ರಾಷ್ಟ್ರೀಯ ಹೆದ್ದಾರಿ ೭ನೇ ಹೊಸಕೋಟೆಯಲ್ಲಿ ಬಳಿಯಲ್ಲಿ ಎರಡು ಕಾರು ಮತ್ತು ರಾಜ್ಯ ಸಾರಿಗೆ ಸಂಸ್ಥೆ ಬಸ್ ನಡುವೆ ಸರಣಿ ಅಪಘಾತ ಸಂಭವಿಸಿದೆ.
ಕನ್ನಡಪ್ರಭವಾರ್ತೆ ಸುಂಟಿಕೊಪ್ಪ
ರಾಷ್ಟ್ರೀಯ ಹೆದ್ದಾರಿ ೭ನೇ ಹೊಸಕೋಟೆಯಲ್ಲಿ ಬಳಿಯಲ್ಲಿ ಎರಡು ಕಾರು ಮತ್ತು ರಾಜ್ಯ ಸಾರಿಗೆ ಸಂಸ್ಥೆ ಬಸ್ ನಡುವೆ ಸರಣಿ ಅಪಘಾತ ಸಂಭವಿಸಿದೆ. ಕುಶಾಲನಗರದಿಂದ ಸುಂಟಿಕೊಪ್ಪ ಕಡೆಗೆ ಬರುತ್ತಿದ್ದ ರಮೇಶ್ ಶೇಟ್ ಅವರು ತಮ್ಮ ಕಾರನ್ನು ಕಲ್ಲುಕ್ವಾರಿ ರಸ್ತೆಯತ್ತ ತಿರುಗಿಸಿದಾಗ ಹಿಂಬದಿಯಿಂದ ಬರುತ್ತಿದ್ದ ರಾಜ್ಯ ಸಾರಿಗೆ ಸಂಸ್ಥೆ ಬಸ್ ಕಾರಿಗೆ ಡಿಕ್ಕಿಯಾಗಿದೆ. ಇದೇ ಸಂದರ್ಭ ಸುಂಟಿಕೊಪ್ಪದಿಂದ ಕುಶಾಲನಗರ ಕಡೆಗೆ ತೆರಳುತ್ತಿದ್ದ ಬಲೆನೋ ಕಾರು ರಮೇಶ್ ಅವರ ರಿಟ್ಜ್ ಕಾರಿಗೆ ಡಿಕ್ಕಿಯಾಗಿದ್ದು, ರಿಟ್ಜ್ ಕಾರು ಜಖಂಗೊಂಡಿದೆ ಈ ಮೂರು ವಾಹನಗಳ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.------------------------------------
8ರಂದು ಕೊಡಗು ಜಿಲ್ಲಾ ಸಾಹಿತ್ಯ ಪರಿಷತ್ತು ಘಟಕದ ಪದಗ್ರಹಣಕನ್ನಡಪ್ರಭವಾರ್ತೆ ವಿರಾಜಪೇಟೆ
ರಾಜ್ಯ ಸರ್ಕಾರಿ ನೌಕರರ ಸಂಸ್ಕೃತಿ ಮತ್ತು ಸಾಹಿತ್ಯ ಪರಿಷತ್ತು ಕೊಡಗು ಜಿಲ್ಲಾ ಘಟಕದ ಪದಗ್ರಹಣ 8 ರಂದು ಮಧ್ಯಾಹ್ನ 2 ಗಂಟೆಗೆ ವಿರಾಜಪೇಟೆಯ ಅಂಬೇಡ್ಕರ್ ಭವನದಲ್ಲಿ ನೆರವೇರಲಿದೆ. ಮಡಿಕೇರಿ ಜಿಲ್ಲಾ ಖಜಾನೆ ಉಪ ನಿರ್ದೇಶಕ ಡಾ. ರಘುನಾಥ ಬಿ. ಎನ್. ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ. ರಾಜ್ಯ ಉಪಾಧ್ಯಕ್ಷ ಗಣೇಶ್ ನಿಲುವಾಗಿಲು ಪ್ರಾಸ್ತಾವಿಕವಾಗಿ ಮಾತನಾಡುವರು. ಮುಖ್ಯ ಅತಿಥಿಗಳಾಗಿ ರಾಜ್ಯ ಘಟಕದ ಮಹಾ ಪೋಷಕ ಮಲ್ಲಿಕಾರ್ಜುನ ತೊದಲಬಾಗಿ, ಗೌರವಾಧ್ಯಕ್ಷ ಎಲ್ ಐ ಲಕ್ಕಮ್ಮನವರ್, ರಾಜ್ಯಾಧ್ಯಕ್ಷ ರಮಾ ಆರ್, ಪ್ರಧಾನ ಕಾರ್ಯದರ್ಶಿ ಪರ್ವೀನ್ ಬಾನು, ಪ್ರೊ. ಬಸವರಾಜು ಕೆ. ಹಿರಿಯ ಉಪಾಧ್ಯಕ್ಷ ಶಾಮಸುಂದರ್, ರಾಜ್ಯ ಹಾಗೂ ವಿವಿಧ ಜಿಲ್ಲೆಗಳ ಜಿಲ್ಲಾ ಪದಾಧಿಕಾರಿಗಳು ಪಾಲ್ಗೊಳ್ಳುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷೆ ಕಮಲಮ್ಮ ಅವರು ವಹಿಸುವರು. ಸಾಹಿತ್ಯ, ಕಲೆ, ಶಿಕ್ಷಣ, ಕ್ರೀಡೆ, ಮಾಧ್ಯಮ, ಸಮಾಜ ಸೇವೆ ಹಾಗೂ ಇತರೆ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿರುವ ಸಾಧಕರಿಗೆ ಆದರ್ಶ ಸೇವಾ ರತ್ನ ನೀಡಲಾಗುವುದು. ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ರಾಜ್ಯ ಉಪಾಧ್ಯಕ್ಷ ಗಣೇಶ್ ನಿಲುವಾಗಿಲು ತಿಳಿಸಿದ್ದಾರೆ.