ಸಾರಾಂಶ
ಸುಶ್ಮಿತಾಳ ತಂದೆ ಚಿಕ್ಕ ವಯಸ್ಸಿನಲ್ಲಿ ತೀರಿ ಹೋಗಿದ್ದರಿಂದ ಸುಶ್ಮಿತಾಳನ್ನು ತಟ್ಟೆಕೆರೆ ಗ್ರಾಮದ ಅಜ್ಜಿ ಮನೆಯಲ್ಲಿ ಸಾಕಿ ಮದುವೆ ಮಾಡಿದ್ದರು. ನ.೧೧ರ ಮಂಗಳವಾರ ಬೆಳಗ್ಗೆ ೯ ಗಂಟೆಯಲ್ಲಿ ತಟ್ಟೆಕೆರೆಯ ಅಜ್ಜಿ ಮನೆಯ ಬಾತ್ ರೂಮ್‌ನಲ್ಲಿ ಸುಶ್ಮಿತಾಳ ಶವ ಬಿದ್ದಿದ್ದು, ಇದನ್ನು ಅವರ ಅಜ್ಜಿ ಸೀತಮ್ಮ ಹಾಗೂ ತಾಯಿ ಸುಮಿತ್ರ ಅವರು ನೋಡಿ ಗ್ರಾಮಸ್ಥರಿಗೆ ವಿಚಾರ ತಿಳಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಹೊಳೆನರಸೀಪುರ: ತಾಲೂಕಿನ ತಟ್ಟೆಕೆರೆ ಗ್ರಾಮದ ತನ್ನ ಅಜ್ಜಿ ಸೀತಮ್ಮ ಎಂಬುವರ ಮನೆಯಲ್ಲಿ ಗೂರಮಾರನಹಳ್ಳಿ ಗ್ರಾಮದ ರಾಜು ಎಂಬುವರ ಪತ್ನಿ ಸುಶ್ಮಿತಾ(೨೬) ಅವರ ಮೃತ ದೇಹವು ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಸುಶ್ಮಿತಾ ಅವರ ಕೆನ್ನೆ ಹಾಗೂ ತುಟಿ ಹತ್ತಿರ ರಕ್ತ ಹೆಪ್ಪುಗಟ್ಟಿದ ಗಾಯವಾಗಿದ್ದು, ಸುಶ್ಮಿತಾಳನ್ನು ಬೇರೆ ಎಲ್ಲೋ ಕೊಲೆ ಮಾಡಿ, ಮನೆಯಿಂದ ಹೊರಗೆ ಇರುವ ಬಾತ್‌ರೂಮಿಗೆ ಮೃತದೇಹವನ್ನು ತಂದು ಹಾಕಿರಬಹುದು ಎಂದು ಕೆಲವರು ಸಂಶಯ ವ್ಯಕ್ತಪಡಿಸಿದ್ದಾರೆ.ತಾಲೂಕಿನ ತಟ್ಟೆಕೆರೆ ಗ್ರಾಮದ ದಿ. ರವಿಕುಮಾರ್ ಸುಮಿತ್ರ ದಂಪತಿ ಪುತ್ರಿ ಸುಶ್ಮಿತಾ ಅವರನ್ನು ಚನ್ನರಾಯಪಟ್ಟಣ ತಾ. ಕಸಬಾ ಹೋಬಳಿ ಗೂರಮಾರನಹಳ್ಳಿ ಗ್ರಾಮದ ರಾಜು ಎಂಬುವರಿಗೆ ೫ ವರ್ಷಗಳ ಹಿಂದೆ ಮದುವೆ ಮಾಡಿಕೊಟ್ಟಿದ್ದು, ಮೂರು ಗಂಡು ಮಕ್ಕಳಿದ್ದಾರೆ. ಸುಶ್ಮಿತಾ ಹಾಗೂ ರಾಜು ನಡುವೆ ಮನಸ್ತಾಪವಿದ್ದು, ಇಬ್ಬರ ನಡುವೆ ಹೊಂದಾಣಿಕೆ ಇಲ್ಲದೇ ಪದೇ ಪದೇ ಜಗಳ ಮಾಡಿಕೊಳ್ಳುತ್ತಿದ್ದರು ಎನ್ನಲಾಗಿದೆ. ಗಂಡ ಹೆಂಡತಿ ನಡುವೆ ಹೊಂದಾಣಿಕೆ ಇಲ್ಲದ ಕಾರಣ ಮೂರು ಮಕ್ಕಳನ್ನು ತಾಯಿ ಮನೆಯಲ್ಲಿ ಸಾಕಿಕೊಂಡಿದ್ದರು.
ಸುಶ್ಮಿತಾಳ ತಂದೆ ಚಿಕ್ಕ ವಯಸ್ಸಿನಲ್ಲಿ ತೀರಿ ಹೋಗಿದ್ದರಿಂದ ಸುಶ್ಮಿತಾಳನ್ನು ತಟ್ಟೆಕೆರೆ ಗ್ರಾಮದ ಅಜ್ಜಿ ಮನೆಯಲ್ಲಿ ಸಾಕಿ ಮದುವೆ ಮಾಡಿದ್ದರು. ನ.೧೧ರ ಮಂಗಳವಾರ ಬೆಳಗ್ಗೆ ೯ ಗಂಟೆಯಲ್ಲಿ ತಟ್ಟೆಕೆರೆಯ ಅಜ್ಜಿ ಮನೆಯ ಬಾತ್ ರೂಮ್‌ನಲ್ಲಿ ಸುಶ್ಮಿತಾಳ ಶವ ಬಿದ್ದಿದ್ದು, ಇದನ್ನು ಅವರ ಅಜ್ಜಿ ಸೀತಮ್ಮ ಹಾಗೂ ತಾಯಿ ಸುಮಿತ್ರ ಅವರು ನೋಡಿ ಗ್ರಾಮಸ್ಥರಿಗೆ ವಿಚಾರ ತಿಳಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.ಪಟ್ಟಣದ ಗ್ರಾಮಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
;Resize=(128,128))
;Resize=(128,128))
;Resize=(128,128))