ಭೀಕರ ಅಪಘಾತ: ಮಹಿಳೆ ಸಾವು

| Published : Mar 24 2024, 01:31 AM IST

ಸಾರಾಂಶ

ಲಾರಿ ಮತ್ತು ಬೈಕ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಮಹಿಳೆಯೋರ್ವರು ಸ್ಥಳದಲ್ಲೇ ಮೃತಪಟ್ಟು ಸಹಾಯಕ ಪೊಲೀಸ್ ರಕ್ಷಣಾಧಿಕಾರಿಗಳ ಅಂಗರಕ್ಷಕ ಪೇದೆಯೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕಡೂರು ತಾಲೂಕಿನ ತಂಗಲಿ ಗೇಟ್ ಸಮೀಪ ನಡೆದಿದೆ.

ಕಡೂರು: ಲಾರಿ ಮತ್ತು ಬೈಕ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಮಹಿಳೆಯೋರ್ವರು ಸ್ಥಳದಲ್ಲೇ ಮೃತಪಟ್ಟು ಸಹಾಯಕ ಪೊಲೀಸ್ ರಕ್ಷಣಾಧಿಕಾರಿಗಳ ಅಂಗರಕ್ಷಕ ಪೇದೆಯೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕಡೂರು ತಾಲೂಕಿನ ತಂಗಲಿ ಗೇಟ್ ಸಮೀಪ ನಡೆದಿದೆ.

ಶಿವಮೊಗ್ಗ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ತಂಗಲಿ ಗೇಟ್ ಸಮೀಪ ಈ ದುರ್ಘಟನೆ ಸಂಭವಿಸಿದೆ. ದಾವಣಗೆರೆ ಜಿಲ್ಲಾ ಪೊಲೀಸ್ ಸಹಾಯಕ ರಕ್ಷಣಾಧಿಕಾರಿಗಳ ಅಂಗರಕ್ಷಕ ಜಯಣ್ಣ ಎಂಬುವರು ತಮ್ಮ ಪತ್ನಿ ಬಂಜೇನಹಳ್ಳಿ ಗ್ರಾಮದಿಂದ ಸುಮರವರೊಂದಿಗೆ ಬೈಕಿನಲ್ಲಿ ಕಡೂರಿಗೆ ತೆರಳಲು ಬರುವಾಗ ಎದುರುಗಡೆಯಿಂದ ಬಂದ ಲಾರಿ ಬೈಕಿಗೆ ಗುದ್ಧಿದ ಪರಿಣಾಮ ಸುಮಾ( 26) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಗನ್ ಮೆನ್ ಜಯಣ್ಣನವರ (35) ಸ್ಥಿತಿ ಕೂಡ ಗಂಭೀರವಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಶಿವಮೊಗ್ಗದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿಸಿದ ಕಡೂರು ಪೋಲೀಸ್ ಠಾಣೆ ಪಿಎಸೈ ಧನಂಜಯರವರು ಪೊಲೀಸರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮುಂದಿನ ತನಿಖೆ ಕೈಗೊಂಡಿದ್ದಾರೆ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.