ಸಾರಾಂಶ
ಮಡಿಕೇರಿ : ಮಂಜಿನ ನಗರಿ ಮಡಿಕೇರಿಯ ಪ್ರಮುಖ ಪ್ರವಾಸಿ ತಾಣವಾದ ರಾಜಾಸೀಟ್ ನ ಪ್ರವೇಶದ್ವಾರದಲ್ಲಿ ಅಳವಡಿಸಿದ್ದ ನಾಮಫಲಕ ಜೋರಾದ ಗಾಳಿ ಮಳೆಗೆ ಧರೆಗುರುಳಿದೆ.
ಘಟನೆ ಸಂಧರ್ಭ ಸ್ಥಳದಲ್ಲಿ ಯಾರೂ ಇಲ್ಲದೆ ಇದ್ದುದರಿಂದ ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ. ತೋಟಗಾರಿಕೆ ಇಲಾಖೆಯಿಂದ ಸದ್ಯಕ್ಕೆ ನಾಮಫಲಕ ತೆರವುಗೊಳಿಸಲಾಗಿದೆ.-----------------------------------------
ಸಂಪಾಜೆ ಶಾಲೆ ಕಟ್ಟಡದಲ್ಲಿ ಕೊಯನಾಡು ಶಾಲೆ ವಿದ್ಯಾರ್ಥಿಗಳಿಗೆ ಪಾಠಕನ್ನಡಪ್ರಭ ವಾರ್ತೆ ಮಡಿಕೇರಿ
ಭಾರಿ ಮಳೆಯಿಂದ ಬರೆ ಕುಸಿದು ಹಾನಿಯಾಗಿರುವ ಕೊಯನಾಡು ಶಾಲೆಯ ವಿದ್ಯಾರ್ಥಿಗಳಿಗೆ ಸಂಪಾಜೆ ಶಾಲೆ ಕಟ್ಟಡದಲ್ಲಿ ಮಂಗಳವಾರದಿಂದ ಶಿಕ್ಷಣ ಪ್ರಾರಂಭ ಆಗಲಿದೆ.ಬರೆಕುಸಿದಿದ್ದು ಹಾನೀಗೀಡಾಗಿದ್ದ ಕೊಯನಾಡು ಶಾಲಾ ಕಟ್ಟಡ ಶನಿವಾರದಂದು ಉಸ್ತುವಾರಿ ಸಚಿವ ಎಸ್ ಬೋಸ್ ರಾಜ್ ಹಾಗೂ ವಿರಾಜಪೇಟೆ ಶಾಸಕ ರಾದ ಎ.ಎಸ್ ಪೊನ್ನಣ್ಣ ಭೇಟಿ ನೀಡಿ ಪರಿಶೀಲಿಸಿದ ವೇಳೆ ಶಿಕ್ಷಣ ಇಲಾಖಾಧಿಕಾರಿಗಳಿಗೆ ಬದಲಿ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದ್ದರು.
ಈ ಹಿನ್ನೆಲೆ ಸೋಮವಾರ ಕರೆದ ಶಾಲೆ ಎಸ್‌ಡಿಎಂಸಿ ಪೋಷಕರು, ಸಂಪಾಜೆ ಗ್ರಾಮ.ಪಂಚಾಯಿತಿ ಅಧ್ಯಕ್ಷೆ ಹಾಗೂ ಇಲಾಖಾಧಿಕಾರಿಗಳ ಸಭೆಯಲ್ಲಿ ಜಿಲ್ಲಾ ಉಪನಿರ್ದೇಶಕರು ಹಾಗೂ ಸಂಪಾಜೆ ಗ್ರಾ.ಪಂ ಅಧ್ಯಕ್ಷೆ ನಾಳೆಯಿಂದಲೇ ಸಂಪಾಜೆ ಸ.ಹಿ.ಪ್ರಾ.ಶಾಲೆಯ ಕಟ್ಟಡದಲ್ಲಿ ಮಕ್ಕಳ ಶಿಕ್ಷಣ ಮುಂದುವರೆಸುವಂತೆ ನಿರ್ಣಯ ಕೈಗೊಳ್ಳಲಾಯಿತು.ಪೋಷಕರ ವಿರೋಧ: ಸಂಪಾಜೆ ತೆರಳಲು ಸೂಕ್ತ ವಾಹನ ವ್ಯವಸ್ಥೆ ಇಲ್ಲದಿದ್ದು, ವಾಹನ ವ್ಯವಸ್ಥೆ ಕಲ್ಪಿಸುವಂತೆ ಪೋಷಕರು ಒತ್ತಾಯಿಸಿದರು. ವಾಹನ ವ್ಯವಸ್ಥೆ ಕಲ್ಪಿಸಲು ಇಲಾಖೆ ಹಾಗೂ ಗ್ರಾ.ಪಂ ಯಾವುದೇ ನಿಧಿ ಇಲ್ಲದಿರುವ ಬಗ್ಗೆ ಅಧಿಕಾರಿ ಹಾಗೂ ಗ್ರಾ.ಪಂ ಅಧ್ಯಕ್ಷರಿಂದ ಮಾಹಿತಿ ನೀಡಿದರು. ಮಂಗಳವಾರ ಸಂಪಾಜೆ ಶಾಲೆ ಕಟ್ಟಡದಲ್ಲಿ ಶಿಕ್ಷಣ ಮುಂದುವರೆಸುವುದಾಗಿ ಕೊಯನಾಡು ಶಾಲೆಯ ಮುಖ್ಯಶಿಕ್ಷಕಿ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.