ಜನತಾ ಕಾಲೊನಿ ನಿವಾಸಿ ಎಲಿಜಬೆತ್ (ಎಲ್ಸಿ) ಎಂಬವರ ಮನೆ ಕುಸಿದಿದ್ದು, ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಅಧ್ಯಕ್ಷ ಜಾನ್ಸನ್ ಪಿಂಟೋ ಹಾಗೂ ಪದಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿ, ಸಹಾಯಹಸ್ತ ನೀಡಿದರು.
ಸುಂಟಿಕೊಪ್ಪ: ಜನತಾ ಕಾಲೊನಿ ನಿವಾಸಿ ಎಲಿಜಬೆತ್ (ಎಲ್ಸಿ) ಎಂಬವರ ಮನೆ ಕುಸಿದಿದ್ದು, ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಅಧ್ಯಕ್ಷ ಜಾನ್ಸನ್ ಪಿಂಟೋ ಹಾಗೂ ಪದಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿ, ಸಹಾಯಹಸ್ತ ನೀಡಿದರು.
ಸಂತ್ರಸ್ತರಿಗೆ ೩೦ ಸಾವಿರ ರು. ಧನ ಸಹಾಯ ನೀಡಿ ಮುಂದಿನ ದಿನಗಳಲ್ಲಿ ಸಂಘದ ವತಿಯಿಂದ ನೆರವು ನೀಡುವ ಭರವಸೆ ನೀಡಿದರು.ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಗೌರವಾಧ್ಯಕ್ಷ ಜೋಕಿಂವಾಸ್, ಸ್ಥಾಪಕ ಅಧ್ಯಕ್ಷ ವಿ.ಎ. ಲಾರೆನ್ಸ್, ಜಿಲ್ಲಾ ಉಪಾಧ್ಯಕ್ಷ ಮೈಕಲ್, ಜಿಲ್ಲಾ ಖಜಾಂಜಿ ಜೇಮ್ಸ್ ಡಿಸೋಜ, ಜಿಲ್ಲಾ ಯುವ ಘಟಕ ಅಧ್ಯಕ್ಷ ಸಾಲಂ, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಬೆನಜಿಲ್ ಜೇಮ್ಸ್, ಸದಸ್ಯರಾದ ಪಿ.ಎಫ್. ಸಬಾಸ್ಟೀನ್, ಪಿ.ಎಂ. ಬಿಜು, ಮಹಿಳಾ ವಿಭಾಗದ ಉಪಾಧ್ಯಕ್ಷೆ ರೋಸ್‌ಮೇರಿ ರಾಡ್ರಿಗಸ್, ಪ್ರಶಾಂತ್ ಇದ್ದರು.