ ರೋಗಿಗೆ ಯಾವುದು ಸೂಕ್ತ ಎಂದು ಪರಿಶೀಲಿಸಿ ಸೂಕ್ತ ವಾದಷ್ಟು ಮಾತ್ರ ನೀಡಬೇಕು. ಅರಿವಳಿಕೆ ಶಾಸ್ತ್ರ ತುಂಬಾ ಕಠಿಣ ಕೆಲಸವಾಗಿದೆ ಎಂದ ಅವರು ಈ ವೈದ್ಯರು ಆಸ್ಪತ್ರೆಯ ಅಪರೇಶನ್ ಥಿಯೇಟರ್.ನಲ್ಲಿ ಕರ್ತವ್ಯ ನಿರ್ವಹಿಸುವುದರಿಂದ ಸಾರ್ವಜನಿಕವಾಗಿ ಹೆಸರು ಮಾಡುವುದಿಲ್ಲ. ಅದುದರಿಂದ ಇಂಥಹ ವೈದ್ಯರನ್ನು ಸಮಾಜದ ಪ್ರಮುಖ ನೆಲೆಗೆ ತಂದು ಸನ್ಮಾನಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಅವರು ಹೇಳಿದರು.ಡಾ. ಗೀತಾ ಅವರು ಅರಿವಳಿಕೆ ಶಾಸ್ತ್ರದ ಬಗ್ಗೆ ವಿವರಣೆ ನೀಡಿದರು. ವಿಶ್ವ ಅರಿವಳಿಕೆ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ.ಗೀತಾ ಅವರನ್ನು ಸನ್ಮಾನಿಸಲಾಯಿತು.
ಸಾರ್ವಜನಿಕ ಆಸ್ಪತ್ರೆಯ ಡಾ.ಭಾಗ್ಯಲಕ್ಷ್ಮಿ, ಎಲ್ಲಾ ವೈದ್ಯರು ಮತ್ತು ಸಿಬ್ಬಂದಿ, ಸಾರ್ವಜನಿಕರು ಭಾಗವಹಿಸಿದ್ದರು.18ಕೆಟಿಆರ್.ಕೆ.4ಃ ತರೀಕೆರೆಯಲ್ಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿಶ್ವ ಅರಿವಳಿಕೆ ದಿನಾಚರಣೆಯಲ್ಲಿ ಡಾ.ಗೀತಾ ಅವರನ್ನು ಸನ್ಮಾನಿಸಲಾಯಿತು. ಸಾರ್ವಜನಿಕ ಆಸ್ಪತ್ರೆ ಅಡಳಿತ ವೈದ್ಯಾಧಿಕಾರಿ ಡಾ.ಟಿ.ಎಂ.ದೇವರಾಜ್ ಮತ್ತಿತರರು ಇದ್ದರು.